ಕಂಪನಿಯ ಕಷ್ಟಕ್ಕೆ ಹೆಗಲು ಕೊಟ್ಟ ಕಾರಿದು: ಇದಿಲ್ಲದಿದ್ದರೆ ಬ್ರಾಂಡ್ ಇಲ್ಲ! ಅಗ್ಗದ ಬೆಲೆ, ಧಿಡೀರ್ ಲಾಭ
ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಸ್ಕೋಡಾ, 2025 ರ ಮೂರನೇ ತ್ರೈಮಾಸಿಕದಲ್ಲಿ ದಾಖಲೆಯ ಮಾರಾಟ ಬೆಳವಣಿಗೆಯನ್ನು ದಾಖಲಿಸಿದೆ. ಜುಲೈನಿಂದ ಸೆಪ್ಟೆಂಬರ್ ನಡುವೆ 17,161 ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಭಾವಶಾಲಿ ಕಾರ್ಯಕ್ಷಮತೆಗೆ ಕಾರಣ ಬ್ರ್ಯಾಂಡ್‌ನ ಮೊದಲ ಸಬ್ - 4 ಮೀಟರ್ SUV ಸ್ಕೋಡಾ ಕೈಲಾಕ್ ಆಗಿದೆ. ಇದು ಬಿಡುಗಡೆಯಾದಾಗಿ (2024 ಡಿಸೆಂಬರ್)ನಿಂದ ಇಲ್ಲಿಯವರೆಗೆ 34,500 ಯುನಿಟ್ ಕಾರುಗಳು ಮಾರಾಟವಾಗಿವೆ. ಸ್ಕೋಡಾ ಕೈಲಾಕ್ 2025 ರಲ್ಲಿ ಕಂಪನಿಯ ಪ್ರಮುಖ ಬೆಳವಣಿಗೆಯ ಕಾರಾಗಿ ಹೊರಹೊಮ್ಮಿದೆ.
ಈ ಕಾಂಪ್ಯಾಕ್ಟ್ ಸಬ್ - 4 ಮೀಟರ್ ಎಸ್‌ಯುವಿ ಈ ವರ್ಷ ಭಾರತದಲ್ಲಿ ಕಂಪನಿಯ ಒಟ್ಟಾರೆ ಮಾರಾಟದ ಕಾರ್ಯಕ್ಷಮತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ಕೋಡಾ ಆಟೋ ಇಂಡಿಯಾ ಸೆಪ್ಟೆಂಬರ್ ತಿಂಗಳ ಒಂದರಲ್ಲೆ 6,636 ಯುನಿಟ್ ಕಾರುಗಳ ಮಾರಾಟದೊಂದಿಗೆ ಮಾರಾಟದಲ್ಲಿ ಶೇ101 ರಷ್ಟು ವಾರ್ಷಿಕ (2024 ಸೆಪ್ಟೆಂಬರ್‌ಗೆ ಹೋಲಿಸಿದರೆ) ಬೆಳವಣಿಗೆಯನ್ನು ವರದಿ ಮಾಡಿದೆ.

ಈ ಮಾರಾಟದಲ್ಲಿ ಬಹುಪಾಲು ಸ್ಕೋಡಾ ಕೈಲಾಕ್ ಕೊಡುಗೆ ನೀಡಿರುವುದು ವಿಶೇಷ. ಕೈಲಾಕ್‌ನ ಬಿಡುಗಡೆಯು ಹೆಚ್ಚು ಸ್ಪರ್ಧಾತ್ಮಕ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸ್ಕೋಡಾದ ಹೆಜ್ಜೆಗುರುತನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಇದರ ಪ್ರೀಮಿಯಂ ಸ್ಟೈಲಿಂಗ್, ಸುಧಾರಿತ ವೈಶಿಷ್ಟ್ಯಗಳು ಮತ್ತು ಪರಿಣಾಮಕಾರಿ ಎಂಜಿನ್‌ನೊಂದಿಗೆ ಖರೀದಿದಾರರನ್ನು ಆಕರ್ಷಿಸುತ್ತಿದೆ.
ಇದು ವೇಗವಾಗಿ ಬೆಳೆಯುತ್ತಿರುವ ಭಾರತೀಯ ಕಾರು ಮಾರುಕಟ್ಟೆಯಲ್ಲಿ, ವಿಶೇಷವಾಗಿ ಮೌಲ್ಯಯುತ 5 - ಸೀಟರ್ SUV ಗಳನ್ನು ಹುಡುಕುತ್ತಿರುವ ನಗರ ಮತ್ತು ಅರೆ - ನಗರ ಪ್ರದೇಶಗಳಲ್ಲಿ ಬಲವಾದ ನೆಲೆಯನ್ನು ನಿರ್ಮಿಸಲು ಸಹಾಯ ಮಾಡಿದೆ. ಸ್ಕೋಡಾ ಸರಳೀಕೃತ GST ತೆರಿಗೆ ಮತ್ತು ಭಾರತದಲ್ಲಿ ಹಬ್ಬದ ಸೀಸನ್ ಕೂಡ ಸ್ಕೋಡಾ ಕಾರುಗಳ ಬಲವಾದ ಮಾರಾಟಕ್ಕೆ ಕೊಗುಗೆ ನೀಡಿವೆ ಎಂದು ಹೇಳಬಹುದು.

ಕೈಲಾಕ್‌ನ ಯಶಸ್ಸಿಗೆ ಪೂರಕವಾಗಿ, ಸ್ಕೋಡಾ ಭಾರತದಲ್ಲಿ ತನ್ನ 25 ವರ್ಷಗಳ ಆಚರಣೆಯ ಭಾಗವಾಗಿ ಕುಶಾಕ್, ಸ್ಲಾವಿಯಾ ಮತ್ತು ಕೊಡಿಯಾಕ್‌ನ ಸ್ಪೆಷಲ್ ಎಡಿಷನ್ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಿತು. ಕೊಡಿಯಾಕ್, ಒಂದು ವಿಶಿಷ್ಟ ಪ್ರೀಮಿಯಂ SUV ಆಗಿದ್ದರೂ, ಅದರ 4x4 ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ. ಇದು ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ ಮೊದಲ ಪೆಟ್ರೋಲ್ SUV ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.
ಸ್ಕೋಡಾ ಕೈಲಾಕ್ ವಿಶೆಷತೆಗಳು: ಹೊಚ್ಚ ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ರೂ. 7.55 ಲಕ್ಷದಿಂದ ರೂ. 12.80 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಕ್ಲಾಸಿಕ್, ಸಿಗ್ನೇಚರ್ ಹಾಗೂ ಪ್ರೆಸ್ಟೀಜ್ ಒಳಗೊಂಡಂತೆ ವಿವಿಧ ವೇರಿಯೆಂಟ್ ಆಯ್ಕೆಯನ್ನು ಪಡೆದಿದೆ.

ಈ ಪುಟ್ಟ ಕಾರು 1.0-ಲೀಟರ್ ಟಿಎಸ್‌ಟಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ಇದು 115 ಬಿಹೆಚ್ ಪವರ್ ಹಾಗೂ 178 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 15 ರಿಂದ 18 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಈ ಕಾರು ಯುವ ಗ್ರಾಹಕರನ್ನು ಸೆಳೆಯುವ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟು-ಸ್ಪೋಕ್ ಸ್ಟೀರಿಂಗ್ ವೀಲ್, ಸಿಂಗಲ್-ಪೇನ್ ಸನ್‌ರೂಫ್, ಕೀಲೆಸ್ ಎಂಟ್ರಿ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ಕೋಡಾ ಕೈಲಾಕ್‌ನ 34,500 ಯೂನಿಟ್‌ಗಳಿಗೂ ಹೆಚ್ಚಿನ ಮಾರಾಟದ ಮೈಲಿಗಲ್ಲು 2025 ರಲ್ಲಿ ಸ್ಕೋಡಾ ಆಟೋ ಇಂಡಿಯಾದ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಅದರ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ಮಾದರಿಯು ಬ್ರ್ಯಾಂಡ್ ಬಲವಾದ ಒಟ್ಟಾರೆ ಲಾಭವನ್ನು ಗಳಿಸಲು, ತ್ರೈಮಾಸಿಕ ಮಾರಾಟವನ್ನು ದ್ವಿಗುಣಗೊಳಿಸಲು ಮತ್ತು ಭಾರತದಲ್ಲಿ ಸ್ಕೋಡಾದ ಪ್ರೀಮಿಯಂ ಕಾಂಪ್ಯಾಕ್ಟ್ SUV ಉಪಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡಿದೆ.


Click it and Unblock the Notifications








