ಸಿಂಗಲ್ ಚಾರ್ಜ್ ಸಾಕು... ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಬರಬಹುದು: ಹೊಸ ಆಟೋ ಬಿಡುಗಡೆ!
ಪ್ರಮುಖ ಎಲೆಕ್ಟ್ರಿಕ್ ವಾಹನ (EV) ತಯಾರಕರಾದ ಒಮೆಗಾ ಸೀಕಿ ಪ್ರೈವೇಟ್ ಲಿಮಿಟೆಡ್, ಇಂದು ಒಮೆಗಾ ಸೀಕಿ NRG ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿದೆ. 3.55 ಲಕ್ಷ ರೂಪಾಯಿ (ಎಕ್ಸ್-ಶೋರೂಂ) ಬೆಲೆಯ ಈ ಎಲೆಕ್ಟ್ರಿಕ್ ಪ್ಯಾಸೆಂಜರ್ ತ್ರಿಚಕ್ರ ವಾಹನವು, ಒಂದೇ ಚಾರ್ಜ್‌ನಲ್ಲಿ 300 ಕಿ.ಮೀ ಓಡಬಲ್ಲದು. ಪೇಟೆಂಟ್ ಪಡೆದ ಕಾಂಪ್ಯಾಕ್ಟ್ 15 kWh ಬ್ಯಾಟರಿ ಪ್ಯಾಕ್‌ನಿಂದ ನಡೆಸಲ್ಪಡುವ ಮತ್ತು 5 ವರ್ಷಗಳ ಬ್ಯಾಟರಿ ಖಾತರಿಯಿಂದ ಬೆಂಬಲಿತವಾಗಿರುವ ಈ ವಾಹನವು ವ್ಯವಹಾರಗಳು, ಫ್ಲೀಟ್ ಮಾಲೀಕರು ಮತ್ತು ಇಂಧನ ಚಾಲಿತ ವಾಹನಗಳಿಗೆ ಪರ್ಯಾಯವನ್ನು ಬಯಸುವವರಿಗಾಗಿ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
ಒಮೆಗಾ ಸೀಕಿ NRG ಕ್ಲೀನ್ ಎಲೆಕ್ಟ್ರಿಕ್ ಅಭಿವೃದ್ಧಿಪಡಿಸಿದ 15 kWh LFP ಬ್ಯಾಟರಿ ಪ್ಯಾಕ್ FLO 150 ನಿಂದ ಚಾಲಿತವಾಗಿದೆ. ಈ ಬ್ಯಾಟರಿಯು ಕ್ಲೀನ್ ಎಲೆಕ್ಟ್ರಿಕ್‌ನ ಹೊಸ ನೇರ ಸಂಪರ್ಕ ಲಿಕ್ವಿಡ್ ಕೂಲ್ಡ್ (DCLC) ವ್ಯವಸ್ಥೆಯನ್ನು ಆಧರಿಸಿದೆ. ಇದು ಅತ್ಯುತ್ತಮ ಉಷ್ಣ ನಿರ್ವಹಣೆ ಮತ್ತು ಸಂಪೂರ್ಣ ಸುರಕ್ಷತೆಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.

ಇದು ಭಾರತದ ಬೇಸಿಗೆಯ ಉತ್ತುಂಗದಲ್ಲಿ ಮತ್ತು ಪ್ರತಿಕೂಲ ವಾತಾವರಣದಲ್ಲಿಯೂ ಸಹ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಕ್ಲೀನ್ ಎಲೆಕ್ಟ್ರಿಕ್‌ನ ಪೇಟೆಂಟ್ ಪಡೆದ ಸೆಲ್ - ಟು - ಪ್ಯಾಕ್ ಆರ್ಕಿಟೆಕ್ಚರ್ 3-ವೀಲರ್ ಅಪ್ಲಿಕೇಶನ್‌ಗೆ ಗರಿಷ್ಠ ಪವರ್‌ಗೆ ಅನುವು ಮಾಡಿಕೊಡುತ್ತದೆ. ಈ ಮೂಲಕ 300 ಕ್ಕೂ ಹೆಚ್ಚು ಕಿ.ಮೀ ಓಡಲು ಅನುವು ಮಾಡುತ್ತದೆ.
ವಿಶೇಷತೆಗಳು: ರೂ. 3.55 ಲಕ್ಷ ರೂಪಾಯಿಗಳ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಈ ವಾಹನವು, ಒಂದೇ ಚಾರ್ಜ್‌ನಲ್ಲಿ 300 ಕಿಮೀ ಓಡಬಲ್ಲದು. ದಕ್ಷ ಮತ್ತು ವಿಶ್ವಾಸಾರ್ಹ ಪರ್ಫಾಮೆನ್ಸ್‌ಗಾಗಿ 15 kWh ಲಾಂಗ್ ರೇಂಜ್ ಬ್ಯಾಟರಿ ಪ್ಯಾಕ್ ಒದಗಿಸಲಾಗಿದೆ. ದೀರ್ಘಾವಧಿಯ ಬಾಳಿಕೆಯನ್ನು ಖಚಿತಪಡಿಸಿಕೊಳ್ಳಲು 5 ವರ್ಷ ಅಥವಾ 2,00,000 ಕಿ.ಮೀ ವಾರೆಂಟಿ ನೀಡಲಾಗಿದೆ.
ಯೂನಿವರ್ಸಲ್ ಪಬ್ಲಿಕ್ ಭಾರತ್ DC-001 ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಕೇವಲ 45 ನಿಮಿಷಗಳಲ್ಲಿ 150 ಕಿ.ಮೀ ಓಡುವಷ್ಟು ಚಾರ್ಜ್ ಆಗಬಲ್ಲದು. ಫ್ಲೀಟ್ ಮಾಲೀಕರು, ಚಾಲಕರು ಮತ್ತು ಸಣ್ಣ ವ್ಯವಹಾರಗಳಿಗೆ ಒಂದೇ ಚಾರ್ಜ್‌ನಲ್ಲಿ 300 ಕಿ.ಮೀ ರೇಂಜ್ ನೀಡುವ ಈ ಎಲೆಕ್ಟ್ರಿಕ್ ವಾಹನದ ಸಾಮರ್ಥ್ಯವು ಮಾಲೀಕರಿಗೆ ಲಾಭ ತಂದುಕೊಡುವಲ್ಲಿ ಒಂದು ಪ್ರಮುಖ ಬದಲಾವಣೆಯಾಗಲಿದೆ.
ಒಮೆಗಾ ಸೀಕಿ ಪ್ರೈ. ಲಿಮಿಟೆಡ್ ಮುಂದಿನ ಹಣಕಾಸು ವರ್ಷದ ವೇಳೆಗೆ 5,000 ಒಮೆಗಾ ಸೀಕಿ NRG ಎಲೆಕ್ಟ್ರಿಕ್ ಪ್ಯಾಸೆಂಜರ್ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಇದು ಮಾಲೀಕರನ್ನು ಸಬಲೀಕರಣಗೊಳಿಸುವ ಮತ್ತು ರಾಷ್ಟ್ರದ ಹಸಿರು ಚಲನಶೀಲತೆ ಪರಿವರ್ತನೆಗೆ ಚಾಲನೆ ನೀಡುವ ಕೈಗೆಟುಕುವ, ಪರಿಸರ ಸ್ನೇಹಿ ಸಾರಿಗೆ ಪರಿಹಾರಗಳಿಗೆ ಸಹಕರಿಸುತ್ತದೆ ಎಂದು ಒಮೆಗಾ ಹೇಳಿಕೊಂಡಿದೆ.
ಕಂಪನಿಯು ತನ್ನ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ ಎಲೆಕ್ಟ್ರಿಕ್ 2,3 ಮತ್ತು 4 ವೀಲರ್‌ಗಳನ್ನು ಹೊಂದಿರುವ ಮೊದಲ ಕಂಪನಿಯಾಗಿದೆ. ಕಂಪನಿಯು ದೆಹಲಿ NCR ಮತ್ತು ಪುಣೆಯಲ್ಲಿ ದೊಡ್ಡ ಪ್ರಮಾಣದ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಿದೆ. ಈಗ ಚೆನ್ನೈನಲ್ಲಿ ವಿಸ್ತರಿಸಲು ನೋಡುತ್ತಿದೆ. ಕಂಪನಿಯು ಪ್ರಸ್ತುತ ಭಾರತದಾದ್ಯಂತ 250 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ಹೊಂದಿರುವುದಾಗಿ ಕಂಪನಿ ಹೇಳಿದೆ.
3-ವೀಲರ್ ಚಾಲಕರು ಪ್ರತಿದಿನ 100 ರಿಂದ 150 ಕಿ.ಮೀ ಓಡಿಸುವುದರಿಂದ ಹೆಚ್ಚಿನ ಮೈಲೇಜ್ ನೀಡುವ ಎಲೆಕ್ಟ್ರಿಕ್ 3-ಚಕ್ರ ವಾಹನಗಳು ಇಂದಿನ ಅಗತ್ಯವಾಗಿದೆ. ಪೀಕ್ ಸೀಸನ್‌ನಲ್ಲಿ, ಅವರ ದೈನಂದಿನ ಓಟವು 200 ಕಿ.ಮೀ.ಗಳವರೆಗೆ ಇರಬಹುದು. ಈ ನಿಟ್ಟಿನಲ್ಲಿ ನೋಡಿಕೊಂಡರೆ ಶೇ25 ರಷ್ಟು ಹೆಚ್ಚಿನ ಉದ್ಯಮ-ಪ್ರಮುಖ ರೇಂಜ್‌ನೊಂದಿಗೆ, ಒಮೆಗಾ ಸೀಕಿ NRG e-3W ವಿಭಾಗದಲ್ಲಿ ಚಾಲಕರಿಗೆ ಚಿನ್ನದ ಮೊಟ್ಟೆಯಾಗಿದೆ ಎಂದು ಕ್ಲೀನ್ ಎಲೆಕ್ಟ್ರಿಕ್‌ನ ಸಹ-ಸಂಸ್ಥಾಪಕ ಆಕಾಶ್ ಗುಪ್ತಾ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








