ಇತ್ತೀಚೆಗಷ್ಟೆ ಬಿಡುಗಡೆ... 6.29 ಲಕ್ಷ ಬೆಲೆ... ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್‌ ಡೆಲಿವರಿ ಪ್ರಾರಂಭ

ಆಗಸ್ಟ್ ಅಂತ್ಯದಲ್ಲಿ ಅಧಿಕೃತವಾಗಿ ಬಿಡುಗಡೆಯಾದ ನಂತರ, 2025 ರ ರೆನಾಲ್ಟ್ ಕೈಗರ್ (Renault Kiger) ಫೇಸ್‌ಲಿಫ್ಟ್‌ನ ವಿತರಣೆಗಳು ಭಾರತದಲ್ಲಿ ಪ್ರಾರಂಭವಾಗಿವೆ. ಈ ಅಪ್‌ಡೇಟೆಡ್ ಸಬ್ - ಕಾಂಪ್ಯಾಕ್ಟ್ ಎಸ್‌ಯುವಿ ಪರಿಷ್ಕೃತ ಸ್ಟೈಲಿಂಗ್, ಹೆಚ್ಚಿನ ಪ್ರೀಮಿಯಂ ಸೌಲಭ್ಯಗಳು, ನವೀಕರಿಸಿದ ತಂತ್ರಜ್ಞಾನ ಮತ್ತು ವರ್ಧಿತ ಸುರಕ್ಷತೆಯೊಂದಿಗೆ ಬರುತ್ತದೆ. ಅದರ ಬಲವಾದ ಹಣಕ್ಕೆ ತಕ್ಕ ಮೌಲ್ಯವನ್ನು ಹಾಗೆಯೇ ಉಳಿಸಿಕೊಂಡಿದ್ದು, ಗ್ರಾಹಕರಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ. 2025 ರ ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್‌ನ ಬೆಲೆ, ವೇರಿಯೆಂಟ್ ಮತ್ತು ಪ್ರಮುಖ ವೈಶಿಷ್ಟ್ಯಗಳ ಸಂಪೂರ್ಣ ನೋಟ ಇಲ್ಲಿದೆ.

ಬೆಲೆ ಮತ್ತು ವೇರಿಯೆಂಟ್‌ಗಳು: 2025 ರ ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್ ಬೇಸ್‌ ವೇರಿಯೆಂಟ್ ಬೆಲೆಯು ರೂ. 6.29 ಲಕ್ಷ (ಎಕ್ಸ್ - ಶೋರೂಂ) ದಿಂದ ಖರೀದಿಗೆ ಲಭ್ಯವಿದೆ. ಟಾಪ್ - ಎಂಡ್ ವೇರಿಯೆಂಟ್ ಆಗಿರುವ ಎಮೋಷನ್ ಟರ್ಬೊ ಸಿವಿಟಿ ಬೆಲೆಯು 11.29 ಲಕ್ಷದವರೆಗೆ (ಎಕ್ಸ್‌ - ಶೊರೂಂ) ಇದೆ.

recently-launched-renault-kiger-facelift-deliveries-begin

ಮಾಡಲ್ ಶ್ರೇಣಿಯನ್ನು ಅಥೆಂಟಿಕ್, ಎವಲ್ಯೂಷನ್, ಟೆಕ್ನೋ ಮತ್ತು ಎಮೋಷನ್ ಎಂಬ ನಾಲ್ಕು ಪ್ರಾಥಮಿಕ ಟ್ರಿಮ್‌ಗಳಲ್ಲಿ ನೀಡಲಾಗುತ್ತಿದೆ. ಪ್ರತಿ ಟ್ರಿಮ್ 1.0-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ (ಮ್ಯಾನುಯಲ್/ಎಎಂಟಿ), 1.0-ಲೀಟರ್ ಟರ್ಬೊ-ಪೆಟ್ರೋಲ್ (ಮ್ಯಾನುಯಲ್/ಸಿವಿಟಿ) ಮತ್ತು ಆಯ್ದ ಟ್ರಿಮ್‌ಗಳಿಗೆ ಸಿಎನ್‌ಜಿ ರೂಪಾಂತರ ಸೇರಿದಂತೆ ಬಹು ಡ್ರೈವ್‌ಟ್ರೇನ್ ಆಯ್ಕೆಗಳನ್ನು ನೀಡುತ್ತದೆ.

ಬಾಹ್ಯ ಮತ್ತು ಒಳಾಂಗಣ ನವೀಕರಣಗಳು: ಈ ಫೇಸ್‌ಲಿಫ್ಟ್ ಹೊಸ ಗ್ರಿಲ್, ರೆನಾಲ್ಟ್‌ನ ಇತ್ತೀಚಿನ "ಡೈಮಂಡ್" ಲೋಗೋ ಮತ್ತು ಹೊಸ ಬಂಪರ್ ವಿನ್ಯಾಸಗಳೊಂದಿಗೆ ನವೀಕರಣಗೊಂಡಿದೆ. LED ಹೆಡ್‌ಲ್ಯಾಂಪ್‌ಗಳು, ಹೊಸ C - ಆಕಾರದ LED ಟೈಲ್‌ ಲ್ಯಾಂಪ್‌ಗಳು ಮತ್ತು 16 - ಇಂಚಿನ ಡೈಮಂಡ್ - ಕಟ್ ಅಲಾಯ್ ವೀಲ್‌ಗಳು ರಸ್ತೆಯ ಉಪಸ್ಥಿತಿಯನ್ನು ಹೆಚ್ಚಿಸುತ್ತವೆ.

recently-launched-renault-kiger-facelift-deliveries-begin

ಇನ್ನು ಇಂಟೀರಿಯರ್‌ನಲ್ಲಿ ಖರೀದಿದಾರರು ವೆಂಟಿಲೇಟೆಡ್ ಲೆಥೆರೆಟ್ ಸೀಟುಗಳು, ಡ್ಯುಯಲ್ - ಟೋನ್ ಡ್ಯಾಶ್‌ಬೋರ್ಡ್, ಸುಧಾರಿತ ವಾಯಿಸ್ ಇನ್ಸೂಲೇಷನ್ ಮತ್ತು ಹೆಚ್ಚುವರಿ ಕ್ಯಾಬಿನ್ ಪರಿಷ್ಕರಣೆಯನ್ನು ಕಾಣಬಹುದು. ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಆಟೋ ಹೆಡ್‌ಲ್ಯಾಂಪ್ ‌ಗಳು, ರೈನ್ - ಸೆನ್ಸಾರ್ ವೈಪರ್‌ಗಳು, ಮಲ್ಟಿ - ವ್ಯೂ ಕ್ಯಾಮೆರಾದೊಂದಿಗೆ ಎಂಟು ಇಂಚಿನ ಟಚ್‌ಸ್ಕ್ರೀನ್ ‌ನಂತಹ ಪ್ರೀಮಿಯಂ ಸ್ಪರ್ಶಗಳು ಇನ್ - ಕ್ಯಾಬಿನ್ ಅನುಭವವನ್ನು ಹೆಚ್ಚಿಸುತ್ತವೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ: ಹೊಸ ಕಿಗರ್ ಅತ್ಯುತ್ತಮವಾದ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಏಕೀಕರಣ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಹಿಂಭಾಗದ ಎಸಿ ವೆಂಟ್‌ಗಳು, ಮಲ್ಟಿ - ವ್ಯೂ ಕ್ಯಾಮೆರಾ ಮತ್ತು ವೈರ್‌ಲೆಸ್ ಚಾರ್ಜಿಂಗ್ (ಹೈ ಟ್ರಿಮ್‌ಗಳು), ಶ್ರೇಣಿಯಾದ್ಯಂತ ಆರು ಏರ್‌ಬ್ಯಾಗ್‌ಗಳು, 21 ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ಸಾಧನಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ - ಸ್ಟಾರ್ಟ್ ಅಸಿಸ್ಟ್, TPMS ಮತ್ತು ISOFIX ಮೌಂಟ್‌ಗಳು ಇವೆ.

recently-launched-renault-kiger-facelift-deliveries-begin

ಎಂಜಿನ್‌ಗಳು ಮತ್ತು ಕಾರ್ಯಕ್ಷಮತೆ: ಕೈಗರ್ ಫೇಸ್‌ಲಿಫ್ಟ್ ತನ್ನ ವಿಶ್ವಾಸಾರ್ಹ 1.0 - ಲೀಟರ್ NA ಮತ್ತು ಟರ್ಬೊ - ಪೆಟ್ರೋಲ್ ಪವರ್‌ಟ್ರೇನ್‌ಗಳನ್ನು ಉಳಿಸಿಕೊಂಡಿದೆ. ಟರ್ಬೊ 98 bhp ಪವರ್ ಮತ್ತು 160 Nm ಟಾರ್ಕ್ ಅನ್ನು ನೀಡುತ್ತದೆ. ಮ್ಯಾನುವಲ್, AMT ಮತ್ತು CVT ಗೇರ್‌ಬಾಕ್ಸ್‌ಗಳನ್ನು ನೀಡಲಾಗುತ್ತದೆ. ಜೊತೆಗೆ ಇಂಧನ - ಸಮರ್ಥ CNG ಆಯ್ಕೆಯನ್ನು ನೀಡಲಾಗುತ್ತದೆ.

ಪೆಟ್ರೋಲ್ ಮಾಡಲ್‌ಗಳು 20.38 kmpl ವರೆಗೆ ಮೈಲೇಜ್ ನೀಡುತ್ತವೆ ಎಂದು ಕಂಪನಿ ತಿಳಿಸಿದೆ. ಒಟ್ಟಾರೆ 2025 ರ ರೆನಾಲ್ಟ್ ಕೈಗರ್ ಫೇಸ್‌ಲಿಫ್ಟ್ ಕಾಂಪ್ಯಾಕ್ಟ್, ಸಣ್ಣ SUV ವಿಭಾಗದಲ್ಲಿ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಸುರಕ್ಷತೆಯೊಂದಿಗೆ ಎದ್ದು ಕಾಣುತ್ತದೆ. ಟಾಟಾ ನೆಕ್ಸಾನ್, ಹುಂಡೈ ವೆನ್ಯೂ, ಕಿಯಾ ಸೋನೆಟ್ ಮತ್ತು ಮಾರುತಿ ಫ್ರಾಂಕ್ಸ್‌ನಂತಹ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Thursday, September 4, 2025, 17:29 [IST]
English summary
Recently launched renault kiger facelift deliveries begin
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+