Renault: ಈಗಲೇ ಶೋರೂಂಗೆ ಭೇಟಿ ನೀಡಿ.. ಈ ಪ್ರಖ್ಯಾತ ಕಾರುಗಳಿಗೆ ಭಾರೀ ರಿಯಾಯಿತಿ ಘೋಷಣೆ!
ರೆನಾಲ್ಟ್ ಇಂಡಿಯಾ (Renault India) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕ್ವಿಡ್, ಕಿಗರ್ ಹಾಗೂ ಟ್ರೈಬರ್ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿದ್ದು, ಗ್ರಾಹಕರು ಇಷ್ಟಪಟ್ಟು ತಮ್ಮ ಕುಟುಂಬದ ವಾಹನವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ, ರೆನಾಲ್ಟ್ ಕಂಪನಿಯು ಮತ್ತಷ್ಟು ಸಂಖ್ಯೆಯಲ್ಲಿ ಖರೀದಿದಾರರನ್ನು ಸೆಳೆಯಲು ಈ ಮಾರ್ಚ್ ತಿಂಗಳಲ್ಲಿ ಎಲ್ಲ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಘೋಷಣೆ ಮಾಡಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಮಾಹಿತಿ ನೀಡಿದೆ.
ರೆನಾಲ್ಟ್ ಕ್ವಿಡ್ (Renault Kwid): ಇದೊಂದು ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರಿನ 2025ರ ಮಾಡೆಲ್‌ಗಳು, ರೂ.35,000 ವರೆಗೆ ರಿಯಾಯಿತಿಯನ್ನು ಪಡೆದಿವೆ. ಅದರಲ್ಲಿ ರೂ.10,000 ನಗದು ರಿಯಾಯಿತಿ, ರೂ.15,000 ವಿನಿಯಮ ಪ್ರಯೋಜನ ಹಾಗೂ ರೂ.10,000 ಲಾಯಲ್ಟಿ ನಗದು ಪ್ರಯೋಜನಗಳು ಕೂಡ ಸೇರಿವೆ.

ನೂತನ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್‌ನ 2024ರ ಮಾಡೆಲ್‌ಗಳು, ರೂ.65,000 ವರೆಗೆ ಹಣಕಾಸಿನ ಪ್ರಯೋಜನವನ್ನು ಹೊಂದಿವೆ. ಇದರೊಳಗೆ ರೂ.40,000 ನಗದು ರಿಯಾಯಿತಿ, ರೂ.15,000 ವಿನಿಯಮ ಪ್ರಯೋಜನ ಮತ್ತು ರೂ.10,000 ಲಾಯಲ್ಟಿ ನಗದು ಪ್ರಯೋಜನಗಳು ಸಹ ಇವೆ. ಈ ಕಾರು ರೂ.4.70 ಲಕ್ಷದಿಂದ ರೂ.6.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.
ರೆನಾಲ್ಟ್ ಕಿಗರ್ (Renault Kiger): ಇದು ಪ್ರಮುಖವಾದ ಎಸ್‌ಯುವಿಯಾಗಿದೆ. ಈ ಕಾರಿನ 2025 ಹಾಗೂ 2024ರ ಮಾಡೆಲ್‌ಗಳು, ರೂ.40,000 ವರೆಗೆ ರಿಯಾಯಿತಿಯನ್ನು ಹೊಂದಿವೆ. ಅದರಲ್ಲಿ ರೂ.15,000 ನಗದು ರಿಯಾಯಿತಿ, ರೂ.15,000 ವಿನಿಯಮ ಪ್ರಯೋಜನ ಹಾಗೂ ರೂ.10,000 ಲಾಯಲ್ಟಿ ನಗದು ಪ್ರಯೋಜನಗಳು ಕೂಡ ಸೇರಿವೆ.

ಹೊಸ ರೆನಾಲ್ಟ್ ಕಿಗರ್ ಕಾರು ರೂ.6.10 ಲಕ್ಷದಿಂದ ರೂ.11.23 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಮತ್ತು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 18.24 ರಿಂದ 20.5 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ರೆನಾಲ್ಟ್ ಟ್ರೈಬರ್ (Renault Triber): ಇದೊಂದು ಪ್ರಖ್ಯಾತ ಎಂಪಿವಿಯಾಗಿದೆ. ಈ ಕಾರಿನ 2025 ಮತ್ತು 2024ರ ಮಾಡೆಲ್‌ಗಳು, ರೂ.35,000 ವರೆಗೆ ರಿಯಾಯಿತಿಯನ್ನು ಪಡೆದಿವೆ. ಇದರೊಳಗೆ ರೂ.10,000 ನಗದು ರಿಯಾಯಿತಿ, ರೂ.15,000 ವಿನಿಯಮ ಪ್ರಯೋಜನ ಹಾಗೂ ರೂ.10,000 ಲಾಯಲ್ಟಿ ನಗದು ಪ್ರಯೋಜನಗಳಿವೆ.

ರೆನಾಲ್ಟ್ ಟ್ರೈಬರ್ ಎಂಪಿವಿ ಕನಿಷ್ಠ ರೂ.6 ಲಕ್ಷ ಹಾಗೂ ರೂ.8.97 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 18.2 ರಿಂದ 20 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ. ಇದರಲ್ಲಿ 7 ಮಂದಿ ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜರ್ ಹಾಗೂ ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








