20 ಕಿ.ಮೀ ಮೈಲೇಜ್.. 7-ಸೀಟರ್, ಬೆಲೆ ಮೊದಲೇ ಅಗ್ಗ.. ಈ ಪ್ರಮುಖ ಕಾರಿನ ಹೊಸ ದರವೆಷ್ಟು?

ರೆನಾಲ್ಟ್ ಟ್ರೈಬರ್ (Renault Triber) ವಿಶ್ವಾಸಾರ್ಹ ಎಂಪಿವಿಯಾಗಿದೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೊಂಡಿವೆ. ಇದರ ಲಾಭವು 'ಟ್ರೈಬರ್' ಕಾರಿಗೂ ಲಭ್ಯವಿದ್ದು, ರೂ.80,000 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಎಂಪಿವಿಯ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ನೂತನ 'ರೆನಾಲ್ಟ್ ಟ್ರೈಬರ್' ಕಾರು ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುತ್ತದೆ. ಆಥೆಂಟಿಕ್ ರೂಪಾಂತರ ರೂ.5,76,300, ಎವಲ್ಯೂಷನ್ ರೂಪಾಂತರ ರೂ.6,63,200, ಟೆಕ್ನೋ ರೂಪಾಂತರ ರೂ.7,31,800, ಎಮೋಷನ್ ರೂಪಾಂತರ 7,91,200, ಎಮೋಷನ್ ಡುಯಲ್ ಟೋನ್ ರೂ.8,12,300, ಎಮೋಷನ್ ಆಟೋಮೆಟಿಕ್ ಟ್ರಾಸ್ಮಿಷನ್ ರೂ.8,38,800 ಹಾಗೂ ಎಮೋಷನ್ ಆಟೋಮೆಟಿಕ್ ಟ್ರಾಸ್ಮಿಷನ್ ಡುಯಲ್ ಟೋನ್ ರೂಪಾಂತರ ರೂ.8,59,800 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

Renault Triber Mpv Variants Wise New Price Details

ರೆನಾಲ್ಟ್ ಟ್ರೈಬರ್ ವಿಶೇಷತೆಗಳೇನು:

ಈ ಎಂಪಿವಿಯು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಐಬ್ರೌ ಶೇಪ್ಡ್ ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲ್ಯಾಂಪ್‌ಗಳು ಹಾಗೂ 15 ಇಂಚಿನ ಸ್ಟೀಲ್ ವೀಲ್‌ಗಳನ್ನು ಹೊಂದಿದೆ. ಆಂಬರ್ ಟೆರಾಕೋಟಾ, ಜನ್ಸ್ಕರ್ ಬ್ಲೂ ಮತ್ತು ಶ್ಯಾಡೋ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಇದು ಸ್ವಲ್ಪ ಮಟ್ಟಿಗೆ ವಿಶಾಲ ಗಾತ್ರದಲ್ಲಿದೆ. 3,985 ಎಂಎಂ ಉದ್ದ, 1,739 ಎಂಎಂ ಅಗಲ ಹಾಗೂ 1,643 ಎಂಎಂ ಎತ್ತರವಿದೆ. ಜೊತೆಗಿದು 182 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,636 ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 947 ಕೆಜಿ ತೂಕವಿದೆ.

ನೂತನ ಟ್ರೈಬರ್ ಕಾರು 7 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 84 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಅಗತ್ಯ ಬಿದ್ದಾಗ 3ನೇ ಸಾಲಿನ ಆಸನಗಳನ್ನು ಮಡಚಿ 625 ಲೀಟರ್‌ಗಳಿಗೆ ವಿಸ್ತರಿಸಬಹುದಾಗಿದೆ.

ಈ ಕಾರು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 1-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 6250 ಆರ್‌ಪಿಎಂನಲ್ಲಿ 72 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 3500 ಆರ್‌ಪಿಎಂನಲ್ಲಿ 96 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಟ್ರಾಸ್ಮಿಷನ್/ ಆಟೋಮೆಟಿಕ್ ಟ್ರಾಸ್ಮಿಷನ್ (ಗೇರ್‌ಬಾಕ್ಸ್‌) ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ.

ಇದು ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. 20 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 40 ಲೀಟರ್‌ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. 140 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಸರಿ ಸುಮಾರು 16.72 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಹೊಸ ಟ್ರೈಬರ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ 8 ಇಂಚಿನ ಪ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮ್ಯಾನುವಲ್ ಎಸಿ, ರಿಮೋಟ್ ಕೀಲೆಸ್ ಎಂಟ್ರಿ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 6 ಸ್ಪೀಕರ್ ಸೌಂಡ್ ಸಿಸ್ಟಮ್‌ನ್ನು ಹೊಂದಿದೆ.

ಈ ಕಾರು ಸುರಕ್ಷತೆಯಿಂದಲೂ ಮನೆ ಮಾತಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ - ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Thursday, September 25, 2025, 16:39 [IST]
English summary
Renault triber mpv variants wise new price details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+