ಈ ಸ್ಕೋಡಾ ಕಾರಿಗೆ ಕ್ಯೂ ನಿಂತ ಜನ: ಪ್ರತಿ ಕಿ.ಮೀಗೆ ಕೇವಲ 24 ಪೈಸೆ ವೆಚ್ಚ ಅಷ್ಟೇ!

ಭಾರತೀಯ ಮಾರುಕಟ್ಟೆಯಲ್ಲಿ ಸ್ಪೋರ್ಟ್ ಯುಟಿಲಿಟಿ ವಾಹನಗಳಿಗೆ (ಎಸ್‍ಯುವಿ) ಹೆಚ್ಚಿನ ಬೇಡಿಕೆ ಪಡೆಯುತ್ತಿರುವಾ ಸ್ಕೋಡಾ ತನ್ನ ಬಹುನಿರೀಕ್ಷಿತ ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಈ ಹೊಸ ಸ್ಕೋಡಾ ಕೈಲಾಕ್ (Skoda Kylaq) ಸಬ್ 4-ಮೀಟರ್ ಎಸ್‍ಯುವಿ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.89 ಲಕ್ಷವಾಗಿದೆ. QB-A0-IN ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುವ ಕುಶಾಕ್ ಮತ್ತು ಸ್ಲಾವಿಯಾದಂತಹ ಜನಪ್ರಿಯ ಮಾದರಿಗಳನ್ನು ಸ್ಕೋಡಾ ಈಗಾಗಲೇ ಹೊಂದಿದೆ. ಈ ಪ್ಲಾಟ್‌ಫಾರ್ಮ್ ಅನ್ನು ಬಳಸುವ ಮೂರನೇ ಸ್ಕೋಡಾ ಕಾರು ಕೈಲಾಕ್ ಅಗಿದೆ.

ಈ ಸ್ಕೋಡಾ ಕೈಲಾಕ್ ಎಸ್‌ಯುವಿಗೆ ಭಾರೀ ಬೇಡಿಕೆಯನ್ನು ಹೊಂದಿರುವುದರಿಂದ ಕಾಯುವ ಅವಧಿಯನ್ನು ಹೊಂದಿದೆ. ಸದ್ಯಕ್ಕೆ ಈ ಕೈಲಾಕ್ ಎಸ್‍ಯುವಿಗೆ ಕೈಲಾಕ್‌ಗಾಗಿ ಕಾಯುವ ಅವಧಿ 4 ತಿಂಗಳವರೆಗೆ ತಲುಪಿದೆ. ಈ ವರ್ಷದ ಮೇ ವೇಳೆಗೆ ಮೊದಲ ಹಂತದಲ್ಲಿ ಕೈಲಾಕ್‌ನ 33,000 ಯುನಿಟ್‌ಗಳನ್ನು ವಿತರಿಸಲು ಕಂಪನಿ ನಿರ್ಧರಿಸಿದೆ. ಆದರೆ ಈ ವಿದೇಶಿ ಬ್ರಾಂಡ್ ಕಾರುಗಳಿಗೆ ನಿರ್ವಹಣಾ ವೆಚ್ಚ ದುಬಾರಿಯಾಗಿರುವುದರಿಂದ ಕಾರು ಪ್ರೇಮಿಗಳು ಕೂಡ ಎರಡೂ ಬಾರಿ ಯೋಚಿಸುತ್ತಾರೆ.

Skoda Kylaq

ಯಾವುದೇ ಟೆನ್ಷನ್ ಇಲ್ಲದೇ ಸ್ಕೋಡಾದ ಹೊಸ ಕಾರನ್ನು ತೆಗೆದುಕೊಳ್ಳಬಹುದು ಎಂದು ತಯಾರಕರು ಹೇಳುತ್ತಾರೆ. ಈ ವಿಭಾಗದಲ್ಲಿ ಕೈಲಾಕ್ ಅತ್ಯಂತ ಕಡಿಮೆ ಬೆಲೆಯ ಕಾರು ಎಂದು ಸ್ಕೋಡಾ ಹೇಳಿಕೊಂಡಿದೆ. ಮೊದಲ 33,333 ಗ್ರಾಹಕರಿಗೆ 5 ವರ್ಷಗಳವರೆಗೆ ಪ್ರತಿ ಕಿ.ಮೀ.ಗೆ ನಿರ್ವಹಣಾ ವೆಚ್ಚ ರೂ 0.24 ಎಂದು ಸ್ಕೋಡಾ ಹೇಳಿಕೊಂಡಿದೆ. ಮೊದಲ 33333 ಗ್ರಾಹಕರು 3 ವರ್ಷಗಳ ಸ್ಟ್ಯಾಂಡರ್ಡ್ ಪ್ಯಾಕೇಜ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಇದು ನಿರ್ವಹಣೆಯನ್ನು ಕಡಿಮೆ ಮಾಡುತ್ತದೆ.

ಸ್ಕೋಡಾ ಕೈಲಾಕ್ ಎಸ್‍ಯುವಿಯು ಭಾರತದಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೊನೆಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಈ ಸ್ಕೋಡಾ ಕೈಲಾಕ್ ಎಸ್‌ಯುವಿ 446 ಲೀಟರ್ ಬೂಟ್ ಸ್ಪೇಸ್ ಸಾಮರ್ಥ್ಯವನ್ನು ಹೊಂದಿದ್ದು, ಈ ಎಸ್‍ಯುವಿಯ ಸೀಟುಗಳನ್ನು ಮಡಚಿದರೆ 1,265 ಲೀಟರ್‌ಗೆ ಬೂಟ್ ಸ್ಪೇಸ್ ಅನ್ನು ವಿಸ್ತರಿಸಬಹುದು. ಈ ಎಸ್‍ಯುವಿ 189mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

Skoda Kylaq

ಸ್ಕೋಡಾ ಕೈಲಾಕ್ ಹೊಸ ಎಸ್‍ಯುವಿಯು ಸ್ಕೋಡಾ ಬ್ರ್ಯಾಂಡ್‌ನ ಇತ್ತೀಚಿನ 'ಮಾಡರ್ನ್ ಸಾಲಿಡ್' ವಿನ್ಯಾಸ ಭಾಷೆಯ ಅಂಶಗಳನ್ನು ಒಳಗೊಂಡಿದೆ. ಕೈಲಾಕ್ ಕ್ಲೀನ್ ಲೈನ್‌ಗಳ ಜೊತೆ ಮುಂಭಾಗದ ಲ್ಯಾಂಪ್ ಗಳೊಂದಿಗೆ ಕುಶಾಕ್‌ನಂತೆ ಸ್ವಲ್ಪ ಕಾಣಿಸುತ್ತದೆ. ಈ ಎಸ್‍ಯುವಿಯ ಟ್ರೆಂಡಿಂಗ್ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಎಲ್ಇಡಿ ಡಿಆರ್ಎಲ್ ಅರೇಂಜ್ಮೆಂಟ್ ಅಪ್ ಟಾಪ್ ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಕೆಳ ಭಾಗದಲ್ಲಿ ಇದೆ. ಇದರೊಂದಿಗೆ ಅಲ್ಯೂಮಿನಿಯಂ-ಲುಕ್ ಸ್ಪಾಯ್ಲರ್‌ನೊಂದಿಗೆ ಎರಡು-ಟೋನ್ ಬಂಪರ್ ಸೇರಿವೆ.

ಇನ್ನು ಈ ಹೊಸ ಕೈಲಾಕ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಟೂ-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ಅನೇಕ ಅಂಶಗಳನ್ನು ಹಂಚಿಕೊಳ್ಳುತ್ತದೆ. ಇದು ನವೀಕರಿಸಿದ OS, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಅನ್ನು ಸಹ ಒಳಗೊಂಡಿದೆ.

Skoda Kylaq

ಈ ಸ್ಕೋಡಾ ಕೈಲಾಕ್ ಎಸ್‍ಯುವಿಯಲ್ಲಿ ಸನ್‌ರೂಫ್ (ಸಿಂಗಲ್-ಪೇನ್), ಕೀಲೆಸ್ ಎಂಟ್ರಿ, ವೈರ್‌ಲೆಸ್ ಫೋನ್ ಚಾರ್ಜರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಮುಂಭಾಗದ ಸೀಟ್ ವೆಂಟಿಲೇಶನ್ ಮತ್ತು ಲೆಥೆರೆಟ್ ಅಪ್ಹೋಲ್‌ಸ್ಟರಿಗಳನ್ನು ಒಳಗೊಂಡಿದೆ. ಕೈಲಾಕ್ ಚಾಲಕನಿಗೆ ಮಾತ್ರವಲ್ಲದೆ ಮುಂಭಾಗದ ಪ್ರಯಾಣಿಕರಿಗೂ ಫಾರ್ವಡ್ ಸೀಟ್ ಹೊಂದಾಣಿಕೆಯನ್ನು ಹೊಂದಿದೆ.

ಇನ್ನು ಈ ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಬೋರ್ಡ್‌ನಾದ್ಯಂತ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ. ಸ್ಕೋಡಾ ಕೈಲಾಕ್ ಎಸ್‌ಯುವಿಯಲ್ಲಿ ಕುಶಾಕ್ ಮತ್ತು ಸ್ಲಾವಿಯಾದೊಂದಿಗೆ ಬಳಸಿದ ಅದೇ 1.0-ಲೀಟರ್ TSI ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

More from DriveSpark

Article Published On: Friday, January 31, 2025, 7:30 [IST]
English summary
Skoda kylaq compact suv waiting period details
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+