ಡೆಲಿವರಿ ಪಡೆಯಲು ಕ್ಯೂ ನಿಂತ ಜನ: ಈ ಕಾರಿಗೆ ಫುಲ್ ಡಿಮ್ಯಾಂಡ್: ಒಂದೇ ದಿನ 200 ಕಾರುಗಳ ವಿತರಣೆ
ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಸ್ಕೋಡಾ, ಇತ್ತೀಚೆಗೆ ತನ್ನ ಕಾರುಗಳ ಉತ್ತಮ ಮಾರಾಟ ಕಾಣುತ್ತಿದೆ. ದೇಶದೆಲ್ಲೆಡೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿರುವ ಕೈಲಾಕ್ ಕಾರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಪಕ್ಕದ ರಾಜ್ಯದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 200 ಕಾರುಗಳನ್ನು ಡೆಲಿವರಿ ನೀಡಲಾಗಿದೆ. ವರ್ಷದಿಂದ ವರ್ಷಕ್ಕೆ ರಾಕೆಟ್ ವೇಗದಲ್ಲಿ ಬೆಳವಣಿಗೆ ಕಾಣುತ್ತಿರುವ ಸ್ಕೋಡಾ ಕಂಪನಿಯು ಗ್ರಾಹಕರ ಆದ್ಯತೆಗಳನ್ನು ಕೊನೆಗೂ ಅರ್ಥಮಾಡಿಕೊಂಡಿದೆ. ಅಷ್ಟಕ್ಕೂ ಈ ಬೃಹತ್ ಡೆಲಿವರಿಗಳು ನಡೆದಿರುವುದು ಎಲ್ಲಿ? ಯಾವ ಕಾರಿಗೆ ಈ ಮಟ್ಟದ ಬೇಡಿಕೆ ವ್ಯಕ್ತವಾಗಿದೆ, ಬನ್ನಿ ನೋಡೋಣ.
ಕೇರಳದಾದ್ಯಂತ ಸಾಂಪ್ರದಾಯಿಕ ಹೊಸ ವರ್ಷವಾಗಿ ಆಚರಿಸಲಾಗುವ 'ಚಿಂಗಮ್ ತಿಂಗಳು ಆರಂಭವಾಗಿದ್ದು, ರಾಜ್ಯದಾದ್ಯಂತ ಗ್ರಾಹಕರಿಗೆ ದಾಖಲೆಯ ಸ್ಕೋಡಾ ಕಾರುಗಳ ವಿತರಣೆಗಳನ್ನು ಮಾಡಲಾಗಿದೆ. ಬ್ರ್ಯಾಂಡ್ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ 200 ಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದೆ, ಇದು ಕೇರಳ ರಾಜ್ಯದಲ್ಲಿ ಸ್ಕೋಡಾದ ಅತಿದೊಡ್ಡ ಹಬ್ಬದ ಡೆಲಿವರಿಗಳಲ್ಲಿ ಒಂದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕೇರಳದಾದ್ಯಂತ ಗ್ರಾಹಕರು ತಮ್ಮ ಹೊಸ ಸ್ಕೋಡಾ ವಾಹನಗಳನ್ನು ಮನೆಗೆ ಕೊಂಡಿಯ್ದಿದ್ದಾರೆ, ಇದರಲ್ಲಿ ಕೊಡಿಯಾಕ್, ಕೈಲಾಕ್ ಮತ್ತು ಕುಶಾಕ್‌ನ ಎಸ್‌ಯುವಿಗಳು ಮತ್ತು ಸ್ಲಾವಿಯಾ ಸೆಡಾನ್ ಸೇರಿದೆ. ಹಾಗೆಯೇ ಇಲ್ಲಿನ ಇವಿಎಂ ಮೋಟಾರ್ಸ್ ಸ್ಕೋಡಾ ಕೈಲಾಕ್‌ನ 1000 ಡೆಲಿವರಿಗಳನ್ನು ದಾಟಿದ ಮೊದಲ ಡೀಲರ್ ಪಾಲುದಾರರಾಗಿದ್ದಾರೆ ಎಂದು ಕಂಪನಿ ತಿಳಿಸಿದೆ.
ಹೆಚ್ಚಾಗಿದೆ ಸ್ಕೋಡಾ ಕಾರುಗಳ ಮಾರಾಟ
ಸ್ಕೋಡಾ ಭಾರತದಲ್ಲಿ ಕಳೆದ ವರ್ಷ ಜುಲೈ 2024 ರಲ್ಲಿ 2,103 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ ಕೈಲಾಕ್ ಬಿಡುಗಡೆ ಬಳಿಕ ಮಾರಾಟ ಹೆಚ್ಚಾಗಿದ್ದು, ಜುಲೈ 2025 ರಲ್ಲಿ 5,554 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಹಾಗೆಯೇ ಜೂನ್ 2025 ರಲ್ಲಿ 5,014 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಇದರಲ್ಲಿ ಹೆಚ್ಚಿನ ಪಾಲು ಸ್ಕೋಡಾ ಕೈಲಾಕ್ ಧಕ್ಕಿಸಿಕೊಂಡಿರುವುದು ವಿಶೇಷ.

ಅಂದಹಾಗೆ ಸ್ಕೋಡಾ ಕಂಪನಿಯ ಒಟ್ಟು ಮಾರಾಟದಲ್ಲಿ ಕೈಲಾಕ್ ಎಸ್‌ಯುವಿ ಒಂದೇ ಜುಲೈ 2025 ರಲ್ಲಿ 3,377 ಯುನಿಟ್ ಕಾರುಗಳು ಮಾರಾಟವಾಗಿವೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಡಿಸೆಂಬರ್ 2024 ರಲ್ಲಿ ಬಿಡುಗಡೆಯಾದಾಗಿನಿಂದ ಕಂಪನಿಯ ಅತ್ಯಂತ ಲಾಭದಾಯಕ ಮತ್ತು ಹೆಚ್ಚು ಮಾರಾಟವಾದ ಕಾರಾಗಿ ಗುರ್ತಿಸಿಕೊಂಡಿದ್ದು, ಬ್ರಾಂಡ್‌ಗೆ ಗೇಮ್ - ಚೇಂಜರ್ ಆಗಿ ಮಾರ್ಪಟ್ಟಿದೆ.
ಸ್ಕೋಡಾ ಕೈಲಾಕ್ ವಿಶೇಷತೆಗಳು
ಈ ಸ್ಕೋಡಾ ಕೈಲಾಕ್ ಕಾರು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ರೆನಾಲ್ಟ್ ಕಿಗರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಸ್ಕೋಡಾ ಕೈಲಾಕ್ ಕಾರಿನ ಬೇಸ್ ವೇರಿಯೆಂಟ್ ಮಾದರಿಯ ಬೆಲೆ ರೂ. 8.25 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ವೇರಿಯೆಂಟ್ ಬೆಲೆ ರೂ. 13.99 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ.

ಪವರ್‌ಟ್ರೇನ್ ವಿಷಯಕ್ಕೆ ಬಂದರೆ 1.0-ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ವೇರಿಯೆಂಟ್‌ಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಆಯ್ಕೆಗಳಿವೆ. ಸ್ಕೋಡಾ ಪ್ರಕಾರ, ಮ್ಯಾನುವಲ್‌ನಲ್ಲಿ 19.68 ಕಿ.ಮೀ ಮತ್ತು ಆಟೋಮ್ಯಾಟಿಕ್‌ನಲ್ಲಿ 19.05 ಕಿ.ಮೀ ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.
ಸುರಕ್ಷತೆ ವಿಷಯದಲ್ಲಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಎಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಮಲ್ಟಿ - ಕೊಲಿಷನ್ ಬ್ರೇಕಿಂಗ್, ಚೈಲ್ಡ್ ಸೀಟ್ ಮೌಂಟ್‌ಗಳು, ಡಿಸ್ಕ್ & ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಫೀಚರ್ಸ್ ವಿಷಯಕ್ಕೆ ಬಂದರೆ ಕೈಲಾಕ್‌ನಲ್ಲಿ ಸಿಂಗಲ್ - ಪೇನ್ ಸನ್ ರೂಫ್ ಮತ್ತು 6-ವೇ ಫ್ರಂಟ್ ಫಂಕ್ಷನಲ್ ಸೀಟ್‌ಗಳನ್ನು ಹೊಂದಿದೆ. ಜೊತೆಗೆ 10.1 ಇಂಚಿನ ಟಚ್ ಸ್ಕ್ರೀನ್, 8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೈರ್ ಲೆಸ್ ಫೋನ್ ಚಾರ್ಜರ್, ಟು ಸ್ಪೋಕ್ ಸ್ಟೀರಿಂಗ್ ವೀಲ್, ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








