ಕೇವಲ 7 ಲಕ್ಷ ಬೆಲೆಯಲ್ಲಿ ನಿಸ್ಸಾನ್ 7-ಸೀಟರ್ ಕಾರು ಶೀಘ್ರದಲ್ಲೆ ಬಿಡುಗಡೆ: 'ಗ್ರಾವೈಟ್' ಹೆಸರು ಬಹಿರಂಗ!

ನಿಸ್ಸಾನ್ ಮೋಟಾರ್ ಇಂಡಿಯಾ ತನ್ನ ಬಹು ನಿರೀಕ್ಷಿತ ಸಬ್ - 4 ಮೀಟರ್ ಕಾಂಪ್ಯಾಕ್ಟ್ MPV ಗೆ ಅಧಿಕೃತವಾಗಿ 'ಗ್ರಾವೈಟ್' ಎಂದು ಹೆಸರಿಸಿದೆ. ಈ ಕಾರು ಜನವರಿ 2026 ರಲ್ಲಿ ಅದ್ದೂರಿಯಾಗಿ ಅನಾವರಣಗೊಳ್ಳಲಿದೆ. ಇದರ ಬಿಡುಗಡೆ ಮೂಲಕ ನಿಸ್ಸಾನ್ ಬಜೆಟ್ ಸ್ನೇಹಿ MPV ವಾಹನ ವಿಭಾಗಕ್ಕೆ ದಿಟ್ಟ ಹೆಜ್ಜೆ ಇಡಲಿದೆ. ಇದು ರೆನಾಲ್ಟ್ ಟ್ರೈಬರ್‌ನ CMF-A+ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ನಿರೀಕ್ಷಿತ ಬೆಲೆಯು ರೂ. 6.20 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿರುವ ಸಾಧ್ಯತೆ ಇದೆ.

ಮಾರ್ಚ್ 2026 ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನ, ಜನವರಿ 2026 ರಲ್ಲಿ ಈ ಕಾರನ್ನು ಅನಾವರಣಗೊಳಿಸಲು ನಿರ್ಧರಿಸಲಾಗಿದೆ. ಗ್ರಾವೈಟ್, ಮ್ಯಾಗ್ನೈಟ್ ನಂತರ ನಿಸ್ಸಾನ್‌ನ ಎರಡನೇ ಪ್ರಮುಖ ಕಾರಾಗಿದೆ. ಈ ಕಾರಿ‌ನೊಂದಿಗೆ, ನಿಸ್ಸಾನ್ ಹೆಚ್ಚಿನ ಪ್ರಮಾಣದ ಫ್ಯಾಮಿಲಿ ಕಾರು ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

nissan-revealed-its-upcoming-mpv-name-gravite

4 ಮೀಟರ್‌ಗಿಂತ ಕಡಿಮೆ ಉದ್ದವಿರಲಿರುವ ನಿಸ್ಸಾನ್ ಗ್ರಾವೈಟ್, ನಗರ ಪ್ರಯಾಣಿಕರು ಮತ್ತು ದೊಡ್ಡ ಕುಟುಂಬಗಳಿಗೆ ಆಕರ್ಷಕ ಕಾರಾಗಲಿದೆ. ಇದು 5, 6, ಅಥವಾ 7 ಪ್ರಯಾಣಿಕರಿಗೆ ಹೊಂದಿಕೊಳ್ಳುವ ಆಸನಗಳನ್ನು ನೀಡುತ್ತದೆ, ಆಪ್ಟಿಮೈಸ್ಡ್ ಕಾರ್ಗೋ ಸ್ಥಳಕ್ಕಾಗಿ ಎರಡನೇ ಸಾಲಿನ ಸೀಟುಗಳನ್ನು ಸ್ಲೈಡಿಂಗ್ ಮಾಡುತ್ತದೆ - ಮೂರನೇ ಸಾಲನ್ನು ಮಡಚಿ 625 - ಲೀಟರ್‌ಗಳವರೆಗೆ ಬೂಟ್ ಪಡೆಯಬಹುದು.

ಹೊರಭಾಗವು ದಪ್ಪ ಮುಂಭಾಗದ ಗ್ರಿಲ್, ಆಕರ್ಷಕ ಬಂಪರ್, 15 - ಇಂಚಿನ ಅಲಾಯ್ ವೀಲ್‌ಗಳು ಮತ್ತು ನಯವಾದ LED ಟೈಲ್ - ಲ್ಯಾಂಪ್ ‌ಗಳೊಂದಿಗೆ ಹೊಸ ನಿಸ್ಸಾನ್ ಹೊರಹೊಮ್ಮಲಿದೆ. ಒಳಗೆ, ಡ್ಯುಯಲ್ - ಟೋನ್ ಅಪ್ಹೋಲ್ಸ್ಟರಿಯೊಂದಿಗೆ ಪ್ರೀಮಿಯಂ ಕ್ಯಾಬಿನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್ ಮಾಡುವ 8 - ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್, 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪುಶ್-ಬಟನ್ ಸ್ಟಾರ್ಟ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ನಿರೀಕ್ಷಿಸಬಹುದು.

nissan-revealed-its-upcoming-mpv-name-gravite

ಎಂಜಿನ್ ವಿಷಯಕ್ಕೆ ಬಂದರೆ 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಇದು 72bhp ಪವರ್ ಮತ್ತು 96Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಸುಲಭವಾದ ನಗರ ಡ್ರೈವ್‌ಗಳಿಗಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೇಟೆಡ್ ಟ್ರಾನ್ಸ್ ‌ಮಿಷನ್ (AMT) ಗೆ ಜೋಡಿಸಲಾಗಿದೆ. ಈ ಎಂಜಿನ್ ಮೂಲಕ 18 ರಿಂದ 20 kmpl ಮೈಲೇಜ್ ನಿರೀಕ್ಷಿಸಲಾಗಿದೆ.

ಹೊಸ ನಿಸ್ಸಾನ್ ಗ್ರಾವೈಟ್ ಭಾರತದ ದಟ್ಟಣೆಯ ರಸ್ತೆಗಳು ಮತ್ತು ದೀರ್ಘ ಹೆದ್ದಾರಿ ಪ್ರಯಾಣಗಳಿಗೆ ಸರಿಹೊಂದುತ್ತದೆ. ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್ ‌ಗಳು ಮತ್ತು ಉನ್ನತ ಟ್ರಿಮ್‌ಗಳಲ್ಲಿ 360 - ಡಿಗ್ರಿ ಕ್ಯಾಮೆರಾದೊಂದಿಗೆ ಸುರಕ್ಷತೆಯನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಮಾರಾಟವು ಮಾರ್ಚ್ 2026 ರಲ್ಲಿ ಪ್ರಾರಂಭವಾಗಲಿದ್ದು, ಗ್ರಾವೈಟ್ ಅನ್ನು ಮ್ಯಾಗ್ನೈಟ್ ಎಸ್‌ಯುವಿ ನಂತರ ನಿಸ್ಸಾನ್‌ನ ಎರಡನೇ ಭಾರತ-ನಿರ್ದಿಷ್ಟ ಮಾದರಿಯಾಗಿ ಇರಿಸಲಾಗುವುದು. ಇದು ಹೆಚ್ಚುತ್ತಿರುವ ಇವಿ ಸ್ಪರ್ಧೆಯ ನಡುವೆ ನಿಸ್ಸಾನ್‌ನ "ಮೇಕ್ ಇನ್ ಇಂಡಿಯಾ" ಬದ್ಧತೆಯನ್ನು ಒತ್ತಿಹೇಳುತ್ತದೆ. ಟ್ರೈಬರ್ (ರೂ. 6 ರಿಂದ 9 ಲಕ್ಷ) ಗಿಂತ ಆಕ್ರಮಣಕಾರಿಯಾಗಿ ಬೆಲೆ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ.

2026 ರ ಆರಂಭದಲ್ಲಿ ನಿಸ್ಸಾನ್ ಗ್ರಾವೈಟ್ MPV ಬಿಡುಗಡೆಯಾದ ನಂತರ, ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಮಧ್ಯಮ ಗಾತ್ರದ SUV ಒಂದನ್ನು ಪರಿಚಯಿಸಲು ಯೋಜಿಸಿದೆ. 2027 ರ ಆರಂಭದಲ್ಲಿ ದೊಡ್ಡ ಮೂರು - ಸಾಲು SUV ಅನ್ನು ಸಹ ಮಾರುಕಟ್ಟೆಗೆ ಪರಿಚಯಿಸಲು ನಿಗದಿಪಡಿಸಲಾಗಿದೆ. ಎಲ್ಲವು ಅಂದುಕೊಂಡಂತಾದರೆ ಕಂಪನಿ ಹೇಳೀರುವ ದಿನಾಂಕಗಳಲ್ಲಿ ಈ ಕಾರುಗಳು ಮಾರುಕಟ್ಟೆಗೆ ಬರಲಿವೆ.

More from DriveSpark

Article Published On: Thursday, December 18, 2025, 12:53 [IST]
English summary
Nissan revealed its upcoming mpv name gravite
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+