Tata: ರತನ್ ಟಾಟಾ ಸಾವಿಗೂ ಮುನ್ನ ಭಾರತಕ್ಕೆ ಕೊಟ್ಟ ಅಗ್ಗದ ಪವರ್‌ಫುಲ್ ಕಾರು!

ಭಾರತದಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳಿಗೆ ಭಾರೀ ಬೇಡಿಕೆಯಿದೆ, ನಿರ್ಮಾಣ ಗುಣಮಟ್ಟದಿಂದ ಹಿಡಿದು ಫೀಚರ್ಸ್ ಹಾಗೂ ಪರ್ಫಾಮೆನ್ಸ್ ಒಳಗೊಂಡ ಕಾರುಗಳನ್ನು ಬ್ರಾಂಡ್ ನೀಡುತ್ತಾ ಬಂದಿದೆ. ರತನ್ ಟಾಟಾ ಅವರು ಕೂಡ ಕಾರುಗಳ ಗುಣಮಟ್ಟದ ವಿಷಯದಲ್ಲಿ ರಾಜಿಯಾಗದೆ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಿದ್ದರು. ಅವರ ಕೊನೆಯ ದಿನಗಳಲ್ಲಿ ಬಿಡುಗಡೆಗೆ ಸಜ್ಜಾಗಿದ್ದ ಕಾರೊಂದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ಕಾರು ಎಸ್‌ಯುವಿ ಕೂಪೆ ಡಿಸೈನ್ ಹೊಂದಿರುವ ಭಾರತದ ಮೊದಲ ಮಿಡ್‌ಸೈಜ್ ಎಸ್‌ಯುವಿ ಎಂದು ಕೂಡ ಜನಪ್ರಿಯತೆ ಪಡೆದಿದೆ.

ಈ ಕಾರು ಮತ್ಯಾವುದು ಅಲ್ಲ, 'ಟಾಟಾ ಕರ್ವ್' ಎಸ್‌ಯುವಿ ಕೂಪೆ. ಇದು ರತನ್ ಟಾಟಾ ಅವರು ಕಂಡ ಅವರ ಕಂಪನಿಯ ಕೊನೆಯ ಕಾರಾಗಿದೆ. ಇದರ ಬಿಡುಗಡೆಯ ನಂತರ ಅವರು ವಿಧಿವಶರಾದರು, 2024 ಆಗಸ್ಟ್‌ 7 ರಂದು ಟಾಟಾ ಕರ್ವ್ ಅನ್ನು ಪರಿಚಯಿಸಲಾಯಿತು. ಇದರ ಬಿಡುಗಡೆಯ ನಂತರ ಅಂದರೆ 2024 ಅಕ್ಟೋಬರ್ 9 ರಂದು ರತನ್ ಟಾಟಾ ಕೊನೆಯುಸಿರೆಳೆದರು.

safest-tata-car-curvv-safety-rating-details

ಅಂದಹಾಗೆ ಟಾಟಾ ಕರ್ವ್ ಕಾರನ್ನು ಎಲೆಕ್ಟ್ರಿಕ್ ಹಾಗೂ ಐಸಿಇ (ಇಂಧನ ಚಾಲಿತ) ಆವೃತ್ತಿಗಳಲ್ಲಿ ಪರಿಚಯಿಸಲಾಯಿತು. ಮೊದಲು ಎಲೆಕ್ಟ್ರಿಕ್ ಟಾಟಾ ಕರ್ವ್ ಅನ್ನು ಪರಿಚಯಿಸಿದ ಬಳಿಕ ಇಂಧನ ಚಾಲಿತ ಟಾಟಾ ಕರ್ವ್ ಅನ್ನು ಬಿಡುಗಡೆ ಮಾಡಲಾಯಿತು. ಈ ಎರಡೂ ಕಾರುಗಳು ಬಿಡುಗಡೆಯಾಗಿ ಸದ್ಯ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿವೆ.

ಹಾಗಾದ್ರೆ ರತನ್ ಟಾಟಾ ಅವರು ಕೊನೆಯದಾಗಿ ನೋಡಿದ ಅವರದ್ದೇ ಬ್ರಾಂಡ್‌ನ ಈ ಕಾರು ಹೇಗಿದೆ ಬನ್ನಿ ನೋಡೋಣ. ಮೊದಲೇ ಹೇಳಿದಂತೆ ಟಾಟಾ ಕಾರುಗಳು ನಿರ್ಮಾಣ ಗುಣಮಟ್ಟದಲ್ಲಿ ಜನಪ್ರಿಯತೆ ಪಡೆದಿವೆ. ಅಂತೇಯೇ ಟಾಟಾ ಕರ್ವ್ ಕೂಡ ಬಲಿಷ್ಟ ಕಾರಾಗಿದ್ದು, ಸುರಕ್ಷತಾ ಪರೀಕ್ಷೆಯಲ್ಲಿ ಎಲ್ಲರನ್ನು ಅಚ್ಚರಿಗೊಳಿಸುವ ರೀತಿಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಪಡೆದುಕೊಂಡಿದೆ.

safest-tata-car-curvv-safety-rating-details

ಹೊಸ ಟಾಟಾ ಕರ್ವ್ ಎಸ್‍ಯುವಿಯನ್ನು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ NCAP) ಅಡಿಯಲ್ಲಿ ಕ್ರಾಶ್ ಟೆಸ್ಟ್‌ಗೆ ಒಳಪಡಿಸಲಾಯಿತು. ಈ ಕ್ರಾಶ್ ಟೆಸ್ಟ್‌ ನಲ್ಲಿ ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.5 ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 43.66 ಅಂಕಗಳನ್ನು ಗಳಿಸಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಪಡೆದುಕೊಂಡಿದೆ.

ಇಂಧನ ಚಾಲಿತ ಟಾಟಾ ಕರ್ವ್ ಬೇಸ್‌ ವೇರಿಯೆಂಟ್ ಬೆಲೆಯು ರೂ.10 ಲಕ್ಷದಿಂದ ಪ್ರಾರಂಭವಾಗಿ ರೂ.19.52 ಲಕ್ಷದವರೆಗೆ ಇರುತ್ತದೆ. ಕರ್ವ್ವ್ ಅನ್ನು 42 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ - ಕರ್ವ್ವ್‌ನ ಮೂಲ ಮಾದರಿ ಸ್ಮಾರ್ಟ್ ಮತ್ತು ಟಾಪ್ ಮಾದರಿ ಟಾಟಾ ಕರ್ವ್ ಅಕಂಪ್ಲಿಶ್ಡ್ ಪ್ಲಸ್ ಎ ಡಾರ್ಕ್ ಡೀಸೆಲ್ ಡಿಸಿಎ ಆಗಿದೆ.

safest-tata-car-curvv-safety-rating-details

ಎಸ್ ಯುವಿ ಕೂಪೆಯಾದ ಟಾಟಾ ಕರ್ವ್ ಇವಿಯ ಬೇಸ್‌ ವೇರಿಯೆಂಟ್ ಬೆಲೆಯು ರೂ.17.49 ಲಕ್ಷದಿಂದ ಪ್ರಾರಂಭವಾಗಿ ರೂ.21.99 ಲಕ್ಷಗಳಾಗಿದೆ. ಇದು 8 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದು 5 ಬಣ್ಣಗಳಲ್ಲಿ ಲಭ್ಯವಿದ್ದು, ಕರ್ವ್ ಇವಿ ಸಿಂಗಲ್ ಚಾರ್ಜ್‌ನಲ್ಲಿ 471.14 ಕಿ.ಮೀ ಡ್ರೈವಿಂಗ್ ರೇಂಜ್ ನೀಡುವುದಾಗಿ ವರದಿ ಮಾಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, May 7, 2025, 16:08 [IST]
English summary
Safest tata car curvv safety rating details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+