Renault: ಹ್ಯಾಚ್‌ಬ್ಯಾಕ್ ಬೆಲೆಯಲ್ಲಿ 7-ಸೀಟರ್ ಬಿಡುಗಡೆ: 6.1 ಲಕ್ಷ ಬೆಲೆ, ಬೆಸ್ಟ್ ಫೀಚರ್ಸ್!
ರೆನಾಲ್ಟ್ (Renault) ಕಂಪನಿಯು ತನ್ನ 2025 ರ ಟ್ರೈಬರ್ (Triber) ಮತ್ತು ಕೈಗರ್ (Kiger) ಕಾರುಗಳನ್ನು ಅಪ್‌ಡೇಟ್ ಮಾಡಿ ಬಿಡುಗಡೆ ಮಾಡಿದೆ. ಹೊಸ ನವೀಕರಣಗಳ ಬಳಿಕ ಈಗ ಎರಡೂ ಕಾರುಗಳು ರೂ.6.1 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿವೆ. ಅಪ್‌ಡೇಟ್ ಭಾಗವಾಗಿ ಎರಡೂ ಕಾರುಗಳಲ್ಲಿನ ಎಂಜಿನ್‌ಗಳಲ್ಲಿ ಬದಲಾವಣೆಗಳನ್ನು ತರಲಾಗಿದ್ದು, ಈಗ ಇ-20 ಕಾಂಪ್ಲೈಂಟ್ ಮಾಡಲಾಗಿದೆ. ಉಳಿದಂತೆ ಎರಡೂ ಕಾರುಗಳು ಡಿಸೈನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಪಡೆಯದಿದ್ದರೂ, ಫೀಚರ್‌ಗಳನ್ನು ಮರುಹೊಂದಿಸಲಾಗಿದೆ. ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿ ಮಾಡಿರುವುದು ಮುಖ್ಯ ಹೈಲೈಟ್ ಆಗಿದೆ.
ರೆನಾಲ್ಟ್ ಟ್ರೈಬರ್ 7-ಸೀಟರ್ ಎಂಪಿವಿ ಆಗಿದ್ದು, ಇದರ ಬೆಲೆಯು ಬೇಸ್ ವೇರಿಯೆಂಟ್‌ಗೆ 6.1 ಲಕ್ಷವಿದ್ದು, ಟಾಪ್ ವೇರಿಯೆಂಟ್‌ಗೆ 8.75 ಲಕ್ಷ ರೂ. (ಎಕ್ಸ್ ಶೋರೂಂ)ವರೆಗೆ ಇದೆ. ಮತ್ತೊಂದೆಡೆ ರೆನಾಲ್ಟ್ ಕೈಗರ್ ಸಬ್-4 ಮೀ. ಎಸ್‌ಯುವಿ ವಿಭಾಗಕ್ಕೆ ಸೇರಿದ್ದು, ಈ ಎಸ್‌ಯುವಿ ಬೆಲೆಯು 6.1 ಲಕ್ಷದಿಂದ ಆರಂಭವಾಗಿ ಟಾಪ್ ವೇರಿಯೆಂಟ್ 10.1 ಲಕ್ಷ ರೂ. (ಎಕ್ಸ್ ಶೋರೂಂ)ವರೆಗೆ ಇದೆ.

ಹೊಸ ಅಪ್‌ಡೇಟ್‌ಗಳು: ರೆನಾಲ್ಟ್ ಈಗ ಬೇಸ್ ವೇರಿಯೆಂಟ್‌ಗಳಲ್ಲಿಯೂ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಪೋರ್ಟ್ ಮಾಡುವ 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ನೀಡುತ್ತಿದೆ. ಸೆಂಟ್ರಲ್ ಲಾಕಿಂಗ್ ಡೋರ್ ಗಳು ಮತ್ತು ಎಲ್ಲಾ ಪವರ್ಡ್ ವಿಂಡೋಗಳನ್ನು ಎರಡೂ ಕಾರುಗಳ ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.
ಎರಡೂ ಕಾರುಗಳಲ್ಲಿನ RXT ವೇರಿಯೆಂಟ್‌ಗಳು ಈಗ ಅಲಾಯ್ ವಿನ್ಯಾಸವನ್ನು ಅನುಕರಿಸುವ 15-ಇಂಚಿನ ಹೈಪರ್ ಸ್ಟೈಲ್ ಸ್ಟೀಲ್ ವೀಲ್‌ಗಳನ್ನು ಪಡೆಯುತ್ತವೆ. ರಿಮೋಟ್ ಎಂಜಿನ್ ಸ್ಟಾರ್ಟ್ ಅನ್ನು ಈಗ ಟರ್ಬೊ-ಪೆಟ್ರೋಲ್ ಎಂಜಿನ್ ನೊಂದಿಗೆ ಟಾಪ್-ಎಂಡ್ ರೆನಾಲ್ಟ್ ಕಿಗರ್ RXZ ನಲ್ಲಿ ಪರಿಚಯಿಸಲಾಗಿದೆ. ಈ ಬದಲಾವಣೆಗಳನ್ನು ಹೊರತುಪಡಿಸಿ, ಫೀಚರ್ಸ್ ಪಟ್ಟಿಯಲ್ಲಿ ಬೇರೆ ಯಾವುದೇ ಬದಲಾವಣೆ ಮಾಡಿಲ್ಲ.

ಎರಡೂ ಕಾರುಗಳು ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಪಡೆಯದಿದ್ದರೂ, ವೈಶಿಷ್ಟ್ಯಗಳನ್ನು ಮರುಹೊಂದಿಸಲಾಗಿರುವುದು ವಿಶೇಷ. ಟ್ರೈಬರ್ ಮತ್ತು ಕೈಗರ್ ಎರಡೂ ಕಾರುಗಳು 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಬಂದರೆ, ಕೈಗರ್ ಮಾತ್ರ ಹೆಚ್ಚುವರಿಯಾಗಿ ಪವರ್‌ಫುಲ್ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನೊಂದಿಗೆ ಲಭ್ಯವಿದೆ.
ಹೊಸ 2025 ರ ರೆನಾಲ್ಟ್ ಕೈಗರ್ ಕಾರು ನಿಸ್ಸಾನ್ ಮ್ಯಾಗ್ನೈಟ್, ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ, ಮಾರುತಿ ಬ್ರೆಝಾ, ಟಾಟಾ ಪಂಚ್, ಹ್ಯುಂಡೈ ಎಕ್ಸ್ಟರ್, ಮಾರುತಿ ಫ್ರಾಂಕ್ಸ್, ಟೊಯೊಟಾ ಟೈಸರ್, ಕಿಯಾ ಸೊನೆಟ್ ಮತ್ತು ಟಾಟಾ ನೆಕ್ಸಾನ್‌ಗೆ ಪೈಪೋಟಿ ನೀಡುತ್ತದೆ. ಸದ್ಯ ಐದು ಮಂದಿ ಪ್ರಯಾಣಕ್ಕೆ ಹಾಗೂ ಸಣ್ಣ ಕುಟುಂಬಕ್ಕೆ ಅಗ್ಗದ ಬೆಲೆಯಲ್ಲಿ ಸಿಗುವ ಬೆಸ್ಟ್ ಕಾರಾಗಿದೆ.

ರೆನಾಲ್ಟ್ ಟ್ರೈಬರ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಇದು ಕೂಡ ಅಗ್ಗದ ಬೆಲೆಯಲ್ಲಿ ಸಿಗುವ ಬೆಸ್ಟ್ 7-ಸೀಟರ್ ಕಾರಾಗಿದೆ. ಏಳು ಮಂದಿ ಪ್ರಯಾಣಕ್ಕೆ ಉತ್ತಮ ಕಾರಾಗಿದ್ದು, ಮಧ್ಯಮ ವರ್ಗದವರಿಗೆ ಬೆಸ್ಟ್ ಆಯ್ಕೆಯಾಗಿದೆ. ಮೊದಲಿಗಿಂತ ಹೆಚ್ಚು ಆಕರ್ಷಕ ಫೀಚರ್ಸ್ ಜೊತೆಗೆ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಿಸಿದ್ದು, ಈ ಬಾರಿ ಮಾರಾಟದಲ್ಲಿ ಉತ್ತಮ ಏರಿಕೆ ಕಾಣುವ ನಿರೀಕ್ಷಿಯೆಲ್ಲಿ ಕಂಪನಿ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








