Renault: ಸಿಎನ್‌ಜಿ ವಿಭಾಗಕ್ಕೆ ರೆನಾಲ್ಟ್ ಎಂಟ್ರಿ: ಮೊದಲೇ ಹೆಚ್ಚು ಮೈಲೇಜ್, ಈಗ ಮತ್ತಷ್ಟು ದಕ್ಷತೆ!

ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ರೆನಾಲ್ಟ್' ತನ್ನ ಕೈಗರ್, ಟ್ರೈಬರ್ ಮತ್ತು ಕ್ವಿಡ್‌ನ ಸಿಎನ್‌ಜಿ ಆವೃತ್ತಿಗಳನ್ನು ಇಂದು ಭಾರತದಲ್ಲಿ ಪರಿಚಯಿಸಿದೆ. ಕಂಪನಿಯ ಈ ಕ್ರಮವು ಪರಿಸರ ಪ್ರಜ್ಞೆಯುಳ್ಳ ಖರೀದಿದಾರರಲ್ಲಿ ರೆನಾಲ್ಟ್ ಮೇಲೆ ಆಕರ್ಷಣೆಯನ್ನು ಹೆಚ್ಚಿಸುವುದರ ಜೊತೆಗೆ ಸ್ಮಾರ್ಟ್, ಕೈಗೆಟುಕುವ ಕಾರುಗಳನ್ನು ನೀಡುವಲ್ಲಿ ಕಂಪನಿಯ ಬದ್ಧತೆಯನ್ನು ಬಲಪಡಿಸಲಿದೆ ಎಂದು ರೆನಾಲ್ಟ್ ಹೇಳಿಕೊಂಡಿದೆ. ಇನ್ನು ಕಾರುಗಳ ವಿಷಯಕ್ಕೆ ಬಂದರೆ ರೆನಾಲ್ಟ್ ತನ್ನ ಎಲ್ಲಾ ಮೂರು ಕಾರುಗಳೊಂದಿಗೆ ಸಿಎನ್‌ಜಿ ಆಯ್ಕೆಯನ್ನು ರೆಟ್ರೋಫಿಟ್ ಮೆಂಟ್ ಮತ್ತು ಮೂರು ವರ್ಷಗಳ ವಾರಂಟಿಯಾಗಿ ನೀಡಲಿದೆ.

ವಿಶೇಷವೆಂದರೆ, ಟರ್ಬೊ ಮತ್ತು ಆಟೋಮ್ಯಾಟಿಕ್ ವೇರಿಯೆಂಟ್‌ಗಳನ್ನು ಹೊರತುಪಡಿಸಿ ಮ್ಯಾನುವಲ್ ವೇರಿಯೆಂಟ್‌ಗಳನ್ನು ಮಾತ್ರ ಸಿಎನ್‌ಜಿಯೊಂದಿಗೆ ನೀಡಲಾಗಿದೆ. ಎಲ್ಲಾ ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮಾನದಂಡಗಳನ್ನು ಪೂರೈಸಲು ಬ್ರಾಂಡ್ ಈ ಕಿಟ್‌ಗಳನ್ನು ಏಕರೂಪಗೊಳಿಸಿದೆ. ಈ ಕ್ರಮದಿಂದ ಭಾರತದಲ್ಲಿ ರೆನಾಲ್ಟ್ ಅನ್ನು ಪ್ರಾಯೋಗಿಕ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿ ಮಾಡಲಿದೆ.

renault-introduced-cng-kit-for-triber-kiger-and-kwid

ಕೈಗರ್ ಮತ್ತು ಟ್ರೈಬರ್‌ಗೆ ರೂ. 79,500 ಮತ್ತು ಕ್ವಿಡ್‌ಗೆ ರೂ. 75,000 ಬೆಲೆಯ ಸಿಎನ್‌ಜಿ ಕಿಟ್‌ಗಳು, ಮೂರು ವರ್ಷಗಳ ವಾರಂಟಿಯೊಂದಿಗೆ ಬರುತ್ತವೆ. ಮ್ಯಾನುವಲ್ ಪೆಟ್ರೋಲ್ ರೂಪಾಂತರಗಳಿಗೆ (ಆಟೋಮ್ಯಾಟಿಕ್ ಮತ್ತು ಟರ್ಬೊ ಮಾದರಿಗಳನ್ನು ಹೊರತುಪಡಿಸಿ) ಲಭ್ಯವಿರುವ ಕಿಟ್ ಗಳನ್ನು ಪ್ರಮಾಣೀಕೃತ ಮಾರಾಟಗಾರರ ಮೂಲಕ ಸ್ಥಾಪಿಸಲಾಗುತ್ತದೆ.

ರೆನಾಲ್ಟ್ ಸಿಎನ್‌ಜಿ ಕಿಟ್ ಗಳನ್ನು ಹಂತಹಂತವಾಗಿ ಪರಿಚಯಿಸಲಿದ್ದು, ಹರಿಯಾಣ, ಯುಪಿ, ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರದಂತಹ ಪ್ರಮುಖ ರಾಜ್ಯಗಳಿಂದ ಪ್ರಾರಂಭಿಸಿ ಮಾರುಕಟ್ಟೆಯ ಶೇ65 ರಷ್ಟು ಅನ್ನು ಒಳಗೊಂಡಿದೆ. ರೆನಾಲ್ಟ್ ನ ಪರೀಕ್ಷೆಯ ಅಡಿಯಲ್ಲಿ, ಸಿಎನ್‌ಜಿ ಕಿಟ್ ಸೇರ್ಪಡೆಯೊಂದಿಗೆ ಮೈಲೇಜ್ 1.5 ಪಟ್ಟು ಹೆಚ್ಚಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

renault-introduced-cng-kit-for-triber-kiger-and-kwid

ಈ ಸಿಎನ್ ಜಿ ಕಾರುಗಳ ಅಧಿಕೃತ ಮೈಲೇಜ್ ಅಂಕಿಅಂಶಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಚಾಲನಾ ಕಾರ್ಯಕ್ಷಮತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅದು ಹೇಳಲಾಗಿದೆ. ಆದ್ದರಿಂದ ಸ್ಟ್ಯಾಂಡರ್ಡ್ ಎಂಜಿನ್ ವಿಶೇಷಣಗಳು ಮತ್ತು ಇಂಧನ-ದಕ್ಷತೆಯನ್ನು ಉಲ್ಲೇಖವಾಗಿ ಹಲವು ಆಟೋಮೊಬೈಲ್ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಸದ್ಯ ಸ್ಟ್ಯಾಂಡರ್ಡ್ ಕ್ವಿಡ್ 1-ಲೀಟರ್ ಪೆಟ್ರೋಲ್ ಎಂಜಿನ್ ಕಾರು 69 ಬಿಹೆಚ್ ಪವರ್ ನೀಡುತ್ತದೆ. ಇದನ್ನು ಮ್ಯಾನುವಲ್ ಟ್ರಾನ್ಸ್ ಮಿಷನ್ ಗೆ ಜೋಡಿಸಲಾಗಿದ್ದು, 21.7 ಕಿ.ಮೀ ಮೈಲೇಜ್ ನೀಡುತ್ತದೆ. ಇನ್ನು ಸಿಎನ್‌ಜಿ ಆಡ್ - ಆನ್ ನೊಂದಿಗೆ ಮೈಲೇಜ್ ಹೆಚ್ಚಾಗುವ ನಿರೀಕ್ಷೆಯಿದೆ. ಇದು ಮಾರುಕಟ್ಟೆಯಲ್ಲಿ ಇತರ ಸಿಎನ್‌ಜಿ ಕಾರುಗಳನ್ನು ನೀಡುತ್ತಿರುವ ಬ್ರಾಂಡ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

renault-introduced-cng-kit-for-triber-kiger-and-kwid

ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 8 ಇಂಚಿನ ಟಚ್ ಸ್ಕ್ರೀನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ಟಿಪಿಎಂಎಸ್ ಮತ್ತು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು ಈ ಹ್ಯಾಚ್ ಬ್ಯಾಕ್ ನ ಗಮನಾರ್ಹ ಫೀಚರ್‌ಗಳಾಗಿವೆ. ಇದರ ನೇರ ಸ್ಪರ್ಧೆಯ ಬಗ್ಗೆ ಹೇಳುವುದಾದರೆ, ಇದು ಆಲ್ಟೋ ಕೆ 10 ಸಿಎನ್‌ಜಿಗೆ ಪೈಪೋಟಿ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, February 24, 2025, 19:56 [IST]
English summary
Renault introduced cng kit for triber kiger and kwid
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+