ಕೈಗೆಟುಕುವ ಹ್ಯುಂಡೈ ಔರಾ AMT ವೇರಿಯೆಂಟ್ ಇತ್ತೀಚೆಗೆ ಬಿಡುಗಡೆ: ವಿಶೇಷತೆಗಳೇನು?

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ತನ್ನ ಜನಪ್ರಿಯ ಔರಾ (AURA) ಸೆಡಾನ್ ಶ್ರೇಣಿಯನ್ನು ಹೊಸ S AMT (ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ವೇರಿಯೆಂಟ್ ಅನ್ನು ಪರಿಚಯಿಸುವ ಮೂಲಕ ವಿಸ್ತರಿಸಿದೆ. ಇದು ಆರಂಭಿಕ ಹಂತದ ಸೆಡಾನ್ ವಿಭಾಗದಲ್ಲಿ AMT ತಂತ್ರಜ್ಞಾನ ಹೊಂದಿರುವ ಕಾರನ್ನು ಹೆಚ್ಚು ಖರೀದಿಸುವಂತೆ ಮಾಡಲಿದೆ. ಹೊಸ S AMT ವೇರಿಯೆಂಟ್ ಪ್ರಭಾವಶಾಲಿ ಫೀಚರ್ಸ್ ಹೊಂದಿದ್ದು, ಅವುಗಳಲ್ಲಿ ಹಲವು ಉನ್ನತ ವಿಭಾಗದ ವಾಹನಗಳಲ್ಲಿ ಕಂಡುಬರುತ್ತವೆ. ಈ ಕಾರಿನಲ್ಲಿ ಲಭ್ಯವಿರುವ ಹಲವು ವಿಶೆಷತೆಗಳನ್ನು ಇಲ್ಲಿ ವಿವರಿಸಲಾಗಿದೆ.

ಮೌಲ್ಯ ಪ್ರಜ್ಞೆಯುಳ್ಳ ಖರೀದಿದಾರರು, ಅನುಕೂಲತೆ ಮತ್ತು ಸುರಕ್ಷತೆಯನ್ನು ಬಯಸುವವರಿಗೆ ಹ್ಯುಂಡೈ ಔರಾ ಬೆಸ್ಟ್ ಆಯ್ಕೆಯಾಗಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಹೆಚ್ಚಾಗಿ ಖರೀದಿಸುವಂತೆ ಮಾಡುತ್ತದೆ. ಹೊಸ ಹುಂಡೈ ಔರಾ S AMT ಮಾಡಲ್ ಅತ್ಯಂತ ಕೈಗೆಟುಕುವ AMT ಆಯ್ಕೆಯಾಗಿದ್ದು, ಇದರ ಬೆಲೆಯು ರೂ. 8,07,700 (ಎಕ್ಸ್ ಶೋರೂಂ) ಇದೆ.

recently-introduced-new-hyundai-aura-s-amt-variant-details

ಪ್ರಮುಖ ವೈಶಿಷ್ಟ್ಯಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕಡಿಮೆ ಬೆಲೆಯಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಯಸುವ ಯುವ, ನಗರ ಖರೀದಿದಾರರಿಗಾಗಿ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಔರಾ S AMT ಯು ಟಾಟಾ ಟಿಗೋರ್, ಮಾರುತಿ ಸುಜುಕಿ ಡಿಜೈರ್ ಮತ್ತು ಹೋಂಡಾ ಅಮೇಜ್ ‌ನಂತಹ ವಿಭಾಗದ ಪ್ರತಿಸ್ಪರ್ಧಿಗಳೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ.

ಹ್ಯುಂಡೈ ಔರಾ S AMT ವೈಶಿಷ್ಟ್ಯಗಳು

ಮೊದಲಿಗೆ ಸುರಕ್ಷತಾ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಹೈಲೈನ್), EBD ಜೊತೆಗೆ ABS, ಅನುಕೂಲತೆ ಮತ್ತು ಸೌಕರ್ಯ ಸೇರಿದಂತೆ ಆಕರ್ಷಕ ಡಿಸೈನ್‌ಗಾಗಿ LED ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು (DRLs) ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳೊಂದಿಗೆ ವಿದ್ಯುತ್ ಮಡಿಸುವ ORVMಗಳನ್ನು ನೀಡಲಾಗಿದೆ.

recently-introduced-new-hyundai-aura-s-amt-variant-details

ಇವಿಷ್ಟೆ ಅಲ್ಲದೆ ಇಂಟೀರಿಯರ್‌ನಲ್ಲಿ ಸ್ಟೀರಿಂಗ್ - ಮೌಂಟೆಡ್ ಆಡಿಯೊ ಕಂಟ್ರೋಲ್, ಮ್ಯಾನುವಲ್ ಎಸಿ, ವಿನ್ಯಾಸ ಮತ್ತು ಆಕರ್ಷಣೆ, ವೆಚ್ಚ - ಪರಿಣಾಮಕಾರಿ ಪ್ಯಾಕೇಜಿಂಗ್‌ನೊಂದಿಗೆ ಟಾಪ್ ವೇರಿಯೆಂಟ್‌ಗಳಿಗೆ ಹೋಲುವ ಡಿಸೈನ್‌ನೊಂದಿಗೆ ಬರುತ್ತದೆ. ಮೊದಲ ಬಾರಿಯ ಕಾರು ಖರೀದಿದಾರರು ಮತ್ತು ನಗರ ಪ್ರಯಾಣಿಕರಿಗೆ ಈ AMT ಹೊಂದಿರುವ ಕೈಗೆಟುಕುವ ಔರಾ ಬೆಸ್ಟ್ ಆಯ್ಕೆಯಾಗಿದೆ.

S AMT ರೂಪಾಂತರದೊಂದಿಗೆ ಹುಂಡೈ ಔರಾ ಶ್ರೇಣಿಯ ವಿಸ್ತರಣೆಯು ವ್ಯಾಪಕ ಶ್ರೇಣಿಯ ಭಾರತೀಯ ಗ್ರಾಹಕರಿಗೆ ಕೈಗೆಟುಕುವ ಮತ್ತು ಸುಧಾರಿತ ತಂತ್ರಜ್ಞಾನಕ್ಕೆ ಹುಂಡೈನ ಬದ್ಧತೆಯನ್ನು ಸೂಚಿಸುತ್ತದೆ. ಹೆಚ್ಚಿನ ಬೆಲೆ ಇಲ್ಲದೆ AMT ಅನುಕೂಲವನ್ನು ಬಯಸುವ ಗ್ರಾಹಕರಲ್ಲಿ ಈ ಕಾರು ಮತ್ತಷ್ಟು ಹತ್ತಿರವಾಗಲಿದೆ ಎಂದು ಹ್ಯುಂಡೈ ನಿರೀಕ್ಷಿಸುತ್ತದೆ.

recently-introduced-new-hyundai-aura-s-amt-variant-details

"ಹುಂಡೈ ಔರಾ ಎಸ್ S AMTಯಲ್ಲಿ ಸುಧಾರಿತ ಎಎಮ್‌ಟಿ ಟ್ರಾನ್ಸ್ ‌ಮಿಷನ್ ಪರಿಚಯವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ಗ್ರಾಹಕರಿಗೆ ಅನುಕೂಲತೆಯನ್ನು ಹೆಚ್ಚಿಸಲು ನಮ್ಮ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ನಮ್ಮ ಈ ಹೊಸ ಸೆಡಾನ್ ತನ್ನ ವಿಭಾಗದಲ್ಲಿ ಪ್ರತ್ಯೇಕವಾಗಿ ನಿಲ್ಲುವ ನಿರೀಕ್ಷೆಯಿದ್ದು, ಗ್ರಾಹಕರನ್ನು ಮೆಚ್ಚಿಸುವ ವಿಶ್ವಾಸವಿದೆ.

ಈ ಪರಿಚಯದೊಂದಿಗೆ, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಸೌಕರ್ಯ, ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಅನುಕೂಲತೆಯನ್ನು ನೀಡುವ ಮೂಲಕ ಪ್ರವೇಶ ವಿಭಾಗದಲ್ಲಿ ಮೌಲ್ಯ ಪ್ರತಿಪಾದನೆಯನ್ನು ಮರು ವ್ಯಾಖ್ಯಾನಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದು ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಪೂರ್ಣಾವಧಿ ನಿರ್ದೇಶಕ ತರುಣ್ ಗರ್ಗ್ ಹೇಳಿದರು.

More from DriveSpark

Article Published On: Friday, July 18, 2025, 11:46 [IST]
English summary
Recently introduced new hyundai aura s amt variant details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+