2025 ರಲ್ಲಿ ಬಿಡುಗಡೆಯಾಗಲಿರುವ ಸ್ಟ್ರಾಂಗ್ ಹೈಬ್ರಿಡ್ ಕಾರುಗಳು: ಮಾರುತಿ, ಟೊಯೋಟಾ, ಕಿಯಾ!
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ಸ್ಟ್ರಾಂಗ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಹೆಚ್ಚಿನ ಮೈಲೇಜ್ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಬರುವ ಈ ಕಾರುಗಳು ಭಾರತದಲ್ಲಿ ಈಗ ಬಹಳ ಜನಪ್ರಿಯವಾಗುತ್ತಿವೆ. ಜನರು ಕೂಡ ಈಗ ಹೆಚ್ಚಿನ ಆಯ್ಕೆಗಳನ್ನು ಹುಡುಕುತ್ತಿರುವ ಕಾರಣ 2025 ರಲ್ಲಿ ಸಾಕಷ್ಟು ಸ್ಟ್ರಾಂಗ್ ಹೈಬ್ರಿಡ್ ಕಾರುಗಳು ಬಿಡುಗಡೆಯಾಗಲಿವೆ. ಈ ವರ್ಷ ಪಾದಾರ್ಪಣೆ ಮಾಡಲಿರುವ ಎಲ್ಲಾ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ. ಹಾಗಾದ್ರೆ ಬನ್ನಿ ಯಾವೆಲ್ಲಾ ಬ್ರಾಂಡ್‌ಗಳು ಹೊಸ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ.
ಕಿಯಾ ಸೆಲ್ಟೋಸ್ ಸ್ಟ್ರಾಂಗ್ ಹೈಬ್ರಿಡ್: ವರದಿಗಳ ಪ್ರಕಾರ, ಹೊಸ ತಲೆಮಾರಿನ ಸೆಲ್ಟೋಸ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್‌ನೊಂದಿಗೆ 2025 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ವಿನ್ಯಾಸದ ಪ್ರಕಾರ, ಹೊಸ ತಲೆಮಾರಿನ ಸೆಲ್ಟೋಸ್ ಹಲವಾರು ಬದಲಾವಣೆಗಳನ್ನು ಹೊಂದಿರುತ್ತದೆ. ಇದರ ಅಂದಾಜಿಸಲಾದ ಮೈಲೇಜ್ ನೋಡುವುದಾದ್ರೆ ಸುಮಾರು 18.1 ರಿಂದ 19.8 ಕಿ.ಮೀ. ಇರಲಿದೆ.

ಕಿಯಾ ಸೆಲ್ಟೋಸ್ ಹೈಬ್ರಿಡ್ 1.6 - ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುವ ನಿರೀಕ್ಷೆಯಿದ್ದು, ಇದು ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಯಾಗಲಿದೆ. ಈ ಎಂಜಿನ್ 141 ಬಿಹೆಚ್ ಪವರ್ ಮತ್ತು 265 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 6 - ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಅನ್ನು ಸಹ ಪಡೆಯಬಹುದು.
ಮಾರುತಿ ಸುಜುಕಿ ಫ್ರಾಂಕ್ಸ್ ಫೇಸ್‌ಲಿಫ್ಟ್: 2025 ರ ಮಧ್ಯದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಫೇಸ್ ಲಿಫ್ಟ್ ಹೈಬ್ರಿಡ್ ಕಾರು ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ವಾಹನದ ಮೈಲೇಜ್ 30 ಕಿ.ಮೀ ಎಂದು ನಂಬಲಾಗಿದೆ. ಈ ಹೊಸ ಕಾರನಲ್ಲಿ, 1.2-ಲೀಟರ್ 3-ಸಿಲಿಂಡರ್ ಝಡ್ 12 ಇ ಪೆಟ್ರೋಲ್ ಮೋಟರ್ ಬದಲಾಗಿ, ಎಂಜಿನ್ ಜನರೇಟರ್‌ನಂತೆ ಕಾರ್ಯನಿರ್ವಹಿಸಲಿದೆ. ಇದು ಬ್ಯಾಟರಿಗಳನ್ನು ಚಾರ್ಜ್ ಮಾಡುವ ಮೂಲಕ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲನೆ ಮಾಡಲಾಗುತ್ತದೆ.

ಫ್ರಾಂಕ್ಸ್ ಫೇಸ್ ಲಿಫ್ಟ್‌ನ ಬಾಹ್ಯ ವಿನ್ಯಾಸಕ್ಕೆ ಸಂಬಂಧಿಸಿದಂತೆ, ಇದು ಹೊಸ ಹಿಂಭಾಗದ ಟೈಲ್ ಲೈಟ್‌ಗಳು ಮತ್ತು ಹೊಸ ಹಿಂಭಾಗದ ಬಂಪರ್ ಪಡೆಯಬಹುದು. ಹಾಗೆಯೇ ಹೊಸ ಎಲ್ಇಡಿ ಹೆಡ್ ಲೈಟ್‌ಗಳು, ಹೊಸ ಬಂಪರ್ ಮತ್ತು ಗ್ರಿಲ್ ಸೇರಿದಂತೆ ಮರುವಿನ್ಯಾಸಗೊಳಿಸಿದ ಮುಂಭಾಗದ ಫ್ಯಾಸಿಯಾವನ್ನು ಪಡೆಯಬಹುದು. ವಾಹನದ ಇತರ ವಿವರಗಳನ್ನು ಪ್ರಸ್ತುತ ರಹಸ್ಯವಾಗಿಡಲಾಗಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 7 ಸೀಟರ್: ಮಾರುತಿ ಸುಜುಕಿ ರೂ. 20 ರಿಂದ 25 ಲಕ್ಷಗಳ ನಡುವೆ ತನ್ನ ಜನಪ್ರಿಯ ಸ್ಟ್ರಾಂಗ್ ಹೈಬ್ರಿಡ್ ಎಸ್‌ಯುವಿ ಗ್ರ್ಯಾಂಡ್ ವಿಟಾರಾದ 7 ಸೀಟರ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದ್ದು, ನಿಖರವಾದ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ 7-ಸೀಟರ್: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 7 ಸೀಟರ್ ಮಾರುತಿ ಮಾದರಿಯ ಬಿಡುಗಡೆಯ ನಂತರ ಟೊಯೋಟಾ ಹೈರೈಡರ್‌ನ ಹೊಸ 7-ಸೀಟರ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗುವುದು. ರೂ. 20 ರಿಂದ 25 ಲಕ್ಷಗಳ ನಡುವೆ ಇದರ ಬೆಲೆಗಳು ಕೂಡ ಇರಲಿವೆ. ಟೊಯೊಟಾ 2025ರ ಮಧ್ಯದಲ್ಲಿ ಹೈರೈಡರ್ 7-ಸೀಟರ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications