5-ಸೀಟರ್.. ಘರ್ಜಿಸಲು ಸಿದ್ಧವಾಗುತ್ತಿದೆ ಟಾಟಾದ ಹುಲಿ, ಬಿಡುಗಡೆಗೆ ಮಹೂರ್ತ ನಿಗದಿ.. 10 ಲಕ್ಷಕ್ಕೆ ಮಾರಾಟ?

ಟಾಟಾ ಸಿಯೆರಾ (Tata Sierra).. ಈ ಹೆಸರು ಕೇಳುತ್ತಿದ್ದಂತೆ ಹಲವರು ದಶಕಗಳ ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಾರೆ. 1991ರಲ್ಲಿ ಈ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಆ ಕಾಲಘಟ್ಟದಲ್ಲಿ ದೇಶೀಯ ರಸ್ತೆಯಲ್ಲಿ ಹುಲಿಯಂತೆ ಘರ್ಜಿಸಿತ್ತು. ಅದರ ಹೊರತಾಗಿ ಹಲವು ಕಾರಣಗಳಿಗೆ 2023ರಲ್ಲಿ 'ಸಿಯೆರಾ' ಮಾರಾಟವನ್ನು ಸ್ಥಗಿತಗೊಳಿಸಲಾಯಿತು. ಸದ್ಯ, ಇದೇ ಕಾರನ್ನು ಹೊಸ ಅವತಾರದಲ್ಲಿ ಪರಿಚಯಿಸಲು 'ಟಾಟಾ ಮೋಟಾರ್ಸ್' ಕೂಡ ಸಿದ್ದವಾಗಿದ್ದು, ಅದಕ್ಕೆ ಮಹೂರ್ತವನ್ನು ನಿಗದಿಪಡಿಸಿದೆ ಎಂದು ವರದಿಯಾಗಿದೆ.

ಎಲ್ಲವು ಅಂದುಕೊಂಡಂತೆ ನಡೆದರೆ, ನೂತನ 'ಟಾಟಾ ಸಿಯೆರಾ' ಕಾರು, ಈ ವರ್ಷಾಂತ್ಯದಲ್ಲಿ ಅಂದರೆ 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಮೊದಲಿಗೆ ಎಲೆಕ್ಟ್ರಿಕ್ ರೂಪದಲ್ಲಿ ಮಾರಾಟಕ್ಕೆ ತರಲಾಗುತ್ತದೆ. ಆ ಬಳಿಕ, 2026ರ ಆರಂಭದಲ್ಲಿ ಇಂಧನ ಚಾಲಿತ (ಪೆಟ್ರೋಲ್/ಡಿಸೇಲ್) ಆಯ್ಕೆಯಲ್ಲಿಯೂ ಪರಿಚಯಿಸಲಾಗುತ್ತದೆ. ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. 'ಟಾಟಾ ಕರ್ವ್' ಎಸ್‌ಯುವಿಯನ್ನು ಕಂಪನಿಯು ಇದೇ ಕಾರ್ಯ ವಿಧಾನ ಅನುಸರಿಸಿ, ಬಿಡುಗಡೆ ಮಾಡಿತ್ತು.

New Tata Sierra Suv Launch Timeline Revealed Expected Price And Features Details

'ಟಾಟಾ ಸಿಯೆರಾ' ದೊಡ್ಡ ಗಾತ್ರದ ಎಸ್‌ಯುವಿಯಾಗಿರಲಿದೆ. ಆದರೂ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುವ ಎಲ್ಲ ಸಾಧ್ಯತೆಗಳಿವೆ. ಇಂಧನ ಚಾಲಿತ ಮಾಡೆಲ್ ರೂ.10 ಲಕ್ಷ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಎಲೆಕ್ಟ್ರಿಕ್ ಚಾಲಿತ ಮಾಡೆಲ್ ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಈ ಕಾರು ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸ ಹೊಂದಿರಲಿದೆ ಎಂಬುದು ಬಹುತೇಕ ದೃಢಪಟ್ಟಿದೆ. ಉತ್ಪಾದನೆಗೆ ಸಿದ್ದಗೊಂಡ ಇದೇ ಎಸ್‌ಯುವಿಯನ್ನು ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲೂ ಪ್ರದರ್ಶಿಸಲಾಗಿತ್ತು. ನೂತನ ಕಾರು ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

New Tata Sierra Suv Launch Timeline Revealed Expected Price And Features Details

ಹೊಸ ಸಿಯೆರಾ ಎಸ್‌ಯುವಿಯ ಎಲೆಕ್ಟ್ರಿಕ್ ಚಾಲಿತ ಮಾಡೆಲ್, ಹ್ಯಾರಿಯರ್ ಇವಿಯಂತೆ ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿರುವ ಎಲ್ಲ ಸಾಧ್ಯತೆಗಳಿವೆ. ಈ ಕಾರು ಸಹ 65 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದುಕೊಂಡಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 627 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡಬಹುದು ಎಂದು ಹೇಳಲಾಗಿದೆ.

ಅದೇ ರೀತಿಯಲ್ಲಿ ಸಿಯೆರಾ ಕಾರಿನ ಇಂಧನ ಚಾಲಿತ ಮಾಡೆಲ್, 'ಕರ್ವ್' ಎಸ್‌ಯುವಿಯಂತೆ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿರಲಿದೆ. 1.2 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿರಲಿದೆ. ಅದಕ್ಕೆ ತಕ್ಕಂತೆ 17 ರಿಂದ 19 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡಬಹುದು ಎನ್ನಲಾಗಿದೆ.

New Tata Sierra Suv Launch Timeline Revealed Expected Price And Features Details

ಈ ನೂತನ ಎಸ್‌ಯುವಿ 5 ಆಸನಗಳನ್ನು ಹೊಂದಿರಲಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡುಯಲ್ ಜೋನ್ ಆಟೋಮೆಟಿಕ್ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಫೋರ್ಟ್ ಹಾಗೂ ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. ಸುರಕ್ಷತೆಯ ದೃಷ್ಟಿಯಿಂದ 7-ಏರ್‌ಬ್ಯಾಗ್‌ಗಳನ್ನು ಹೊಂದಿರುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 10, 2025, 16:57 [IST]
English summary
New tata sierra suv launch timeline revealed expected price and features details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+