ರಣಹದ್ದಿನಂತಹ ಕಾರುಗಳಿವು! ಕೇವಲ 10 ಲಕ್ಷದೊಳಗೆ ಸಿಗುವ ಪವರ್‌ಫುಲ್ ಎಸ್‌ಯುವಿಗಳು!

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾರು ಖರೀದಿದಾರರ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಕೈಗೆಟುಕುವ ಬೆಲೆಗೆ ಹೊಸ ಕಾರುಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುತ್ತಿದ್ದು, ಗ್ರಾಹಕರ ಕಾರು ಖರೀದಿಸುವ ಕನಸನ್ನು ಹಲವು ಕಂಪನಿಗಳು ನನಸು ಮಾಡುತ್ತಿವೆ. ಈಗಲೂ ಒಂದಷ್ಟು ಮಂದಿ ತಮ್ಮ ಬಜೆಟ್‌ನಲ್ಲಿ ಕಾರುಗಳನ್ನು ಹುಡುತ್ತಿದ್ದರೆ ಆಶ್ಚರ್ಯವಿಲ್ಲ. ಅಂಥವರಲ್ಲಿ ನೀವು ಕೂಡ ಒಬ್ಬರಾಗಿದ್ದರೆ, ನಿಮಗಾಗಿ ಐದು ಆಕರ್ಷಕ ಎಸ್‌ಯುವಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಇವೆಲ್ಲವು ಹತ್ತು ಲಕ್ಷ ಎಕ್ಸ್‌ ಶೋರೂಂ ಬೆಲೆಯಲ್ಲಿ ಭಾರತದಲ್ಲಿ ಖರೀದಿಗೆ ಲಭ್ಯವಿರುವ ಆಕರ್ಷಕ ಕಾರುಗಳಾಗಿವೆ.

ಟೊಯೋಟಾ ಟೈಸರ್: ಟೊಯೋಟಾ ಟೈಸರ್ ಬೆಲೆಯು ರೂ. 7.74 ಲಕ್ಷದಿಂದ (ಎಕ್ಸ್‌ ಶೋರಂ) ಪ್ರಾರಂಭವಾಗುತ್ತದೆ. ಟೊಯೋಟಾ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ 6 ಟೈಸರ್ ವೇರಿಯೆಂಟ್‌ಗಳನ್ನು ನೀಡುತ್ತಿದೆ. ಇದರಲ್ಲಿ ಐದು ವೇರಿಯೆಂಟ್‌ಗಳು 1.2 - ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮ್ಯಾನುವಲ್ ಮತ್ತು AMT ಆಯ್ಕೆಗಳೊಂದಿಗೆ ಮತ್ತು ಅದೇ 1.2 - ಲೀಟರ್ CNG ಆವೃತ್ತಿಯನ್ನು ಮ್ಯಾನುವಲ್ ರೂಪದಲ್ಲಿ ಮಾತ್ರ ಹೊಂದಿವೆ.

suvs-under-10-lakhs-in-india-tata-toyota-mahindra-hyundai

ಮಾರುತಿ ಫ್ರಾಂಕ್ಸ್: ಮಾರುತಿ ಸುಜುಕಿ ಫ್ರಾಂಕ್ಸ್ ಬೆಲೆಯು ರೂ. 7.55 ಲಕ್ಷದಿಂದ ಪ್ರಾರಂಭವಾಗುತ್ತದೆ. ಮಾರುತಿ ಫ್ರಾಂಕ್ಸ್ ಕಾರು ಟೊಯೋಟಾ ಟೈಸರ್ ರೀಬ್ಯಾಡ್ಜ್ ಆವೃತ್ತಿಯಾಗಿದೆ. ಎರಡು CNG - ಚಾಲಿತ ಮತ್ತು ಒಂದು ಟರ್ಬೊ- ಪೆಟ್ರೋಲ್ ರೂಪಾಂತರವನ್ನು ಒಳಗೊಂಡಂತೆ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ 10 ವೇರಿಯೆಂಟ್‌ಗಳನ್ನು ಈ ಕಾರು ಹೊಂದಿದೆ. ಫ್ರಾಂಕ್ಸ್‌ನಲ್ಲಿ ನೀಡಲಾಗುವ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳು ಟೈಸರ್‌ನಂತೆಯೇ ಇರುತ್ತವೆ.

ಹುಂಡೈ ವೆನ್ಯೂ: ಹುಂಡೈ ವೆನ್ಯೂ ಬೆಲೆಯು ರೂ. 7.94 ಲಕ್ಷದಿಂದ (ಎಕ್ಸ್‌ ಶೋರಂ)ಪ್ರಾರಂಭವಾಗುತ್ತದೆ. ಇದು ಕೂಡ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ 7 ವೇರಿಯೆಂಟ್‌ಗಳನ್ನು ಹೊಂದಿದೆ. ಹುಂಡೈ ವೆನ್ಯೂ ಸೋನೆಟ್‌ನಂತೆಯೇ ಅದೇ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದ್ದರೂ, ಈ ಕಡಿಮೆ ವೇರಿಯೆಂಟ್‌ಗಳು 1.2-ಲೀಟರ್ ಪೆಟ್ರೋಲ್ ಮತ್ತು 1.2 - ಲೀಟರ್ ಟರ್ಬೊ - ಪೆಟ್ರೋಲ್ ಮಾತ್ರ ಹೊಂದಿವೆ.

suvs-under-10-lakhs-in-india-tata-toyota-mahindra-hyundai

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ: XUV 3XO ಆರಂಭಿಕ ಬೆಲೆ 7.99 ಲಕ್ಷ ರೂ.(ಎಕ್ಸ್‌ ಶೋರಂ)ನಿಂದ ಪ್ರಾರಂಭವಾಗುತ್ತದೆ. 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ 4 ಮಹೀಂದ್ರಾ XUV 3XO ವೇರಿಯೆವೆಂಟ್‌ಗಳು ಲಭ್ಯವಿದೆ. ಈ ಕಡಿಮೆ ಟ್ರಿಮ್‌ಗಳಲ್ಲಿ, 1.2 - ಲೀಟರ್ ಟರ್ಬೊ -ಪೆಟ್ರೋಲ್ ಎಂಜಿನ್ ಅಥವಾ 1.5 -ಲೀಟರ್ ಡೀಸೆಲ್‌ನೊಂದಿಗೆ ಬರುತ್ತದೆ. ಪೆಟ್ರೋಲ್ ಹೆಚ್ಚಿನ ವೇರಿಯೆಂಟ್‌ಗಳಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟ್ ಆಟೋ ಹಾಗೂ ಡೀಸೆಲ್ 6-ಸ್ಪೀಡ್ AMT ಆಯ್ಕೆಯನ್ನು ಹೊಂದಿದೆ.

ಕಿಯಾ ಸೊನೆಟ್: ಕಿಯಾ ಸೊನೆಟ್ ಆರಂಭಿಕ ಬೆಲೆ 7.99 ಲಕ್ಷ (ಎಕ್ಸ್‌ ಶೋರಂ)ರೂ.ನಿಂದ ಪ್ರಾರಂಭವಾಗುತ್ತದೆ. ಇದು 10 ಲಕ್ಷ ರೂ.ಗಿಂತ(ಎಕ್ಸ್‌ ಶೋರಂ) ಕಡಿಮೆ ಬೆಲೆಯ 7 ವೇರಿಯೆಂಟ್‌ಗಳನ್ನು ಹೊಂದಿದೆ. ಈ 7 ಲೋವರ್-ಸ್ಪೆಕ್ ವೇರಿಯೆಂಟ್‌ಗಳು 1.2-ಲೀಟರ್ ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ನೊಂದಿಗೆ ಲಭ್ಯವಿದೆ. ಹಾಗೆಯೇ 1.0-ಲೀಟರ್ ಟರ್ಬೊ-ಪೆಟ್ರೋಲ್ 6-ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ಮತ್ತು 1.5-ಲೀಟರ್ ಡೀಸೆಲ್ 6-ಸ್ಪೀಡ್ ಮ್ಯಾನುವಲ್ ನೊಂದಿಗೆ ಲಭ್ಯವಿದೆ.

suvs-under-10-lakhs-in-india-tata-toyota-mahindra-hyundai

ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ಬೇಸ್‌ ವೇರಿಯೆಂಟ್ ಆರಂಭಿಕ ಬೆಲೆಯು 8 ಲಕ್ಷ ರೂ.ನಿಂದ (ಎಕ್ಸ್‌ ಶೋರಂ)ಪ್ರಾರಂಭವಾಗುತ್ತದೆ. ಪೆಟ್ರೋಲ್-ಎಂಟಿ, ಪೆಟ್ರೋಲ್-ಎಎಂಟಿ, ಡೀಸೆಲ್ - ಎಂಟಿ ಮತ್ತು ಸಿಎನ್‌ಜಿ - ಎಂಟಿ ಪವರ್ ಟ್ರೇನ್ ಆಯ್ಕೆಗಳು ಸೇರಿದಂತೆ 9 ಟಾಟಾ ನೆಕ್ಸಾನ್ ವೇರಿಯೆಂಟ್‌ಗಳು 10 ಲಕ್ಷ ರೂ.ಗಿಂತ (ಎಕ್ಸ್‌ ಶೋರಂ)ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಕಾರು 1.2 - ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, May 25, 2025, 10:10 [IST]
English summary
Suvs under 10 lakhs in india tata toyota mahindra hyundai
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+