Nissan: ದೇಶ ಕಾಯುವ ಯೋಧರಿಗೆ ಭರ್ಜರಿ ಆಫರ್: ಕೇವಲ 5.3 ಲಕ್ಷಕ್ಕೆ ಪ್ರೀಮಿಯಂ ಕಾರು!
ನಿಸ್ಸಾನ್ ಕಂಪನಿಯು ಈ ತಿಂಗಳ ಗಣರಾಜ್ಯೋತ್ಸವದ ಅಂಗವಾಗಿ ತನ್ನ 'ಬೋಲ್ಡ್ ಫಾರ್ ದಿ ಬ್ರೇವ್' ರಿಪಬ್ಲಿಕ್ ಬೊನಾನ್ಜಾ ಆಫರ್ ಅನ್ನು ಎಲ್ಲಾ ರಕ್ಷಣಾ (ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ) ಕೇಂದ್ರ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಗೆ ತನ್ನ ಹೆಚ್ಚು ಮಾರಾಟವಾಗುವ ಎಸ್‌ಯುವಿಯಾಗಿರುವ ಹೊಸ ನಿಸ್ಸಾನ್ ಮ್ಯಾಗ್ನೈಟ್ ಅನ್ನು ವಿಶೇಷ ಬೆಲೆಗೆ ನೀಡುತ್ತಿದೆ. CSD ಅಡಿಯಲ್ಲಿ ಲಭ್ಯವಿರುವ ಬೊನಾನ್ಜಾ ಮತ್ತು ತೆರಿಗೆ ಪ್ರಯೋಜನವನ್ನು CSD AFD ಪೋರ್ಟಲ್ (www.afd.csdindia.gov.in)ಮೂಲಕ SUV ಅನ್ನು ಬುಕ್ ಮಾಡುವ ಮೂಲಕ ಖರೀದಿಸಬಹುದು ಎಂದು ನಿಸ್ಸಾನ್ ತಿಳಿಸಿದೆ.
ನಿಸ್ಸಾನ್ ಭಾರತದಾದ್ಯಂತ ಕೇಂದ್ರ ಅರೆಸೈನಿಕ ಮತ್ತು ರಾಜ್ಯ ಪೊಲೀಸ್ ಪಡೆಗಳ ಎಲ್ಲಾ ಸಿಬ್ಬಂದಿಗೆ ಪ್ರಯೋಜನಗಳನ್ನು ನೀಡುತ್ತಿದೆ. ಭಾರತೀಯ ಸಶಸ್ತ್ರ ಪಡೆಗಳಿಗೆ CSD ಎಕ್ಸ್-ಶೋರೂಂ ಬೆಲೆಗಳನ್ನು ನೋಡುವುದಾದ್ರೆ, 5,27,244 ರೂ. (72,156 ರೂ. ಉಳಿತಾಯ) ಆರಂಭಿಕ ಬೆಲೆಯಿದೆ. ಟಾಪ್ ಎಂಡ್ ವೇರಿಯೆಂಟ್ ಬೆಲೆಯು 7,73,667 ರೂ. (1,01,333 ರೂ. ಉಳಿತಾಯ) ಇದೆ.

ಕೇಂದ್ರ ಅರೆಸೈನಿಕ ಪಡೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳಿಗೆ ಎಕ್ಸ್-ಶೋರೂಂ ಬೆಲೆಗಳನ್ನು ನೋಡುವುದಾದ್ರೆ, ಕೇಂದ್ರೀಯ ಪೊಲೀಸ್ ಕಲ್ಯಾನ್ ಭಂಡಾರ್ ಅಡಿಯಲ್ಲಿ ಬೇಸ್ ವೇರಿಯೆಂಟ್ 5,88,100 ರೂ. ಆರಂಭಿಕ ಬೆಲೆ ಇದ್ದರೇ ಟಾಪ್ ಎಂಡ್ ವೇರಿಯೆಂಟ್ ಬೆಲೆಯು 8,52,000 ರೂ. ಇದೆ ಎಂದು ನಿಸ್ಸಾನ್ ಕಂಪನಿ ತಿಳಿಸಿದೆ.
ಹೊಸ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಸಶಸ್ತ್ರ ಪಡೆಗಳು, ಕೇಂದ್ರ ಅರೆಸೈನಿಕ ಪಡೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳಿಗೆ ವಿಶೇಷ ಬೆಲೆಯಲ್ಲಿ ನೀಡಲು ನಿಸ್ಸಾನ್ ನಿರ್ಧರಿಸಿದೆ. ದೇಶವನ್ನು ರಕ್ಷಿಸುವ ನಿಜವಾದ ವೀರರ ದಣಿವರಿಯದ ಸಮರ್ಪಣೆ ಮತ್ತು ತ್ಯಾಗಕ್ಕಾಗಿ ನಮ್ಮ ಗೌರವ ಮತ್ತು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಹೇಳಿದರು.

ಭಾರೀ ಬೇಡಿಕೆಯ ಕಾರು: ಡಿಸೆಂಬರ್ 2020 ರಲ್ಲಿ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಈ ಕಾರು ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಒಟ್ಟು 1.5 ಲಕ್ಷ ಯುನಿಟ್ ಕಾರುಗಳ ಮಾರಾಟವನ್ನು ದಾಟಿದೆ. ಅಲ್ಲದೇ ಕಾರನ್ನು ಅಕ್ಟೋಬರ್ 2024 ರಲ್ಲಿ ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಲಾಗಿದ್ದು, ಹೊಸ ನಿಸ್ಸಾನ್ ಮ್ಯಾಗ್ನೈಟ್ ಈಗಾಗಲೇ 10,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ದಾಟಿದೆ.
ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ 5 ಜನರು ಸುಲಭವಾಗಿ ಪ್ರಯಾಣಿಸಬಹುದು. ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, 4-ಕಲರ್ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸರ್‌ಗಳು, ಆಟೋ ಡಿಮ್ಮಿಂಗ್ ಐಆರ್‌ವಿಎಂ ಮತ್ತು 360-ಡಿಗ್ರಿ ಕ್ಯಾಮೆರಾಗಳನ್ನು ಒಳಗೊಂಡಿದೆ.
ಈ ಕಾರಿನಲ್ಲಿ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 72 ಪಿಎಸ್ ಪವರ್ ಹಾಗೂ 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಮತ್ತೊಂದು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 100 ಪಿಎಸ್ ಪವರ್ ಮತ್ತು 160 ಎನ್ಎಂ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








