30 ಕೆಎಂಪಿಎಲ್ ಮೈಲೇಜ್.. ಹೊಸ ರೂಪದಲ್ಲಿ ಬರುತ್ತೆ ಆಲ್ಟೋ ಕಾರು.. ಅತಿ ಕಡಿಮೆ ಬೆಲೆ?

'ಮಾರುತಿ ಸುಜುಕಿ' ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ವಿಶ್ವದಾದ್ಯಂತ ಹತ್ತಾರು ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಎಲ್ಲ ದೇಶಗಳಲ್ಲಿಯೂ ಸಾಮಾನ್ಯ ವರ್ಗದ ಜನರು ಇಷ್ಟಪಟ್ಟು ಖರೀದಿ ಮಾಡುವ ಆಲ್ಟೋ (Alto) ಹ್ಯಾಚ್‌ಬ್ಯಾಕ್‌ನ್ನು ಹೊಸ ರೂಪದಲ್ಲಿ ಮಾರಾಟಕ್ಕೆ ತರಲು ತೆರೆಮರೆಯಲ್ಲಿ ಸಿದ್ದತೆಯನ್ನು ನಡೆಸುತ್ತಿದೆ ಎಂದು ವರದಿಯಾಗಿದೆ. ಎಲ್ಲವು ಅಂದುಕೊಂಡಂತೆ ನಡೆದಿರೆ, ಮುಂಬರುವ ವರ್ಷಗಳಲ್ಲಿ ಈ ಕಾರು ಗರಿಷ್ಠ ಮೈಲೇಜ್ ಹಾಗೂ ಕೈಗೆಟುಕುವ ಬೆಲೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ನೂತನ ಸುಜುಕಿ ಆಲ್ಟೋ (Suzuki Alto) ಹ್ಯಾಚ್‌ಬ್ಯಾಕ್‌ನ್ನು ಮತ್ತಷ್ಟು ಹಗುರವಾಗಿಸಲು ಕಂಪನಿ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಈ ಕಾರಿನ ತೂಕವನ್ನು 100 ಕೆಜಿಯಷ್ಟು ಕಡಿಮೆಗೊಳಿಸುವ ಸಂಭವವಿದೆ. ಸದ್ಯವಿರುವ ಆಲ್ಟೋ 680 ರಿಂದ 760 ಕೆಜಿ ತೂಕವನ್ನು ಹೊಂದಿದ್ದು, ಹೊಸ ಕಾರು 580 ರಿಂದ 660 ಕೆಜಿ ತೂಕದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.

New Suzuki Alto Expected Launch on 2026 100 Kg Lighter 30 Km Mileage Low Price Details

ಮುಂಬರುವ ಹೊಸ ಸುಜುಕಿ ಆಲ್ಟೋ ಕಾರು ಸಾಮಾನ್ಯ ಪೆಟ್ರೋಲ್ ಹಾಗೂ ಮೈಲ್ಡ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಎಂಜಿನ್ ಆಯ್ಕೆಯನ್ನು ಹೊಂದಿರುವ ಸಾಧ್ಯತೆಯಿದೆ. ಇದರೊಂದಿಗೆ 30 ಕೆಎಂಪಿಎಲ್ ಮೈಲೇಜ್ ಕೊಡಲಿದೆ ಎನ್ನಲಾಗಿದೆ. ಪ್ರಸ್ತುತವಿರುವ ಆಲ್ಟೋ ಹ್ಯಾಚ್‌ಬ್ಯಾಕ್‌ ಸರಾಸರಿ 25.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ನೂತನ ಸುಜುಕಿ ಆಲ್ಟೋ ಜಪಾನ್ ಮಾರುಕಟ್ಟೆಯಲ್ಲಿ 2026ರಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಮರುವರ್ಷ ಅಂದರೆ 2027ರಲ್ಲಿ ಮಾರಾಟಕ್ಕೆ ಬರಬಹುದು ಎಂದು ಹೇಳಲಾಗಿದೆ. ಜೊತೆಗೆ ಅತಿ ಕಡಿಮೆ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗುವ ಸಾಧ್ಯತೆಯಿದ್ದು, ಸರಿ ಸುಮಾರು ರೂ.4 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಲಿದೆ ಎನ್ನಲಾಗಿದೆ.

New Suzuki Alto Expected Launch on 2026 100 Kg Lighter 30 Km Mileage Low Price Details

ಭಾರತದಲ್ಲಿ ಸಿಗುವ ಮಾರುತಿ ಸುಜುಕಿ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ ವಿಶೇಷತೆಗಳೇನು: ಈ ಕಾರು ಕನಿಷ್ಠ ರೂ.4.23 ಲಕ್ಷ ಹಾಗೂ ಗರಿಷ್ಠ ರೂ.6.21 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದು 1-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 24.39 ರಿಂದ 33.85 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 4 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.

ಈ ಕಾರು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7-ಇಂಚು), ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, 4 ಸ್ಪೀಕರ್‌ ಮ್ಯೂಸಿಕ್ ಸಿಸ್ಟಮ್ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಹಾಗೂ 3-ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಪಡೆದಿದೆ.

New Suzuki Alto Expected Launch on 2026 100 Kg Lighter 30 Km Mileage Low Price Details

ಮಾರುತಿ ಸುಜುಕಿ ಆಲ್ಟೊ ಕೆ10 ಕಾರಿನ ಮಾರಾಟ ವಿವರ: ಕಳೆದ ತಿಂಗಳು (ಫೆಬ್ರವರಿ-2025) ಮಾರುತಿ ಸುಜುಕಿ ಕಂಪನಿಯು 8541 ಯುನಿಟ್ ಆಲ್ಟೋ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ 11,723 ಯುನಿಟ್‌ಗಳನ್ನು ಮಾರಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 27.14% ಕುಸಿತವಾಗಿದೆ.

Take a Poll

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 21, 2025, 10:27 [IST]
English summary
New suzuki alto expected launch on 2026 100 kg lighter 30 km mileage low price details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+