Renault Kwid: ಸಣ್ಣ ಕುಟುಂಬಕ್ಕೆ ಬೆಸ್ಟ್ ಕಾರು: 22 ಕಿ.ಮೀ ಮೈಲೇಜ್... 5 ಮಂದಿಗೆ ಆರಾಮ ಪ್ರಯಾಣ!
ಭಾರತದಲ್ಲಿ ಸಣ್ಣ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮಧ್ಯಮ ವರ್ಗದ ಜನರ ಕಾರು ಖರೀದಿ ಕನಸನ್ನು ಈಡೇರಿಸುತ್ತಿದೆ. ಟಾಟಾ ಟಿಯಾಗೋ, ಎಸ್-ಪ್ರೆಸ್ಸೊ, ಮಾರುತಿ ಸುಜುಕಿ ಆಲ್ಟೊ ಕೆ10, ಸದ್ಯ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಬೆಸ್ಟ್ ಕಾರುಗಳಾಗಿದ್ದು, ಉತ್ತಮ ಮಾರಾಟ ಕಾಣುತ್ತಿವೆ. ಇದರ ಜೊತೆಗೆ ಮತ್ತೊಂದು ಪುಟ್ಟ ಫ್ಯಾಮಿಲಿ ಕಾರಿದ್ದು, ಉತ್ತಮ ವಿನ್ಯಾಸದ ಜೊತೆಗೆ ಬೆಸ್ಟ್ ಮೈಲೇಜ್ ಕಾರೆಂದು ಜನಪ್ರಿಯತೆ ಪಡೆದಿದೆ. ಅದೇ 'ರೆನಾಲ್ಟ್ ಕ್ವಿಡ್' ಈ ಮೈಕ್ರೋ ಎಸ್‌ಯುವಿ ಕಾರಿನ ಬೆಲೆ, ವೈಶಿಷ್ಟ್ಯಗಳು, ಮತ್ತು ಎಂಜಿನ್ ವಿವರಗಳನ್ನು ನೋಡೋಣ.
ರೆನಾಲ್ಟ್ ಕ್ವಿಡ್ (Renault Kwid) ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.69 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆಯು ರೂ.7.82 ಲಕ್ಷಗಳಾಗಿದೆ. ಹೊಸ ರೆನಾಲ್ಟ್ ಕ್ವಿಡ್ 10 ರೂಪಾಂತರಗಳನ್ನು ಒಳಗೊಂಡಿದ್ದು, ವೇರಿಯೆಂಟ್‌ಗಳನ್ನು ಆಧರಿಸಿ ಬೆಲೆ ಬದಲಾಗುತ್ತದೆ. ಇವು ಎಕ್ಸ್ ಶೋರೂಂ ಬೆಲೆಗಳು ಎಂಬುದನ್ನು ಗಮನಿಸಬೇಕು.

ಕಡಿಮೆ ಡೌನ್‌ಪೇಮೆಂಟ್ ಮತ್ತು ಇಎಂಐ ಆಯ್ಕೆಯೊಂದಿಗೆ, ಈ ಕಾರು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲಕರವಾಗಿದೆ. ರೂ.56,000 ಡೌನ್‌ಪೇಮೆಂಟ್ ಪಾವತಿಸಿ, ಶೇಕಡಾ 9.8% ಬಡ್ಡಿ ದರದಲ್ಲಿ ತಿಂಗಳಿಗೆ ರೂ. 10,735 ಇಎಂಐ ಪಾವತಿಸಬಹುದು. ಹೊಸ ರೆನಾಲ್ಟ್ ಕ್ವಿಡ್ ವೈಶಿಷ್ಟ್ಯಗಳು, ಸುರಕ್ಷತೆ, ಎಂಜಿನ್ ಕುರಿತ ವಿವರವಾದ ಮಾಹಿತಿ ಈ ಕೆಳಗಿದೆ.
ಹೊಸ ರೆನಾಲ್ಟ್ ಕ್ವಿಡ್ ಸುರಕ್ಷತೆ ಕುರಿತು ಹೇಳುವುದಾದ್ರೆ, ಈ ಕಾರನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಡಿಯೊಂದಿಗೆ ಎಬಿಎಸ್, ಹಿಲ್ ಸ್ಟಾರ್ಟ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಟಿಪಿಎಂಎಸ್ ಮತ್ತು ಟಿಸಿಎಸ್ ಕೂಡ ಒದಗಿಸಲಾಗಿದೆ. 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ ಮತ್ತು ಮ್ಯಾನ್ಯುವಲ್ ಎಸಿ ಸೇರಿದಂತೆ ಅನೇಕ ಆಕರ್ಷಕ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ವೇರಿಯೆಂಟ್‌ಗಳು ಮತ್ತು ಬಣ್ಣದ ಆಯ್ಕೆಗಳ ಬಗ್ಗೆ ಹೇಳುವುದಾದ್ರೆ, ಈ ಪುಟ್ಟ ರೆನಾಲ್ಟ್ ಕ್ವಿಡ್ ಕಾರನ್ನು ಗ್ರಾಹಕರು ಐದು ಮೊನೋ-ಟೋನ್ ಮತ್ತು ಐದು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಆಯ್ಕೆ ಮಾಡಬಹುದು. ಆರ್ಎಕ್ಸ್ಇ, ಆರ್ಎಕ್ಸ್ಎಲ್ (ಒ), ಆರ್ಎಕ್ಸ್‌ಟಿ ಮತ್ತು ಕ್ಲೈಂಬರ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.
ಹೊಸ ರೆನಾಲ್ಟ್ ಕ್ವಿಡ್ ಎಂಜಿನ್ ಬಗ್ಗೆ ಹೇಳುವುದಾದ್ರೆ, 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು 68 ಪಿಎಸ್ ಪವರ್ ಮತ್ತು 91 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅಥವಾ 5-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದ್ದು, ಮೈಲೇಜ್ 21.46 kmpl ನಿಂದ 22.3 kmpl ವರೆಗೆ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸಣ್ಣ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಮಾರುತಿ ಆಲ್ಟೋ ಕೆ 10 ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊಗೆ ನೇರ ಪೈಪೋಟಿ ನೀಡುತ್ತದೆ. ಹಾಗೆಯೇ ರೆನಾಲ್ಟ್ ಕ್ವಿಡ್ ಕ್ಲೈಂಬರ್ ವೇರಿಯೆಂಟ್ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್ಟರ್ ಮೈಕ್ರೋ ಎಸ್‌ಯುವಿಗಳ ಕಡಿಮೆ - ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








