Tata: ಟಾಟಾ ಮಾಸ್ಟರ್ ಪ್ಲಾನ್: ಲುಕ್ ನೋಡಿ ಪ್ರತಿಸ್ಪರ್ಧಿಗಳು ಕಂಗಾಲು: ಬರ್ತಿದೆ ರಗಡ್ SUV
ಇತ್ತೀಚಿನ ವರದಿಗಳ ಪ್ರಕಾರ ಟಾಟಾ ಸಿಯೆರಾ (Tata Sierra) 2025ರ ನವೆಂಬರ್ ಅಥವಾ ಡಿಸೆಂಬರ್ ಸುಮಾರಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ICE (ಇಂಧನ ಚಾಲಿತ) ಮತ್ತು EV ಎರಡೂ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಸಮಕಾಲೀನ, ವೈಶಿಷ್ಟ್ಯ-ಭರಿತ ಇಂಟೀರಿಯರ್ ಮತ್ತು ಟರ್ಬೊ ಪೆಟ್ರೋಲ್, ಡೀಸೆಲ್ ಮತ್ತು ಹೆಚ್ಚಿನ ಟ್ರಿಮ್‌ಗಳಲ್ಲಿ ಸಂಭಾವ್ಯವಾಗಿ ಡ್ಯುಯಲ್-ಮೋಟಾರ್ EV ಪವರ್‌ಟ್ರೇನ್‌ಗಳ ಮಿಶ್ರಣದೊಂದಿಗೆ ಬರಲಿದೆ. ಪವರ್‌ಟ್ರೇನ್ ಮತ್ತು ವೇರಿಯೆಂಟ್ ಅವಲಂಬಿಸಿ ಸುಮಾರು ರೂ. 17 ಲಕ್ಷದಿಂದ 25 ಲಕ್ಷದಲ್ಲಿ (ಎಕ್ಸ್-ಶೋರೂಂ) ಬಿಡುಗಡೆಯಾಗಬಹುದು ಎನ್ನಲಾಗಿದೆ.
ಕಾರಿನ ಉತ್ಪಾದನೆ ಮತ್ತು ಮಾಧ್ಯಮ ಪೂರ್ವವೀಕ್ಷಣೆಗಳು ಈಗಾಗಲೇ ನಡೆಯುತ್ತಿವೆ. ರಸ್ತೆಗಳಲ್ಲಿ ಟೆಸ್ಟಿಂಗ್ ಮಾಡುವಾಗ ಈ ಹಿಂದೆಯೂ ಹಲವು ಬಾರಿ ಟಾಟಾ ಸಿಯೆರಾ ಕಾಣಿಸಿಕೊಂಡಿತ್ತು. ಈ ಕುರಿತ ವಿಡಿಯೋಗಳು ಹಾಗೂ ಸ್ಪೈ ಚಿತ್ರಗಳು ತುಂಬಾ ವೈರಲ್ ಆಗಿದ್ದವು. ಈಗ ಬಿಡುಗಡೆ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ. ಬಲ್ಲ ಮೂಲಗಳ ಮಾಹಿತಿಯಂತೆ ಕಾರಿನ ವಿನ್ಯಾಸ, ವೈಶಿಷ್ಟ್ಯಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಪವರ್‌ಟ್ರೇನ್ ಆಯ್ಕೆಗಳು: ಸಿಯೆರಾವನ್ನು ಬಹು ಪವರ್‌ಟ್ರೇನ್‌ಗಳೊಂದಿಗೆ (ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್) ನೀಡಲಾಗುವುದು. 1.5 - ಲೀಟರ್ ಟರ್ಬೊ - ಪೆಟ್ರೋಲ್ ಎಂಜಿನ್‌ನೊಂದಿಗೆ 170 PS ಪವರ್ ಹಾಗೂ 280 Nm ಟಾರ್ಕ್ ಹೊರಹಾಕುತ್ತದೆ. 2.0 - ಲೀಟರ್ ಕ್ರಯೋಟೆಕ್ ಡೀಸೆಲ್ ಎಂಜಿನ್, 170bhp ಪವರ್ ಹಾಗೂ 350 Nm ಟಾರ್ಕ್ ಹೊರಹಾಕುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಒಳಗೊಂಡಿರುತ್ತದೆ.
ಇನ್ನು ಎಲೆಕ್ಟ್ರಿಕ್ ಆವೃತ್ತಿಯ ವಿಷಯಕ್ಕೆ ಬಂದರೆ, ಆಯ್ಕೆಯನ್ನು ಅವಲಂಬಿಸಿ 65 kWh ಅಥವಾ 75 kWh ವರೆಗೆ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿರಲಿದೆ. ಸಣ್ಣ ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್‌ನಲ್ಲಿ 450 ಕಿ.ಮೀ ರೇಂಜ್ ಹಾಗೂ ದೊಡ್ಡ ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್‌ನಲ್ಲಿ 600 ಕಿ.ಮೀ ರೇಂಜ್ ನೀಡುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳುತ್ತಿವೆ.

ಇಂಟೀರಿಯರ್ ಮತ್ತು ಫೀಚರ್ಸ್: ಒಳಾಂಗಣವನ್ನು ಆಧುನಿಕ ತಂತ್ರಜ್ಞಾನದಲ್ಲಿ ಟ್ರಿಪಲ್-ಸ್ಕ್ರೀನ್ ಸೆಟಪ್‌ನೊಂದಿಗೆ ನೀಡಲಾಗಿದೆ. ಸೆಂಟರ್ ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಡ್ರೈವರ್ ಕೋ-ಪ್ಯಾಸಿಂಜರ್‌ಗೆ ಮೂರನೇ ಸ್ಕ್ರೀನ್ ಕೂಡ ನೀಡಲಾಗಿದೆ. ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಪ್ರೀಮಿಯಂ ಆಡಿಯೋ, 360-ಡಿಗ್ರಿ ಕ್ಯಾಮೆರಾ, OTA ಅಪ್‌ಡೇಟ್‌ಗಳನ್ನು ನೀಡಬಹುದಾಗಿದೆ.
ಬೆಲೆ ಮತ್ತು ಸ್ಪರ್ಧೆ: ಅಂದಾಜು ಬೆಲೆಯು ಸುಮಾರು ರೂ. 17 ಲಕ್ಷದಿಂದ 25 ಲಕ್ಷ ಶ್ರೇಣಿಯಲ್ಲಿ (ಎಕ್ಸ್-ಶೋರೂಂ) ಇರಬಹುದು. ಬಿಡುಗಡೆ ನಂತರ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾದಂತಹ ಮಾಡಲ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಒಟ್ಟಾರೆ ಸಿಯೆರಾ ತನ್ನ ಹಳೆಯ ಲೆಜೆಂಡ್ ಲುಕ್ ಹಾಗೆಯೇ ಉಳಿಸಿಕೊಂಡು ಹೊಸ ವಿನ್ಯಾಸ ಹೈಲೆಟ್‌ಗಳನ್ನು ಅಲ್ಲಲ್ಲಿ ಪಡೆಯಲಿದೆ.

ಮುಂಬರಲಿರುವ ಹೊಸ ಟಾಟಾ ಸಿಯೆರಾ ಎಸ್‌ಯುವಿ ಸುರಕ್ಷತೆ ವಿಷಯಕ್ಕೆ ಬಂದರೆ, ಈ ಬಾರಿ ಟಾಟಾ ಕಾರು ಲೆವೆಲ್-2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ವೈಶಿಷ್ಟ್ಯಗಳನ್ನು ಸಹ ಹೊಂದಿರಲಿದ್ದು, ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್ ಸೇರಿವೆ. ಉಳಿದಂತೆ 7-ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಅನ್ನು ಹೊಂದಿರಬಹುದು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಆಟೋಕಾರ್ ಇಂಡಿಯಾ, ಕಾರ್‌ದೇಖೋ ಮತ್ತು ಇತರ ಭಾರತೀಯ ಆಟೋಮೋಟಿವ್ ಸುದ್ಧಿ ಸಂಸ್ಥೆಗಳಿಂದ ಹೊರಬಂದ ವರದಿಗಳ ಪ್ರಕಾರ, 2025 ರ ಕೊನೆಯಲ್ಲಿ ಈ ಕಾರು ಬಿಡುಗಡೆಯಾಗಲಿದೆ. ಈಗಾಗಲೇ ಜೋರು ಪರೀಕ್ಷೆಗಳು ನಡೆಯುತ್ತಿದ್ದು, ಕಾರು ಉತ್ತಮ ನಿರ್ಮಾಣ ಗುಣಮಟ್ಟ ಹೊಂದಿರುವುದಾಗಿ ತಿಳಿದುಬಂದಿದೆ. ಶೀಘ್ರದಲ್ಲೆ ಟಾಟಾ ಮೋಟಾರ್ಸ್, ಸಿಯೆರಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ. ಹೊಸ ಸಿಯೆರಾ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








