ಸದ್ದಿಲ್ಲದೇ ಹೊಸ ಎಲೆಕ್ಟ್ರಿಕ್ ಕಾರಿನ ಪರೀಕ್ಷೆ.. 225 ಕಿ.ಮೀ ರೇಂಜ್, 5 ಲಕ್ಷಕ್ಕೆ ಮಾರಾಟಕ್ಕೆ?

ರೆನಾಲ್ಟ್ (Renault), ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ ಕ್ವಿಡ್, ಕೈಗರ್ ಹಾಗೂ ಟ್ರೈಬರ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಪ್ರವೇಶಿಸಲು ಕೂಡ ಹಣಿಯಾಗುತ್ತಿದೆ. ವಿದೇಶಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪನಿಯ ಒಡೆತನದ ಡೇಸಿಯಾ ಸ್ಪ್ರಿಂಗ್ ಇವಿಯನ್ನು 'ಕ್ವಿಡ್ ಇವಿ' ರೂಪದಲ್ಲಿ ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ, ಇದೇ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಪ್ರಾಯೋಗಿಕ ಸಂಚಾರ ನಡೆಸುವಾಗ ಮತ್ತೊಮ್ಮೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.

ಈ ಫೋಟೋಗಳನ್ನು ಸೂಕ್ಷ್ಮವಾಗಿ ಗಮಸಿದಾಗ, ನೂತನ ರೆನಾಲ್ಟ್ ಕ್ವಿಡ್ ಇವಿ (Renault Kwid EV), ವಿನೂತನವಾದ ಫ್ಯಾಸಿಯಾ, ಫ್ರಂಟ್ ಮೌಂಡೆಡ್ ಚಾರ್ಜಿಂಗ್ ಪೋರ್ಟ್, ಬ್ಲ್ಯಾಕ್ ವೀಲ್ ಆರ್ಚ್ ಕ್ಲಾಡಿಂಗ್‌ಗಳು, ಒಆರ್‌ವಿಎಂಗಳು ಹಾಗೂ ಬ್ಲ್ಯಾಕ್ ವೀಲ್ ಹಬ್‌ಕ್ಯಾಪ್‌ಗಳನ್ನು ಹೊಂದಿದೆ. ಜೊತೆಗಿದು 'ಡೇಸಿಯಾ ಸ್ಪ್ರಿಂಗ್ ಇವಿ'ಯಂತೆ ಫುಲ್-ವಿಡ್ತ್ ಎಲ್‌ಇಡಿ ಲೈಟ್ ಸ್ಟ್ರಿಪ್ ಮತ್ತು ಬಲಿಷ್ಠವಾದ ಬಂಪರ್‌ಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ.

Renault Kwid EV Spied Again Launch Soon Expected Price Range And Features Details

ನೂತನ ರೆನಾಲ್ಟ್ ಕ್ವಿಡ್ ಇವಿ ಹೆಚ್ಚು ವಿಶಾಲ ಗಾತ್ರದಲ್ಲಿದೆ. 3,701 ಎಂಎಂ ಉದ್ದ, 1,622 ಎಂಎಂ ಅಗಲ ಹಾಗೂ 1,516 ಎಂಎಂ ಎತ್ತರವಿದೆ. ಜೊತೆಗೆ 152 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,423 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. ಇದು ಖಾಕಿ, ಬ್ರಿಕ್ ರೆಡ್, ಪೋಲಾರ್ ವೈಟ್, ಸ್ಟೋನ್‌ವಾಶ್ ಬ್ಲೂ, ಸಫಾರಿ ಬೀಜ್ ಹಾಗೂ ಲೈಟ್ನಿಂಗ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗಬಹುದು ಎನ್ನಲಾಗಿದೆ.

ಹೊಸ ಕ್ವಿಡ್ ಇವಿ 5 ಆಸನಗಳನ್ನು ಒಳಗೊಂಡಿರಲಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 308 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿರಬಹುದು ಎಂದು ಹೇಳಲಾಗಿದೆ.

Renault Kwid EV Spied Again Launch Soon Expected Price Range And Features Details

ಈ ಕಾರು ಡೇಸಿಯಾ ಸ್ಪ್ರಿಂಗ್ ಇವಿಯಂತೆ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿರುವ ನೀರಿಕ್ಷೆಯಿದೆ. 26.8 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 225 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡಲಿದೆ ಎನ್ನಲಾಗಿದೆ.

ಇದು 33 ಕೆಡಬ್ಲ್ಯೂ ಎಫ್‌ಡಬ್ಲ್ಯೂಡಿ (ಫ್ರಂಟ್ ವೀಲ್ ಡ್ರೈವ್) ಮೋಟಾರ್ ಹೊಂದಿರಲಿದೆ. 125 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿರಲಿದ್ದು, ಕೇವಲ 19.2 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ ಎಂದು ಹೇಳಲಾಗಿದೆ. ಈ ಕಾರಿನಲ್ಲಿರುವ ಬ್ಯಾಟರಿ ಪ್ಯಾಕ್, 30 ಕೆಡಬ್ಲ್ಯೂ ಡಿಸಿ ಫಾಸ್ಟ್ ಚಾರ್ಜರ್ ಬಳಕೆಯಲ್ಲಿ 45 ನಿಮಿಷಗಳಲ್ಲಿ 20 ರಿಂದ 80% ಚಾರ್ಜ್ ಆಗುವ ಸಾಧ್ಯತೆಯಿದೆ.

ನೂತನ ರೆನಾಲ್ಟ್ ಕ್ವಿಡ್ ಇವಿ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿರಲಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ. ಬಹುಮುಖ್ಯವಾಗಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ವೈರ್‌ಲೆಸ್ ಫೋನ್ ಚಾರ್ಜರ್, ಪವರ್ ವಿಂಡೋಗಳು ಹಾಗೂ ಆಟೋ ಎಸಿಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿರಲಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುವ ಸಾಧ್ಯತೆಯಿದೆ. 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌) ಮತ್ತು ರೇರ್ ವ್ಯೂ ಕ್ಯಾಮೆರಾವನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ.

ಹೊಸ ರೆನಾಲ್ಟ್ ಕ್ವಿಡ್ ಇವಿ ಅತಿ ಕಡಿಮೆ ಬೆಲೆಗೆ ಖರೀದಿಗೆ ದೊರೆಯಬಹುದು ಎನ್ನಲಾಗಿದೆ. ರೂ.5 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಕಾರು ಇದೇ ವರ್ಷದ ಅಂತ್ಯದೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದಕ್ಕೆ ಎಂಜಿ ಕಾಮೆಟ್ ಇವಿ ಹಾಗೂ ಟಾಟಾ ಟಿಯಾಗೊ ಇವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.

Source Link: 91wheels

More from DriveSpark

Article Published On: Sunday, October 5, 2025, 9:03 [IST]
English summary
Renault kwid ev spied again launch soon expected price range and features details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+