ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಅನಾವರಣ: ಬೆಲೆ ಇಷ್ಟೇನಾ? ಪ್ರತಿಸ್ಪರ್ಧಿಗಳಿಗೆ ಸರಿಯಾದ ಪೈಪೋಟಿ!

ಅಧಿಕೃತವಾಗಿ ಕ್ವಿಡ್ ಇ-ಟೆಕ್ ಎಂದು ಕರೆಯಲ್ಪಡುವ ರೆನಾಲ್ಟ್ ಕ್ವಿಡ್ ಇವಿಯನ್ನು ಬ್ರೆಜಿಲ್‌ನಲ್ಲಿ ಅನಾವರಣಗೊಳಿಸಲಾಗಿದೆ. ಇದು ಬ್ರೆಜಿಲ್‌ನ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿ ಸ್ಥಾನ ಪಡೆದಿದ್ದು, ಇದರ ಬೆಲೆ BRL 99,990 (ಸುಮಾರು ರೂ. 16 ಲಕ್ಷ) ಇದೆ. ಈ ಕಾರನ್ನು ಪರಾನಾದ ಸಾವೊ ಜೋಸ್ ಡಾಸ್ ಪಿನ್ಹೈಸ್‌ನಲ್ಲಿರುವ ರೆನಾಲ್ಟ್‌ನ ಐರ್ಟನ್ ಸೆನ್ನಾ ಕೈಗಾರಿಕಾ ಸಂಕೀರ್ಣದಲ್ಲಿ ಉತ್ಪಾದಿಸಲಾಗುತ್ತದೆ. ಈ ಕಾರಿನ ವಿಶೇಷತೆಗಳು ಹಾಗೂ ಭಾರತಕ್ಕೆ ಯಾವಾಗ ಲಗ್ಗೆ ಇಡುತ್ತದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಕ್ವಿಡ್ ಇ-ಟೆಕ್‌ನ ಪ್ರಮುಖ ವೈಶಿಷ್ಟ್ಯವೆಂದರೆ 113 Nm ಟಾರ್ಕ್ ಉತ್ಪಾದಿಸುವ 48 kW (64 hp) ಎಲೆಕ್ಟ್ರಿಕ್ ಮೋಟರ್ ಒಳಗೊಂಡಿದೆ. ‌ಜೊತೆಗೆ ಇದರ 26.8 kWh ಲಿಥಿಯಂ-ಐಯಾನ್ ಬ್ಯಾಟರಿಯು ಒಮ್ಮೆ ಚಾರ್ಜ್ ಮಾಡಿದರೆ 180 ಕಿ.ಮೀ ರೇಂಜ್ ನೀಡುತ್ತದೆ. ಅದರ ಕಾಂಪ್ಯಾಕ್ಟ್ ವಿನ್ಯಾಸಕ್ಕೆ ತಕ್ಕ ರೇಂಜ್ ಹೊಂದಿರುವ ಈ ಕಾರು ವಿಶೇಷವಾಗಿ ಸಿಟಿ ಡ್ರೈವ್‌ಗಳಿಗಾಗಿ ನಿರ್ಮಿಸಲಾಗಿದೆ.

renault-kwid-electric-car-unveiled-expected-price-and-features

ಚಾರ್ಜಿಂಗ್ ಆಯ್ಕೆಗಳಲ್ಲಿ 30 kW DC ಫಾಸ್ಟ್ ಚಾರ್ಜರ್ (ಸುಮಾರು 40 ನಿಮಿಷಗಳಲ್ಲಿ 15% ರಿಂದ 80%) ಮತ್ತು 7.4 kW AC ವಾಲ್‌ಬಾಕ್ಸ್ ಚಾರ್ಜರ್ (ಅದೇ ರೇಂಜ್‌ಗೆ ಸುಮಾರು 2 ಗಂಟೆ 54 ನಿಮಿಷಗಳು) ಸೇರಿವೆ. ಇದರ ವಿನ್ಯಾಸದ ವಿಷಯಕ್ಕೆ ಬಂದರೆ ಇದು ರಾಕೆಟ್ ಆಕಾರದ LED DRL ಗಳು ಮತ್ತು ಪ್ರೊಜೆಕ್ಟರ್ ಹೆಡ್‌ಲೈಟ್‌ಗಳೊಂದಿಗೆ ಪರಿಷ್ಕೃತ ತೀಕ್ಷ್ಣವಾದ ಬಾಹ್ಯ ಡಿಸೈನ್ ಹೊಂದಿದೆ.

ಹಾಗೆಯೆ ಇಂಟೀರಿಯರ್ ವಿಷಯಕ್ಕೆ ಬಂದರೆ ಒಳಗೆ, 7 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುವ 10.1 - ಇಂಚಿನ ಇನ್ಫೋಟೈನ್ಮೆಂಟ್ ಟಚ್‌ಸ್ಕ್ರೀನ್‌ನೊಂದಿಗೆ ಫ್ಲಾಟ್ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿದೆ. ತನ್ನ ಪ್ರಯಾಣಿಕರಿಗೆ ಬೇಕಾದ ಬೇಸಿಕ್ ಫೀಚರ್ಸ್ ಒಳಗೊಂಡಿದೆ ಎಂದು ಹೇಳಬಹುದು.

renault-kwid-electric-car-unveiled-expected-price-and-features

ಸುರಕ್ಷತೆ ವಿಷಯಕ್ಕೆ ಬಂದರೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS), ಆರು ಏರ್‌ಬ್ಯಾಗ್‌ಗಳು, ಬ್ರೇಕ್ ಅಸಿಸ್ಟ್‌ನೊಂದಿಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಸೇರಿಂದತೆ ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತವೆ, ಇದು ಬ್ರೆಜಿಲ್‌ನಲ್ಲಿ ಈ ಮಟ್ಟದ ಸುರಕ್ಷತಾ ತಂತ್ರಜ್ಞಾನವನ್ನು ನೀಡುವ ತನ್ನ ವರ್ಗದ ಮೊದಲ ವಾಹನವಾಗಿದೆ.

ಭಾರತದಲ್ಲಿ ಬಿಡುಗಡೆ ಯಾವಾಗ?

ರೆನಾಲ್ಟ್ ಕ್ವಿಡ್ ಇವಿ 2025 ರ ಅಂತ್ಯ ಅಥವಾ 2026 ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಕಾರು ಭಾರತದಲ್ಲಿ ಬಿಡುಗಡೆ ಮಾಡಲು ನಿರೀಕ್ಷಿತ ಬೆಲೆಯು ರೂ. 7 ಲಕ್ಷದಿಂದ ರೂ. 10 ಲಕ್ಷ ಎಕ್ಸ್-ಶೋರೂಂ ನಡುವೆ ಇರಬಹುದು ಎನ್ನಲಾಗಿದೆ. ಇದು ಕೈಗೆಟುಕುವ ಮತ್ತು ಸ್ಪರ್ಧಾತ್ಮಕ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಯ್ಕೆಯಾಗಲಿದೆ.

ಕ್ವಿಡ್ ಇ-ಟೆಕ್ ಅಂತಿಮವಾಗಿ ಭಾರತದಲ್ಲಿ ಬಿಡುಗಡೆಯಾದಾಗ ಟಾಟಾ ಟಿಯಾಗೊ ಇವಿ ಮತ್ತು ಸಿಟ್ರನ್ ಇಸಿ 3 ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ. ಇದು ಗಣನೀಯವಾಗಿ ಕಡಿಮೆ ಬೆಲೆಯಲ್ಲಿ ಮತ್ತು ಹೆಚ್ಚು ಸ್ಥಳೀಯ ವೈಶಿಷ್ಟ್ಯಗಳ ಸೆಟ್‌ನೊಂದಿಗೆ ಬರಬಹುದು. ಇದು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ತನ್ನ ಎಲೆಕ್ಟ್ರಿಕ್ ವಾಹನ ಉಪಸ್ಥಿತಿಯನ್ನು ಬಲಪಡಿಸುವ ರೆನಾಲ್ಟ್‌ನ ಕಾರ್ಯತಂತ್ರವನ್ನು ಪ್ರತಿಬಿಂಬಿಸುತ್ತದೆ.

ಬ್ರೆಜಿಲ್‌ನಲ್ಲಿ ರೆನಾಲ್ಟ್ ಬಿಡುಗಡೆಯು ಲ್ಯಾಟಿನ್ ಅಮೆರಿಕಾದಲ್ಲಿ ವಿದ್ಯುದ್ದೀಕರಣವನ್ನು ವಿಸ್ತರಿಸುವ ಅದರ ವಿಶಾಲ ಯೋಜನೆಯ ಭಾಗವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಬ್ರೆಜಿಲ್‌ನಲ್ಲಿ ಅನಾವರಣಗೊಂಡ ರೆನಾಲ್ಟ್ ಕ್ವಿಡ್ ಇವಿ ಆಧುನಿಕ, ಕೈಗೆಟುಕುವ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿ ಸುಧಾರಿತ ಸುರಕ್ಷತೆ ಮತ್ತು ಅನುಕೂಲತೆಯ ವೈಶಿಷ್ಟ್ಯಗಳೊಂದಿಗೆ ಅನಾವರಣಗೊಂಡಿದೆ.

More from DriveSpark

Article Published On: Tuesday, October 14, 2025, 10:20 [IST]
English summary
Renault kwid electric car unveiled expected price and features
Read more on renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+