Nissan: ಭಾರತದಲ್ಲಿ ಫುಲ್ ಡಿಮ್ಯಾಂಡ್: ವಿದೇಶದಲ್ಲೂ ಬಿಡುಗಡೆ: ಇಲ್ಲಿ 7 ಲಕ್ಷದ ಕಾರು... ಅಲ್ಲಿ 14 ಲಕ್ಷ!

ನಿಸ್ಸಾನ್ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ತನ್ನ ನಿಸ್ಸಾನ್ ಮ್ಯಾಗ್‌ನೈಟ್‌ (Nissan Magnite) ಕಾರಿನ ಮೂಲಕ ಭರ್ಜರಿ ಬೇಡಿಕೆಯನ್ನು ದಕ್ಕಿಸಿಕೊಂಡಿದೆ. ಈ ಕಾರು ದೇಶದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಈಗ ವಿದೇಶದಲ್ಲೂ ತನ್ನ ಗತ್ತು ತೋರಿಸಲು ಸಜ್ಜಾಗಿದೆ. ನಿಸ್ಸಾನ್ ಕಂಪನಿಯು ಇದೀಗ ಮ್ಯಾಗ್ನೈಟ್ ಫೇಸ್ ಲಿಫ್ಟ್ ಕಾರನ್ನು ಸೌದಿ ಅರೇಬಿಯಾದಲ್ಲಿ ಬಿಡುಗಡೆಗೊಳಿಸಿದೆ. ಈ ಎಸ್‌ಯುವಿಯನ್ನು ಫೇಸ್‌ಲಿಫ್ಟ್‌ನಲ್ಲಿ ಪಡೆದ ಮೊದಲ ಎಲ್‌ಎಚ್‌ಡಿ (ಲೆಫ್ಟ್ ಹ್ಯಾಂಡ್ ಡ್ರೈವ್) ಮಾರುಕಟ್ಟೆಯಾಗಿದೆ. ಸ್ಟೀರಿಂಗ್ ಎಡಭಾಗದಲ್ಲಿರುವುದನ್ನು ಹೊರತುಪಡಿಸಿ, ಸೌದಿ ಅರೇಬಿಯಾದಲ್ಲಿ ಬಿಡುಗಡೆಯಾದ ಮ್ಯಾಗ್ನೈಟ್ ಭಾರತದಲ್ಲಿ ಮಾರಾಟವಾಗುವ ಕಾರಿನಂತೆಯೇ ಇದೆ.

ಜಪಾನ್ ಮೂಲದ ಈ ಜನಪ್ರಿಯ ಕಾರು ತಯಾರಕ ಕಂಪನಿ, ಭಾರತದಲ್ಲಿ 2020ರಲ್ಲಿ ಮ್ಯಾಗ್ನೈಟ್ ಕಾರನ್ನು ಬಿಡುಗಡೆ ಮಾಡಿತ್ತು. ಬಳಿಕ ಈ ಜನಪ್ರಿಯ ಎಸ್‌ಯುವಿ ಭಾರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದ್ದು, ಭಾರತದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಫೇಸ್‌ಲಿಫ್ಟ್ ಪಡೆದು ಬಿಡುಗಡೆಯಾಯಿತು. ಪ್ರಸ್ತುತ ಬೆಂಗಳೂರಿನಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಬೆಲೆಯು ರೂ.7.39 ಲಕ್ಷಗಳಾದರೆ, ಟಾಪ್ ಮಾದರಿಯ ಬೆಲೆಯು ರೂ.14.73 (ಆನ್‌ ರೋಡ್‌ ಬೆಲೆಗಳು) ಲಕ್ಷಗಳಾಗಿದೆ.

nissan-magnite-facelift-launched-in-saudi-arabia

ಇನ್ನು ಸೌದಿ ಅರೇಬಿಯಾದಲ್ಲಿ 66,699 ರಿಯಾಲ್‌ಗೆ ಬಿಡುಗಡೆಯಾಗಿದೆ. ಭಾರತೀಯ ರೂಪಾಯಿಗಳಲ್ಲಿ ಅಂದಾಜು 15,28,000 ಆಗಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಕಾರಿನಲ್ಲಿ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 72 ಪಿಎಸ್ ಪವರ್ ಹಾಗೂ 96 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಮತ್ತೊಂದು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 100 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 160 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 17.4 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.

nissan-magnite-facelift-launched-in-saudi-arabia

ಹೊಸ ನಿಸ್ಸಾನ್ ಮ್ಯಾಗ್ನೈಟ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, 4-ಕಲರ್ ಆಂಬಿಯೆಂಟ್ ಲೈಟಿಂಗ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ರಿಮೋಟ್ ಎಂಜಿನ್ ಸ್ಟಾರ್ಟ್, ಏರ್ ಅಯೋನೈಜರ್ ಮತ್ತು ಕೂಲ್ಡ್ ಗ್ಲೋವ್ ಬಾಕ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸರ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಟೋ ಡಿಮ್ಮಿಂಗ್ ಐಆರ್‌ವಿಎಂ ಮತ್ತು 360-ಡಿಗ್ರಿ ಕ್ಯಾಮೆರಾಗಳನ್ನು ಒಳಗೊಂಡಿದೆ. ಒಟ್ಟಾರೆ ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ.

Take a Poll

ಈ ಕಾರಿನ ವಿನ್ಯಾಸದ ವಿಷಯಕ್ಕೆ ಬಂದರೆ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬೂಮರಾಂಗ್ ಆಕಾರಕ್ಕೆ ಹೋಲಿಕೆಯಾಗುವ ಡಿಆರ್‌ಎಲ್‌ಗಳು, ವಿನೂತನವಾಗಿರುವ ಗ್ರಿಲ್ ಹಾಗೂ ಸ್ವಲ್ಪ ಹೊಸದಾಗಿರುವ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಜೊತೆಯಲ್ಲಿ 16-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, March 21, 2025, 16:17 [IST]
English summary
Nissan magnite facelift launched in saudi arabia
Read more on nissan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+