ಪ್ರತಿ ಚಾರ್ಜ್‌ಗೆ 200 ಕಿ.ಮೀಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಉತ್ಪಾದನೆಯೊಂದಿಗೆ ಮುಂಚೂಣಿ ಸಾಧಿಸುತ್ತಿರುವ ಒಮೆಗಾ ಸೈಕ್ ಕಂಪನಿಯು ಸದ್ಯ ಇವಿ ತ್ರಿ-ಚಕ್ರ ವಾಹನಗಳ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಮಧ್ಯಮ ಮತ್ತು ಭಾರೀ ಗಾತ್ರದ ಇವಿ ಟ್ರಕ್‌ಗಳ ಉತ್ಪಾದನೆಗೂ ಯೋಜನೆ ರೂಪಿಸುತ್ತಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಡೀಸೆಲ್ ವಾಹನಗಳಲ್ಲಿ ಸರಕು ಸಾಗಾಣಿಕೆ ವೆಚ್ಚವು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಜಿಸ್ಟಿಕ್ ವಿಭಾಗದಲ್ಲಿ ಇವಿ ವಾಹನಗಳ ಅಳವಡಿಕೆ ಪ್ರಕ್ರಿಯೆ ಜೋರಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಇವಿ ವಾಣಿಜ್ಯ ವಾಹನ ಉತ್ಪಾದನೆಗಾಗಿ ಒಮೆಗಾ ಸೈಕ್ ಮೊಬಿಲಿಟಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು 2030 ರ ವೇಳೆಗೆ 152 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ತಲುಪುವ ನಿರೀಕ್ಷೆಯಿದ್ದು, ಬೆಳೆಯುತ್ತಿರುವ ಮಾರುಕಟ್ಟೆಯ ಲಾಭ ಪಡೆಯಲು ಒಮೆಗಾ ಸೈಕಿ ಮೊಬಿಲಿಟಿಯು ಕಳೆದ ವರ್ಷ ಫ್ಲೀಟ್‌ ವಿಭಾಗದಡಿಯಲ್ಲಿ 100ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ತೆರೆದಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಒಮೆಗಾ ಸೈಕಿ ಮೊಬಿಲಿಟಿಯು ಇವಿ ವಾಹನಗಳ ಉತ್ಪಾದನೆ ಸ್ಥಳೀಯ ಬಿಡಿಭಾಗಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರೇಜ್ ಪ್ಲಸ್ ಬ್ರ್ಯಾಂಡ್ ಅಡಿಯಲ್ಲಿ ತನ್ನದೇ ಆದ ವಿವಿಧ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳನ್ನು ತಯಾರಿಸುತ್ತದೆ. ಇದರ ಜೊತೆಗೆ ಭವಿಷ್ಯ ವಾಹನ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸಿರುವ ಕಂಪನಿಯು ಇತ್ತೀಚೆಗೆ M1KA HCV ಎಲೆಕ್ಟ್ರಿಕ್ ಟ್ರಕ್‌ಗಳ ರಸ್ತೆ ಪರೀಕ್ಷೆಯನ್ನು ಪ್ರಾರಂಭಿಸಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಹೊಸ ಒಮೆಗಾ ಸೈಕಿ ಹೇವಿ ಲೋಡ್ ಟ್ರಕ್ ಮಾದರಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 1.5 ಟನ್, 3.5 ಟನ್ ಮತ್ತು 6.5 ಟನ್ ಸರಕು ಸಾಮಾರ್ಥ್ಯದ ಇವಿ ಟ್ರಕ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಇವು ಲಘು ಮತ್ತು ಭಾರೀ ಟ್ರಕ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಹೊಸ ಇವಿ ಟ್ರಕ್ ಉತ್ಪಾದನೆಗಾಗಿ ಕಂಪನಿಯು ಫರಿದಾಬಾದ್‌ನಲ್ಲಿರುವ ತನ್ನ ಘಟಕದಲ್ಲಿ ಮಾಡ್ಯುಲರ್ ಇವಿ ಪ್ಲಾಟ್‌ಫಾರ್ಮ್‌ ಸಿದ್ದಪಡಿಸಿದ್ದು, ಒಂದೇ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಕಂಪನಿಯು ಲಘು ಮತ್ತು ಭಾರೀ ಗಾತ್ರದ ಇವಿ ಟ್ರಕ್‌ಗಳನ್ನು ಉತ್ಪಾದನೆ ಮಾಡಲಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಒಮೆಗಾ ಹೊಸ ಟ್ರಕ್‌ಗಳನ್ನು ಇ-ಕಾಮರ್ಸ್, ಗ್ರಾಹಕರ ಸರಕು ಸಾಗಾಣಿಕೆಗೆ, ಕೊರಿಯರ್ ಮತ್ತು ವಿತರಣೆಯಂತಹ ವ್ಯಾಪಕ ಶ್ರೇಣಿಯ ಅಗತ್ಯಗಳಿಗೆ ಅನುಗುಣವಾಗಿ ನಿರ್ಮಾಣ ಮಾಡಲಿದ್ದು, ಹೊಸ ಟ್ರಕ್ ಪ್ರತಿ ಚಾರ್ಜ್‌ಗೆ 200 ಕಿ.ಮೀ ಗೂ ಹೆಚ್ಚು ಬ್ಯಾಟರಿ ರೇಂಜ್ ಹೊಂದಿರಲಿವೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಪ್ರಸ್ತುತ ಈ ಟ್ರಕ್‌ಗಳ ಬ್ಯಾಟರಿ, ರೇಂಜ್, ಮೋಟಾರ್ ವಿವರಗಳ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಹೊಸ ಟ್ರಕ್ ಈ ವರ್ಷಾಂತ್ಯಕ್ಕೆ ರಸ್ತೆಗಿಳಿಯುವ ಸಾಧ್ಯತೆಗಳಿದ್ದು, ಇವು ಸರಕು ಸಾಗಾಣಿಕೆ ವೆಚ್ಚವನ್ನು ಗಣನೀಯವಾಗಿ ಇಳಿಕೆ ಮಾಡುತ್ತವೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಜೊತೆಗೆ ಕಂಪನಿಯು ಹೊಸ ಟ್ರಕ್‌ಗಳೊಂದಿಗೆ ಫ್ಲೀಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಸಹ ಪರಿಚಯಿಸಲಿದ್ದು, ಇದು ಫ್ಲೀಟ್ ಆಪರೇಟರ್‌ಗಳಿಗೆ ಟ್ರಕ್‌ಗಳ ನೈಜ ಸಮಯದ ಟ್ರ್ಯಾಕಿಂಗ್, ಫಿಟ್‌ನೆಸ್, ಸ್ಥಳ ಇತ್ಯಾದಿ ಮಾಹಿತಿಯನ್ನು ಒದಗಿಸುವ ಮೂಲಕ ಮಾಲೀಕತ್ವವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುತ್ತದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಇನ್ನು ಫರಿದಾಬಾದ್‌ನಲ್ಲಿ ತಾತ್ಕಾಲಿಕ ಉತ್ಪಾದನಾ ಘಟಕದೊಂದಿಗೆ ಕಳೆದ ವರ್ಷ ಉತ್ಪಾದನೆ ಆರಂಭಿಸಿದ್ದ ಓಮೆಗಾ ಸೈಕ್ ಕಂಪನಿಯು ಇದೀಗ ಬೃಹತ್ ಬಂಡವಾಳದೊಂದಿಗೆ ಬೆಂಗಳೂರಿನ ಗ್ರಾಮಾಂತರದಲ್ಲಿ ಸುಮಾರು 250 ಎಕರೆ ವಿಸ್ತೀರ್ಣದಲ್ಲಿ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಉತ್ಪಾದನಾ ಘಟಕದ ಉತ್ಪಾದನೆಗಾಗಿ ಕಂಪನಿಯು ಸುಮಾರು 250 ಮಿಲಿಯನ್ ಯುಎಸ್ ಡಾಲರ್(ರೂ.1,900 ಕೋಟಿ) ಹೂಡಿಕೆ ಮಾಡಿದ್ದು, ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಕಂಪನಿಯು ಮುಂದಿನ ಮೂರು ವರ್ಷದೊಳಗಾಗಿ ವಾರ್ಷಿಕವಾಗಿ 10 ಲಕ್ಷ ಇವಿ ವಾಣಿಜ್ಯ ವಾಹನಗಳನ್ನು ಉತ್ಪಾದನೆ ಮಾಡಲಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

250 ಎಕರೆ ವಿಸ್ತಾರ ಹೊಂದಿರುವ ಓಮೆಗಾ ಸೈಕ್ ಉತ್ಪಾದನಾ ಘಟಕವು ಮುಂದಿನ ಮೂರು ವರ್ಷಗಳಲ್ಲಿ ಘಟಕದ ವಿಸ್ತರಣೆಯು ಇನ್ನಷ್ಟು ಹೆಚ್ಚಲಿದ್ದು, ಕಂಪನಿಯು ಹೊಸ ಇವಿ ವಾಣಿಜ್ಯ ವಾಹನಗಳನ್ನು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಕೈಗೊಳ್ಳುವ ಯೋಜನೆಯಲ್ಲಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ವಿಶ್ವ ಭೂಮಿ ದಿನ ದಿನಾಚರಣೆಯೆಂದೆ ಒಮೆಗಾ ಸೈಕ್ ಕಂಪನಿಯು ತನ್ನ ಪರಿಸರ ಸ್ನೇಹಿ ವಾಹನ ಉತ್ಪಾದನಾ ಘಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಹೊಸ ಘಟಕದೊಂದಿಗೆ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಒಮೆಗಾ ಸೈಕ್ ಕಂಪನಿಯು ಸದ್ಯ ದೇಶಾದ್ಯಂತ ಕೆಲವೇ ಕೆಲವು ನಗರಗಳಲ್ಲಿ ಮಾರಾಟ ಸೌಲಭ್ಯಕ್ಕೆ ಚಾಲನೆ ನೀಡಿದ್ದು, ಪಾಲುದಾರಿಕೆ ಯೋಜನೆಯಡಿ ಮಾರಾಟ ವಿಸ್ತರಿಸಿರುವುದರಿಂದ ವಿವಿಧ ನಗರಗಳಲ್ಲಿ 500 ಮಾರಾಟ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಾಗುತ್ತಿದೆ.

ಪ್ರತಿ ಚಾರ್ಜ್‌ಗೆ 200ಕಿ.ಮೀ ಗೂ ಅಧಿಕ ಮೈಲೇಜ್ ಪ್ರೇರಿತ ಇವಿ ಟ್ರಕ್ ಬಿಡುಗಡೆ ಮಾಡಲಿದೆ ಒಮೆಗಾ ಸೈಕಿ

ಕಂಪನಿಯು ರೇಜ್ ಪ್ಲಸ್ ಫ್ರಾಸ್ಟ್ ಬ್ರಾಂಡ್ ಹೆಸರಿನಲ್ಲಿ ಇತ್ತೀಚೆಗೆ ಭಾರತದ ಮೊದಲ ರೆಫ್ರಿಜರೇಟೆಡ್ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನವನ್ನು ಸಹ ಬಿಡುಗಡೆ ಮಾಡಿದ್ದು, ಲಾಜಿಸ್ಟಿಕ್ ವಿಭಾಗದಲ್ಲಿ ಹೊಸ ವಾಣಿಜ್ಯ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದೆ.

Source: Carandbike

Most Read Articles

Kannada
English summary
Omega seiki mobility to launch electric truck spotted testing
Story first published: Friday, May 6, 2022, 15:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X