Renault: ಸಂಕ್ರಾಂತಿಗೆ ಗುಡ್‌ನ್ಯೂಸ್.. ರೆನಾಲ್ಟ್ ಕಾರುಗಳಿಗೆ ಭಾರೀ ರಿಯಾಯಿತಿ ಘೋಷಣೆ!
ರೆನಾಲ್ಟ್ ಇಂಡಿಯಾ (Renault India), ಪ್ರಮುಖ ಕಾರು ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ಈ ಜನವರಿಯಲ್ಲಿ ಹಲವು ಕಾರುಗಳ ಖರೀದಿ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಇದರಿಂದ ಸಂಕ್ರಾಂತಿಗೆ ಹೊಚ್ಚ ಹೊಸ ಕಾರನ್ನು ಮನೆಗೆ ತರಬೇಕೆಂದು ಯೋಚಿಸಿರುವ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಣಕಾಸು ಪ್ರಯೋಜನದ ಕುರಿತ ವಿವರಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗಿದೆ. ಬನ್ನಿ.. ಯಾವ ಕಾರು ಎಷ್ಟು ರಿಯಾಯಿತಿ ಹೊಂದಿದೆ ಎಂಬುದನ್ನು ತಿಳಿಯೋಣ.
ರೆನಾಲ್ಟ್ ಕ್ವಿಡ್ (Renault Kwid): ಇದೊಂದು ಹ್ಯಾಚ್‌ಬ್ಯಾಕ್ ಆಗಿದ್ದು, ಈ ಜನವರಿ ತಿಂಗಳು ದೊಡ್ಡ ಹಣಕಾಸಿನ ಪ್ರಯೋಜನವನ್ನು ಹೊಂದಿದೆ. ದೇಶಾದ್ಯಂತ 2025ರ ಮಾಡೆಲ್‌ಗಳು, ಒಟ್ಟು ರೂ.25 000 ವರೆಗೆ ರಿಯಾಯಿತಿ ಪಡೆದಿವೆ. ಅದರೊಳಗೆ ರೂ.15,000 ವರೆಗೆ ವಿನಿಮಯ ಪ್ರಯೋಜನ (Exchange Benefit) ಮತ್ತು ರೂ.10,000 ವರೆಗೆ ಲಾಯಲ್ಟಿ ನಗದು ರಿಯಾಯಿತಿಗಳು (Loyalty Cash Discount) ಕೂಡ ಸೇರಿವೆ.

2024ರ ರೆನಾಲ್ಟ್ ಕ್ವಿಡ್ ಮಾಡೆಲ್‌ಗಳು, ಬರೋಬ್ಬರಿ ರೂ.50,000 ವರೆಗೆ ರಿಯಾಯಿತಿ ಒಳಗೊಂಡಿವೆ. ಅದರಲ್ಲಿ ರೂ.25,000 ವರೆಗೆ ನಗದು ರಿಯಾಯಿತಿ ರೂ.15,000 ವರೆಗೆ ವಿನಿಮಯ ಪ್ರಯೋಜನ ಹಾಗೂ ರೂ.10,000 ವರೆಗೆ ಲಾಯಲ್ಟಿ ನಗದು ರಿಯಾಯಿತಿಗಳು ಸಹ ಇವೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ನೂತನ ಕ್ವಿಡ್ ಕಾರು, ರೂ.4.70 ಲಕ್ಷದಿಂದ ರೂ.6.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ.
ರೆನಾಲ್ಟ್ ಕಿಗರ್ (Renault Kiger): ಇದು ಪ್ರಮುಖ ಎಸ್‌ಯುವಿಯಾಗಿದೆ. ಈ ತಿಂಗಳು 2025ರ ಮಾಡೆಲ್‌ಗಳು, ಒಟ್ಟಾರೆ ರೂ.35,000 ವರೆಗೆ ರಿಯಾಯಿತಿ ಹೊಂದಿವೆ. ಇದರೊಳಗೆ ರೂ.10,000 ವರೆಗೆ ನಗದು ರಿಯಾಯಿತಿ ರೂ.15,000 ವರೆಗೆ ವಿನಿಮಯ ಪ್ರಯೋಜನ ಮತ್ತು ರೂ.10,000 ವರೆಗೆ ಲಾಯಲ್ಟಿ ನಗದು ರಿಯಾಯಿತಿಗಳು ಸೇರಿವೆ.

2024ರ ರೆನಾಲ್ಟ್ ಕಿಗರ್ ಮಾಡೆಲ್‌ಗಳು, ಸುಮಾರು ರೂ.65,000 ವರೆಗೆ ರಿಯಾಯಿತಿ ಒಳಗೊಂಡಿವೆ. ಅದರಲ್ಲಿ ರೂ.40,000 ವರೆಗೆ ನಗದು ರಿಯಾಯಿತಿ ರೂ.15,000 ವರೆಗೆ ವಿನಿಮಯ ಪ್ರಯೋಜನ ಹಾಗೂ ರೂ.10,000 ವರೆಗೆ ಲಾಯಲ್ಟಿ ನಗದು ರಿಯಾಯಿತಿಗಳು ಇವೆ. ಸದ್ಯ, ಹೊಚ್ಚ ಹೊಸ ರೆನಾಲ್ಟ್ ಕಿಗರ್ ಕಾರು ರೂ.6 ಲಕ್ಷದಿಂದ ರೂ.11.23 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ.
ರೆನಾಲ್ಟ್ ಟ್ರೈಬರ್ (Renault Triber): ಇದೊಂದು ಜನಪ್ರಿಯ ಎಂಪಿವಿಯಾಗಿದೆ. ಈ ಜನವರಿಯಲ್ಲಿ ಭಾರೀ ಹಣಕಾಸಿನ ಪ್ರಯೋಜನವನ್ನು ಪಡೆದಿದೆ. ಈ ಕಾರಿನ 2025ರ ಮಾಡೆಲ್‌ಗಳು, ಒಟ್ಟು 35,000 ವರೆಗೆ ರಿಯಾಯಿತಿ ಹೊಂದಿವೆ. ಇದರೊಳಗೆ ರೂ.10,000 ವರೆಗೆ ನಗದು ರಿಯಾಯಿತಿ ರೂ.15,000 ವರೆಗೆ ವಿನಿಮಯ ಪ್ರಯೋಜನ ಮತ್ತು ರೂ.10,000 ವರೆಗೆ ಲಾಯಲ್ಟಿ ನಗದು ರಿಯಾಯಿತಿಗಳು ಕೂಡ ಇವೆ.

2024ರ ರೆನಾಲ್ಟ್ ಟ್ರೈಬರ್ ಎಂಪಿವಿ ಮಾಡೆಲ್‌ಗಳು, ಬರೋಬ್ಬರಿ ರೂ.55,000 ವರೆಗೆ ರಿಯಾಯಿತಿ ಹೊಂದಿವೆ. ಅದರಲ್ಲಿ ರೂ.30 000 ವರೆಗೆ ನಗದು ರಿಯಾಯಿತಿ ರೂ.15,000 ವರೆಗೆ ವಿನಿಮಯ ಪ್ರಯೋಜನ ಮತ್ತು ರೂ.10,000 ವರೆಗೆ ಲಾಯಲ್ಟಿ ನಗದು ರಿಯಾಯಿತಿಗಳು ಸಹ ಸೇರಿವೆ. ಈ ಟ್ರೈಬರ್ ಕಾರು ರೂ.6 ಲಕ್ಷದಿಂದ ರೂ.8.97 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ.
ಇನ್ನು, ರೆನಾಲ್ಟ್ ಕಾರುಗಳು ದೊಡ್ಡ ಮಟ್ಟದಲ್ಲಿ ರಿಯಾಯಿತಿ ಹೊಂದಿರುವುದರಿಂದ ನೂತನ ಕಾರು ತೆಗೆದುಕೊಳ್ಳಬೇಕು ಅಂದುಕೊಂಡಿರುವ ಖರೀದಿದಾರರ ಕನಸು ಸುಲಭವಾಗಿ ನನಸಾಗಲಿದೆ. ಕಂಪನಿ ಘೋಷಣೆ ಮಾಡಿರುವ ಹಣಕಾಸಿನ ಪ್ರಯೋಜನಗಳು ಈ ಜನವರಿ ಪೂರ್ತಿ ಅನ್ವಯವಾಗಲಿದೆ. ಆಸಕ್ತ ಗ್ರಾಹಕರು ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಬಹುದು.


Click it and Unblock the Notifications








