Toyota: ನಿನ್ನೆಯಷ್ಟೆ ಅನಾವರಣಗೊಂಡ ಹೊಸ ಟೊಯೋಟಾ ಕರೊಲಾ ಕ್ರಾಸ್ ವಿಶೇಷತೆಗಳು

]ಯುರೋಪಿಯನ್ ಮಾರುಕಟ್ಟೆಗಳಿಗಾಗಿ ಟೊಯೋಟಾ (Toyota) ಕಂಪನಿಯು ತನ್ನ 2025ರ ಫೇಸ್‌ಲಿಫ್ಟ್ ಕರೊಲಾ ಕ್ರಾಸ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಯುರೋಪಿಯನ್ ಖರೀದಿದಾರರು ಕರೊಲಾ ಕ್ರಾಸ್‌ನ ಜಿಆರ್ ಸ್ಪೋರ್ಟ್ ಎಡಿಷನ್ ಕೂಡ ಪಡೆಯಬಹುದು. ತನ್ನ ಇತ್ತೀಚಿನ ನವೀಕರಣಗಳೊಂದಿಗೆ, 2025ರ ಟೊಯೋಟಾ ಕರೊಲಾ ಕ್ರಾಸ್ ಫೇಸ್ ಲಿಫ್ಟ್ ಕಾಂಪ್ಯಾಕ್ಟ್ ಕಾರು ಟೊಯೊಟಾದ ಉಪಸ್ಥಿತಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲಪಡಿಸಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿರುವ ಈ ಹೊಸ ಕರೊಲಾ ಕ್ರಾಸ್‌ ಎಸ್‌ಯುವಿ ಕುರಿತ ವಿಶೇಷತೆಗಳನ್ನು ನೋಡೋಣ.

ಟೊಯೊಟಾ ಹಿಂಭಾಗದ ವೆಂಟಿಲೇಟರ್ ಪ್ರದೇಶದ ಬಳಿ ಹೆಚ್ಚಿನ ವಾಯಿಸ್ ಇನ್ಸುಲೇಷನ್ ಮತ್ತು ಟಾಪ್‌ ವೇರಿಯೆಂಟ್‌ಗಳಲ್ಲಿ 3-ಲೇಯರ್ ಇನ್‌ಡ್ಯಾಶ್ ಸೈಲೆನ್ಸರ್ ಅನ್ನು ಒಳಗೊಂಡಿದೆ. ಟೊಯೊಟಾ ಸ್ಮಾರ್ಟ್ ಕನೆಕ್ಟ್ ಸಿಸ್ಟಮ್ ಅಡಿಯಲ್ಲಿ 10.5-ಇಂಚಿನ ಇನ್ಫೋಟೈನ್ ಮೆಂಟ್ ಟಚ್ ಸ್ಕ್ರೀನ್ ನೊಂದಿಗೆ 12.3-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

new-toyota-corolla-cross-facelift-top-things

ಇಂಟೀರಿಯರ್‌ನಲ್ಲಿ, ಗೇರ್ ಸೆಲೆಕ್ಟರ್ ಅನ್ನು ನಯವಾದ ನೋಟದೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಯುಎಸ್‌ಬಿ-ಸಿ ಪೋರ್ಟ್, ವೈರ್ ಲೆಸ್ ಚಾರ್ಜರ್, ಸ್ಲೈಡಿಂಗ್ ಸ್ಟೋರೇಜ್ ಬಾಕ್ಸ್ ಮತ್ತು ನವೀಕರಿಸಿದ ಕಪ್ ಹೋಲ್ಡರ್‌ಗಳಂತಹ ಆಧುನಿಕ ಸ್ಪರ್ಶಗಳೊಂದಿಗೆ ವಿಶಾಲವಾದ ಸೆಂಟರ್ ಕನ್ಸೋಲ್ ನೀಡಲಾಗಿದೆ. ಆಂಡ್ರಾಯ್ಡ್ ಆಟೋ ಈಗ 1.5 ಪಟ್ಟು ವೇಗವಾಗಿ ಮತ್ತು ಆಪಲ್ ಕಾರ್‌ಪ್ಲೇಗೆ ಸಮಾನವಾಗಿದೆ.

ಫೇಸ್ ಲಿಫ್ಟೆಡ್ ಕರೊಲಾ ಕ್ರಾಸ್ ವಿನ್ಯಾಸದ ವಿಷಯಕ್ಕೆ ಬಂದರೆ ಹೆಡ್ ಲ್ಯಾಂಪ್ ಘಟಕಗಳನ್ನು ಅಡಾಪ್ಟಿವ್ ಎಲ್ಇಡಿ ತಂತ್ರಜ್ಞಾನ ಮತ್ತು ಸಿಗ್ನೇಚರ್ ಎಲ್-ಆಕಾರದ ಡೇಟೈಮ್ ರನ್ನಿಂಗ್ ಲೈಟ್ ಗಳೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಮರುವಿನ್ಯಾಸಗೊಳಿಸಿದ ಮುಂಭಾಗದ ಡಿಸೈನ್ ಜೊತೆಗೆ ಹಿಂಭಾಗದಲ್ಲಿ, ಟೈಲ್ ಲೈಟ್ ಗಳನ್ನು ಹೊಸ ಸಿ-ಆಕಾರದ ಎಲ್ಇಡಿ ಸಿಗ್ನೇಚರ್ ಮತ್ತು ಇಂಟಿಗ್ರೇಟೆಡ್ ಏರೋ ಫಿನ್‌ಗಳೊಂದಿಗೆ ನವೀಕರಿಸಲಾಗಿದೆ.

new-toyota-corolla-cross-facelift-top-things

ಜೊತೆಗೆ ಹೊಸ 18-ಇಂಚಿನ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಈ ಕಾರನ್ನು ಇದೀಗ 2025ರ ಫೇಸ್‌ಲಿಫ್ಟ್ ಆಗಿ ಟೊಯೊಟಾ ಯುರೋಪಿಯನ್ ಮಾರುಕಟ್ಟೆಗಳಿಗಾಗಿ ಅನಾವರಣಗೊಳಿಸಿರುವುದು ಇದೀಗ ಯುರೋಪಿಯನ್ ಪರ್ಫಾಮೆನ್ಸ್ ಪ್ರಿಯರಿಗೆ ಖುಷಿ ತಂದಿದೆ. ಈ ಹೊಸ ಅಪ್‌ಡೇಟ್‌ಗಳ ಜೊತೆಗೆ ಖರೀದಿದಾರರು ಕರೊಲಾ ಕ್ರಾಸ್‌ನ ಜಿಆರ್ ಸ್ಪೋರ್ಟ್ ಎಡಿಷನ್ ಕೂಡ ಪಡೆಯಬಹುದು.

ಜಿಆರ್ ಸ್ಪೋರ್ಟ್ ಎಡಿಷನ್ ವಿಶೇಷತೆಗಳು: ಸಾಮಾನ್ಯ ಮಾಡಲ್‌ಗಳಿಗಿಂತ ಹೆಚ್ಚು ಸ್ಪೋರ್ಟಿಯಾಗಿರಲಿದ್ದು, ಪರ್ಫಾಮೆನ್ಸ್‌ನಲ್ಲೂ ಹೆಚ್ಚು ಸ್ಪೋರ್ಟಿಯಾಗಿರಲಿದೆ. ಒಳಭಾಗದಲ್ಲಿ, ಜಿಆರ್ ಸ್ಪೋರ್ಟ್ ರೆಡ್ ಸ್ಟಿಚ್, ಜಿಆರ್-ಲೋಗೊದ ಹೆಡ್‌ರೆಸ್ಟ್‌ಗಳು, ಪ್ಯಾಡಲ್ ಶಿಫ್ಟರ್‌ಗಳು ಮತ್ತು ವಿಶೇಷ ಸ್ಪೋರ್ಟ್ ಮೋಡ್‌ನೊಂದಿಗೆ ಸ್ಪೋರ್ಟಿ ಬ್ರಿನ್ ನೋಬ್ ಸ್ಯೂಡ್-ಎಫೆಕ್ಟ್ ಅಪ್ಹೋಲ್‌ಸ್ಟರಿಯನ್ನು ಪಡೆದಿದೆ.

new-toyota-corolla-cross-facelift-top-things

10 ಎಂಎಂ ಕಡಿಮೆ ಎತ್ತರದಲ್ಲಿ, ವಿಶಿಷ್ಟವಾದ 19 - ಇಂಚಿನ ವೈ-ಸ್ಪೋಕ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಇದು ಹೆಚ್ಚು ಆಕ್ರಮಣಕಾರಿ ಫ್ರಂಟ್ ಎಂಡ್ ಅನ್ನು ಹೊಂದಿದ್ದು, ದೊಡ್ಡ ಅಷ್ಟಭುಜಾಕೃತಿಯ (ಆಕ್ಟಾಗೊನಲ್) ಲೋವರ್ ಗ್ರಿಲ್ ಮತ್ತು ಸ್ಕ್ವೇರ್ಡ್ - ಆಫ್ ಹೊರ ಇಂಟೇಕ್‌ಗಳನ್ನು ಹೊಂದಿದೆ.

ಯುರೋಪಿಯನ್ ಕರೊಲಾ ಕ್ರಾಸ್ ಅನ್ನು ಹೈಬ್ರಿಡ್ ಪವರ್‌ಟ್ರೇನ್ ಗಳೊಂದಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ನೀಡಲಿದ್ದು, 2.0-ಲೀಟರ್ ಹೈಬ್ರಿಡ್ 200 ಹಾಗೂ 1.8-ಲೀಟರ್ ಎಂಜಿನ್ (ಈಗ ಹೈಬ್ರಿಡ್ 140 ಎಂದು ಕರೆಯಲಾಗುತ್ತದೆ) ನಡುವೆ ಆಯ್ಕೆ ಮಾಡಬಹುದು. ಇದರಲ್ಲಿ ಎರಡನೆಯದು ಟೊಯೊಟಾದ ಇಂಟಲಿಜೆಂಟ್ ಎಡಬ್ಲ್ಯುಡಿ-ಐ ಸಿಸ್ಟಮ್‌ನೊಂದಿಗೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 15, 2025, 10:20 [IST]
English summary
New toyota corolla cross facelift top things
Read more on toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+