Renault: ಎಲ್ಲ ಕಾರುಗಳ ಮೇಲೆ ದೊಡ್ಡ ರಿಯಾಯಿತಿ ಘೋಷಣೆ, 4.69 ಲಕ್ಷ ಆರಂಭಿಕ ಬೆಲೆ.. ತಕ್ಷಣ ಶೋರೂಂಗೆ ಹೋಗಿ!
ರೆನಾಲ್ಟ್ ಇಂಡಿಯಾ (Renault India), ದೇಶೀಯ ಮಾರುಕಟ್ಟೆಯಲ್ಲಿ ಕ್ವಿಡ್, ಕಿಗರ್ ಹಾಗೂ ಟ್ರೈಬರ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು ಹೆಚ್ಚಿನ ಖರೀದಿದಾರರನ್ನು ತನ್ನತ್ತ ಸೆಳೆಯಲು ಈ ಫೆಬ್ರವರಿಯಲ್ಲಿ ಎಲ್ಲ ಕಾರುಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಮೊದಲಿಗೆ ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಗಿರುವ ರೆನಾಲ್ಟ್ ಕ್ವಿಡ್ (Renault Kwid) ಪಡೆದಿರುವ ಹಣಕಾಸಿನ ಪ್ರಯೋಜನಗಳ ಕುರಿತಂತೆ ಮಾತನಾಡೋಣ. ಈ ಫೆಬ್ರವರಿಯಲ್ಲಿ ದೇಶಾದ್ಯಂತ 2025ರ ಕ್ವಿಡ್ ಮಾಡೆಲ್‌ಗಳು, ಒಟ್ಟು ರೂ.35,000 ವರೆಗೆ ರಿಯಾಯಿತಿಯನ್ನು ಹೊಂದಿವೆ. ಅದೇ ರೀತಿಯಲ್ಲಿ 2024ರ ಮಾಡೆಲ್‌ಗಳು, ಅತಿಹೆಚ್ಚು ಅಂದರೆ ಸರಿ ಸುಮಾರು ರೂ.55,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದಿವೆ.

ದೇಶೀಯ ಗ್ರಾಹಕರ ಖರೀದಿಗೆ ಲಭ್ಯವಿರುವ ಹೊಸ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್, ಕನಿಷ್ಠ ರೂ.4.69 ಲಕ್ಷ & ಗರಿಷ್ಠ ರೂ.6.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದು 1-ಲೀ. ಪೆಟ್ರೋಲ್ ಎಂಜಿನ್ ಪಡೆದಿದ್ದು, 21.46 ರಿಂದ 22.3 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿರುವ ಈ ಕಾರು, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ರೆನಾಲ್ಟ್ ಕಿಗರ್ (Renault Kiger) ಪ್ರಖ್ಯಾತ ಎಸ್‌ಯುವಿಯಾಗಿದ್ದು, ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ತಿಂಗಳು ಭರ್ಜರಿಯಾದ ರಿಯಾಯಿತಿ ಪಡೆದಿದೆ. 2025ರ ಕಿಗರ್ ಮಾಡೆಲ್‌ಗಳು, ರೂ.35,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಹೊಂದಿವೆ. ಹಾಗೆಯೇ 2024ರ ಮಾಡೆಲ್‌ಗಳು, ಸರಿ ಸುಮಾರು ರೂ.65,000 ವರೆಗೆ ರಿಯಾಯಿತಿಯನ್ನು ಒಳಗೊಂಡಿವೆ.

ನೂತನ ರೆನಾಲ್ಟ್ ಕಿಗರ್ ಕನಿಷ್ಠ ರೂ.5.99 ಲಕ್ಷ ಹಾಗೂ ಗರಿಷ್ಠ ರೂ.11.23 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & 1-ಲೀ. ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 18.24 ರಿಂದ 20.5 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ. ಇದು ಕೂಡ 5 ಆಸನಗಳನ್ನು ಹೊಂದಿದೆ.
ರೆನಾಲ್ಟ್ ಟ್ರೈಬರ್ (Renault Triber) ಪ್ರಮುಖ ಎಂಪಿವಿಯಾಗಿದ್ದು, ಈ ಫೆಬ್ರವರಿ ತಿಂಗಳು ಹೆಚ್ಚಿನ ರಿಯಾಯಿತಿ ಪಡೆದಿದೆ. ದೇಶಾದ್ಯಂತ 2025ರ ಕಿಗರ್ ಮಾಡೆಲ್‌ಗಳು, ರೂ.35,000 ವರೆಗೆ ಹಣಾಕಾಸಿನ ಪ್ರಯೋಜನವನ್ನು ಹೊಂದಿವೆ. ಜೊತೆಗೆ 2024ರ ಮಾಡೆಲ್‌ಗಳು ಬರೋಬ್ಬರಿ 60,000 ವರೆಗೆ ರಿಯಾಯಿತಿಯನ್ನು ಒಳಗೊಂಡಿವೆ.

ಹೊಸ ರೆನಾಲ್ಟ್ ಟ್ರೈಬರ್ ಎಂಪಿವಿ ಕನಿಷ್ಠ ರೂ.5.99 ಲಕ್ಷ ಮತ್ತು ಗರಿಷ್ಠ ರೂ.8.97 ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು 1-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 18.2 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 7 ಆಸನ ವ್ಯವಸ್ಥೆಯನ್ನು ಪಡೆದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








