300+ ಕಿಲೋಮೀಟರ್ ರೇಂಜ್.. ಬೈಕ್‌ನ ಬೆಲೆಗೆ ಹೊಸ Tata Nano EV ಬರುತ್ತಾ?

ದೇಶದ ಖ್ಯಾತ ಉದ್ಯಮಿ ದಿವಂಗತ ರತನ್ ಟಾಟಾ ಅವರ ಕನಸಿನ ಕಾರಾಗಿದ್ದ ಟಾಟಾ ನ್ಯಾನೋ (Tata Nano) ಮಾರಾಟವನ್ನು ಸ್ಥಗಿತಗೊಳಿಸಿ ಹಲವು ವರ್ಷಗಳೇ ಕಳೆದಿವೆ. ಆದರೂ ಈ ಕಾರಿನ ಮೇಲಿರುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್ ಇದ್ದು, ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಜಮಾನ ಆರಂಭವಾಗಿದೆ. ಟಾಟಾ ಸೇರಿದಂತೆ ಹಲವು ವಾಹನ ತಯಾರಕ ಕಂಪನಿಗಳು, ವಿವಿಧ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳನ್ನು ಬಿಡುಗಡೆಗೊಳಿಸುತ್ತಿವೆ.

ಈಗ ಎಲೆಕ್ಟ್ರಿಕ್ ಕಾರುಗಳು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡು ಖರೀದಿಗೆ ಲಭ್ಯವಾಗುತ್ತಿರುವುದು ನಿಜವಾದರೂ, ಇವು ಸ್ವಲ್ಪ ದುಬಾರಿಯಾಗಿರುವುದರಿಂದ ಹಲವರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕರು, ಟಾಟಾ ಕಂಪನಿ ನ್ಯಾನೋ ಕಾರನ್ನು ಮತ್ತೆ ಎಲೆಕ್ಟ್ರಿಕ್ ರೂಪದಲ್ಲಿ ಮಾರಾಟಕ್ಕೆ ತಂದರೆ ಚೆನ್ನಾಗಿರುತ್ತದೆ ಎಂಬ ಆಶಾಭಾವವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಈ ಕಾರನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಮತ್ತೆ ಮಾರಾಟಕ್ಕೆ ತರುವ ಸಣ್ಣ ಸುಳಿವು ಸಹ ಕಂಪನಿ ಕಡೆಯಿಂದ ಲಭ್ಯವಿಲ್ಲ.

Tata Nano Ev If Launch Expected Price Range And Features Details

ಈ ಹಿಂದೆ, ಟಾಟಾ ನ್ಯಾನೋ ಇವಿ (Tata Nano EV) ಬಿಡುಗಡೆಯಾದರೆ, ಇದೇ ರೀತಿಯಲ್ಲಿ ಇರಬಹುದು ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ಎಲ್ಲವು ಅಂದುಕೊಂಡಂತೆ ನಡೆದರೆ, ನೂತನ ನ್ಯಾನೋ ಎಲೆಕ್ಟ್ರಿಕ್ ಕಾರು ಅತಿ ಕಡಿಮೆ ಬೆಲೆಗೆ ಮಾರಾಟಕ್ಕೆ ಬರುವ ಸಾಧ್ಯತೆಯಿದ್ದು, ಸರಿ ಸುಮಾರು ರೂ.5 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇದು ಪ್ರೀಮಿಯಂ ಬೈಕ್‌ನ ದರಕ್ಕಿಂತ ಅಗ್ಗವಾಗಿರಲಿದೆ.

ಹೊಸ ಟಾಟಾ ನ್ಯಾನೋ ಇವಿ ಶಕ್ತಿಯುತವಾದ 40 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 300 ಕಿಲೋಮೀಟರ್‌ಗೂ ಅಧಿಕ ರೇಂಜ್ (ಮೈಲೇಜ್) ನೀಡಬಹುದು ಎಂದು ಹೇಳಲಾಗಿದೆ. ಇದರಲ್ಲಿ ಉಪಯೋಗ ಮಾಡಲಾದ ಬ್ಯಾಟರಿಯೂ ಆದಷ್ಟು ಬೇಗನೆ ಚಾರ್ಜ್ ಆಗಲಿದೆ ಎನ್ನಲಾಗಿದೆ.

Tata Nano Ev If Launch Expected Price Range And Features Details

ನೂತನ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆಗಳಿಗೂ ಸಾಕ್ಷಿಯಾಗಲಿದೆ ಎಂದು ಹೇಳಲಾಗಿದೆ. ಈ ಕಾರು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಡಿಸ್‌ಪ್ಲೇ, ಪವರ್ ವಿಂಡೋಗಳು, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ವಿನೂತನವಾದ ಮ್ಯೂಸಿಕ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರಬಹುದು. ಇದರೊಟ್ಟಿಗೆ 4 ಆಸನಗಳನ್ನು ಒಳಗೊಂಡರುವ ಸಾಧ್ಯತೆಯೂ ಹೆಚ್ಚಿದೆ.

ಈ ಟಾಟಾ ನ್ಯಾನೋ ಇವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲಿದೆ ಎನ್ನಲಾಗಿದೆ. ಹೊಸ ಎಲೆಕ್ಟ್ರಿಕ್ ಕಾರು, ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಯಿದೆ. ನೂತನ ನ್ಯಾನೋ ಇವಿ ಬಿಡುಗಡೆಯಾದರೆ ಎಂಜಿ ಕಾಮೆಟ್ ಇವಿ ಪ್ರಬಲವಾದ ಪ್ರತಿಸ್ಪರ್ಧಿಯಾಗಲಿದೆ.

ಹಳೆಯ ಟಾಟಾ ನ್ಯಾನೋ ಹೇಗಿತ್ತು: 2009 ರಿಂದ 2018 ಅವಧಿವರೆಗೆ ಈ ಕಾರನ್ನು ಮಾರಾಟ ಮಾಡಲಾಗಿತ್ತು. ಇದು ರೂ.2.50 ಲಕ್ಷದಿಂದ ರೂ.3.41 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿತ್ತು. 624 ಸಿಸಿ ಸಾಮರ್ಥ್ಯದ ಪೆಟ್ರೋಲ್ ಅಥವಾ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿತ್ತು. 21.9 ರಿಂದ 23.9 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 9, 2025, 16:29 [IST]
English summary
Tata nano ev if launch expected price range and features details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+