Nissan Magnite: ಜಿಎಸ್‌ಟಿ ಪರಿಷ್ಕರಣೆ.. ಅಗ್ಗದ ನಿಸ್ಸಾನ್ ಮ್ಯಾಗ್ನೈಟ್ ಬೆಲೆ ರೂ.1 ಲಕ್ಷವರೆಗೆ ಇಳಿಕೆ, ಹೊಸ ದರವೆಷ್ಟು?

ನಿಸ್ಸಾನ್ ಮೋಟಾರ್ ಇಂಡಿಯಾ (Nissan Motor India), ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರವು 1200 ಸಿಸಿ ವರೆಗಿನ ಪೆಟ್ರೋಲ್, ಸಿಎನ್‌ಜಿ ಹಾಗೂ 1500 ಸಿಸಿ ವರೆಗಿನ ಡೀಸೆಲ್ ಎಂಜಿನ್‌ನ್ನು ಹೊಂದಿರುವ ಕಾರುಗಳ ಮೇಲಿನ ಜಿಎಸ್‌ಟಿ (GST) ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಕಡಿತಗೊಳಿಸಿದೆ. ಇದರ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಯು ಮುಂದಾಗಿದ್ದು, ಜನಪ್ರಿಯ 'ಮ್ಯಾಗ್ನೈಟ್' ಎಸ್‌ಯುವಿ ದರವನ್ನು ದೊಡ್ಡ ಮಟ್ಟದಲ್ಲಿ ಇಳಿಕೆ ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಜಿಎಸ್‌ಟಿ ಇಳಿಕೆ ಬಳಿಕ, ಹೊಚ್ಚ ಹೊಸ ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಕಾರಿನ ಬೆಲೆ ರೂ.1 ಲಕ್ಷವರೆಗೆ ಕಡಿಮೆಯಾಗಿದೆ. ಪರಿಷ್ಕೃತ ಎಕ್ಸ್-ಶೋರೂಂ ದರವು ರೂ.5.61 ಲಕ್ಷದಿಂದ ರೂ.10.75 ಲಕ್ಷ ಆಗಿದೆ. ಸದ್ಯ, ಇದೇ ಎಸ್‌ಯುವಿಯು ಕನಿಷ್ಠ ರೂ.6.14 ಹಾಗೂ ಗರಿಷ್ಠ ರೂ.11.76 ಲಕ್ಷ ಬೆಲೆಯನ್ನು ಒಳಗೊಂಡಿದೆ.

Nissan Magnite Suv Price Reduced Up To Rs 1 Lakh Rs 5 61 Lakh Starting Price Details

ನೂತನ ಬೆಲೆಗೆ ಗ್ರಾಹಕರು ದೇಶಾದ್ಯಂತ ಎಲ್ಲ ಅಧಿಕೃತ ನಿಸ್ಸಾನ್ ಡೀಲರ್‌ಶಿಪ್‌ಗಳಲ್ಲಿ 'ಮ್ಯಾಗ್ನೈಟ್' ಎಸ್‌ಯುವಿಯನ್ನು ತಕ್ಷಣದಿಂದಲೇ ಬುಕ್ಕಿಂಗ್‌ನ್ನು ಮಾಡಬಹುದು. ಹೊಸ ದರಗಳು ಸೆಪ್ಟೆಂಬರ್ 22 ರಿಂದ ಅಂದರೆ ನವರಾತ್ರಿಯ ಮೊದಲ ದಿನದಿಂದಲೇ ಮಾನ್ಯವಾಗಲಿದೆ. ಅಂದಿನಿಂದಲೇ ವಿತರಣೆಗಳು ಕೂಡ ಶುರುವಾಗಲಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಅವರು, ಈ ಜಿಎಸ್‌ಟಿ ಕಡಿತವು ಆಟೋಮೊಬೈಲ್ ಉದ್ಯಮಕ್ಕೆ ಉತ್ತೇಜಕವಾಗಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ನಾವು ಬದ್ಧರಾಗಿದ್ದೇವೆ. ಹಬ್ಬಗಳು ಹತ್ತಿರವಾಗುತ್ತಿದ್ದು, ಖರೀದಿದಾರರ ಕಾರು ತೆಗೆದುಕೊಳ್ಳುವ ಕನಸು ನನಸಾಗಲಿದೆ' ಎಂದು ಹೇಳಿದ್ದಾರೆ.

Nissan Magnite Suv Price Reduced Up To Rs 1 Lakh Rs 5 61 Lakh Starting Price Details

ನಿಸ್ಸಾನ್ ಮ್ಯಾಗ್ನೈಟ್ ವಿಶೇಷತೆಗಳೇನು:

ಇದೊಂದು ಎಸ್‌ಯುವಿಯಾಗಿದೆ. ವಿಸಿಯಾ, ವಿಸಿಯಾ ಪ್ಲಸ್, ಅಸೆಂಟಾ, ಎನ್-ಕನೆಕ್ಟಾ, ಟೆಕ್ನಾ ಮತ್ತು ಟೆಕ್ನಾ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

ನೂತನ ಮ್ಯಾಗ್ನೈಟ್ ಕಾರು 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಲಗೇಜ್ ಸಾಗಿಸಲು ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 336 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. ಬ್ಲೇಡ್ ಸಿಲ್ವರ್, ಸನ್‌ರೈಸ್ ಕೂಪರ್ ಆರೆಂಜ್, ಫ್ಲೇರ್ ಗಾರ್ನೆಟ್ ರೆಡ್, ಓನಿಕ್ಸ್ ಬ್ಲ್ಯಾಕ್ ಮತ್ತು ಪರ್ಲ್ ವೈಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ನಿಸ್ಸಾನ್ ಮ್ಯಾಗ್ನೈಟ್ ರೂಪಾಂತರಗಳು ಹಳೆ ದರ ಹೊಸ ದರ
ವಿಸಿಯಾ ರೂ.6.14 ಲಕ್ಷ ರೂ.5.61 ಲಕ್ಷ
ವಿಸಿಯಾ+ ರೂ.6.64 ಲಕ್ಷ ರೂ.6.07 ಲಕ್ಷ
ಟೆಕ್ನಾ ರೂ.10.18 ಲಕ್ಷ ರೂ.9.31 ಲಕ್ಷ
ಟೆಕ್ನಾ+ ರೂ.10.54 ಲಕ್ಷ ರೂ.9.64 ಲಕ್ಷ

ಈ ಕಾರು ಬಲಿಷ್ಠವಾದ 2 ಪವರ್‌ಟ್ರೇನ್‌ನ್ನು ಹೊಂದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ಆಟೋಮೆಟಿಕ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 17 ರಿಂದ 20 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 175 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 12 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಹೊಸ ಎಸ್‌ಯುವಿಯ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, 6-ಸ್ಪೀಕರ್‌ಗಳು, ರೇರ್ ಎಸಿ ವೆಂಟ್‌ಗಳು, ಕೋಲ್ಡ್ ಗ್ಲೋವ್ ಬಾಕ್ಸ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ಯುಎಸ್‌‍ಬಿ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇದು ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುತ್ತದೆ. 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿದೆ.

Article Published On: Monday, September 8, 2025, 18:23 [IST]
English summary
Nissan magnite suv price reduced up to rs 1 lakh rs 5 61 lakh starting price details
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+