ಭಾರತದಲ್ಲಿ ಡಿಮ್ಯಾಂಡ್ ಇಲ್ಲದ ಕಾರನ್ನು ವಿದೇಶದಲ್ಲಿ ಮುಗಿಬಿದ್ದು ಖರೀದಿ! ಸ್ಪೆಷಲ್ ಎಡಿಷನ್ ಬಿಡುಗಡೆ!
ಸುಜುಕಿ ಜಿಮ್ನಿ 55ನೇ ವಾರ್ಷಿಕೋತ್ಸವ ಆವೃತ್ತಿಯನ್ನು ಫ್ರಾನ್ಸ್ ನಲ್ಲಿ ಅನಾವರಣಗೊಳಿಸಲಾಗಿದೆ, ಇದು ಸ್ಪೆಷಲ್ ಎಡಿಷನ್ ಆಗಿರುವುದರಿಂದ ಕೇವಲ 55 ಯುನಿಟ್ ಕಾರುಗಳು ಮಾತ್ರ ಮಾರಾಟ ಮಾಡಲಾಗುವುದು. ಇದು ರೆಟ್ರೊ ಸ್ಟೈಲಿಂಗ್, ಅಗತ್ಯ ವೈಶಿಷ್ಟ್ಯಗಳೊಂದಿಗೆ € 28,955 (ಸುಮಾರು ₹ 28.75 ಲಕ್ಷ) ಬೆಲೆಗೆ ಖರೀದಿಗೆ ಲಭ್ಯವಿದೆ. ಈ ತಿಂಗಳ ಅಂತ್ಯದ ವೇಳೆಗೆ ಫ್ರಾನ್ಸ್ ನಲ್ಲಿ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಇಷ್ಟು ಬೆಲೆಯಿದ್ದರೂ ಯೂರೋಪಿಯನ್ ಮಾರುಕಟ್ಟೆಗಳಲ್ಲಿ ಗ್ರಾಹಕರು ಈ ಕಾರನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಜೂನ್ 2023 ರಲ್ಲಿ ಬಿಡುಗಡೆಯಾದಾಗಿನಿಂದ ಏಪ್ರಿಲ್ ಅಂತ್ಯದವರೆಗೆ ಜಿಮ್ನಿಯ 1,02,024 ಯುನಿಟ್ ಕಾರುಗಳು ಮಾರಾಟವಾಗಿವೆ. ಇದರಲ್ಲಿ ರಫ್ತಿನ ಸಂಖ್ಯೆ ಹೆಚ್ಚು, ಭಾರತೀಯ ಮಾರಾಟ ತೀರಾ ಕಡಿಮೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 26,180 ಯುನಿಟ್ ಕಾರುಗಳು ಮಾತ್ರ ಮಾರಾಟವಾಗಿದ್ರೆ, ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ 75,844 ಯುನಿಟ್ ಕಾರುಗಳನ್ನು ರಫ್ತು ಮಾಡಲಾಗಿದೆ.

ಈ ಕಾರಿಗೆ ಭಾರತದಲ್ಲಿ ಬೇಡಿಕೆ ಇಲ್ಲ ಎಂಬುದನ್ನು ಈ ಅಂಕಿಅಂಶಗಳು ತಿಳಿಸುತ್ತವೆ. ಅಕ್ಟೋಬರ್ 2023 ರಲ್ಲಿ, ಭಾರತದಲ್ಲಿ 5 ಡೋರ್ ಎಸ್‌ಯುವಿಯನ್ನು ಪ್ರಾರಂಭಿಸಿದ ಐದು ತಿಂಗಳ ನಂತರ, ಮಾರುತಿ ಜಿಮ್ನಿಯ ರಫ್ತುಗಳು ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಸೇರಿದಂತೆ ಪ್ರಮುಖ ಸಾಗರೋತ್ತರ ಮಾರುಕಟ್ಟೆಗಳಿಗೆ ರಫ್ತು ಮಾಡಲು ಪ್ರಾರಂಭಿಸಿತು.
ಮೆಕ್ಸಿಕೊ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಬಲವಾದ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಭಾರತದಲ್ಲಿ ಮಾರುತಿ ಜಿಮ್ನಿ ರೂ.12.76 ಲಕ್ಷದಿಂದ ಗರಿಷ್ಠ ರೂ.14.96 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಈಗ ಬಿಡುಗಡೆಯಾಗಿರುವ ಫ್ರಾನ್ಸ್ ಸ್ಪೆಷಲ್ ಎಡಿಷನ್ € 28,955 (ಸುಮಾರು ₹ 28.75 ಲಕ್ಷ) ಬೆಲೆ ಇದ್ದರೂ ಅಲ್ಲಿ ಉತ್ತಮ ಡಿಮ್ಯಾಂಡ್ ವ್ಯಕ್ತವಾಗಿರುವುದು ವಿಶೇಷ.

ಜಪಾನ್‌ನಲ್ಲೂ ಸಖತ್ ಡಿಮ್ಯಾಂಡ್: ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ ಸುಜುಕಿ ಜಿಮ್ನಿ 5-ಡೋರ್ ಜಪಾನ್‌ನಲ್ಲಿ 'ನೋಮೇಡ್' ಎಂಬ ಹೆಸರಿನಲ್ಲಿ ಅನಾವರಣಗೊಂಡಿತು. ಅಲ್ಲಿನ ಜನರಿಗೆ ಈ ಕಾರು ತುಂಬಾ ಇಷ್ಟವಾಗಿತ್ತು, ಈ ಮೇಡ್ ಇನ್ ಇಂಡಿಯಾ ಜಿಮ್ನಿ 5-ಡೋರ್ ರಫ್ತುಗಳು ದಾಖಲೆಯಲ್ಲಿ ನಡೆದವು. ಬುಕಿಂಗ್ ತೆರೆದ ಕೇವಲ ನಾಲ್ಕು ದಿನಗಳಲ್ಲಿ ಕಂಪನಿಯು 50,000 ಕ್ಕೂ ಹೆಚ್ಚು ಪ್ರೀ-ಆರ್ಡರ್‌ಗಳನ್ನು ಸ್ವೀಕರಿಸಿತ್ತು.
ಫ್ರಾನ್ಸ್ ಸುಜುಕಿ ಜಿಮ್ನಿ ವಿಶೇಷತೆಗಳು: ಕ್ಯಾಬಿನ್ ಬಾಳಿಕೆ ಬರುವ ರಬ್ಬರ್ ಫ್ಲೋರ್ ಮ್ಯಾಟ್‌ಗಳು, 9 ಇಂಚಿನ ಡಿಸ್ಪ್ಲೇ ಸ್ಕ್ರೀನ್ ಆಕರ್ಷಕ ಸೆಂಟರ್ ಕನ್ಸೋಲ್ ಬ್ಯಾಡ್ಜ್ ಮತ್ತು ಫ್ರೆಂಚ್ ಖರೀದಿದಾರರಿಗೆ ಲೆದರ್-ಬೌಂಡ್ ಟ್ರಾವೆಲ್ ಜರ್ನಲ್ ಮತ್ತು ಕಸ್ಟಮ್ ಕೀ ಫೋಬ್ ನಂತಹ ವಿಶೇಷ ಹೆಚ್ಚುವರಿಗಳನ್ನು ಹೊಂದಿದೆ. ಹಾಗೆಯೇ ಹೀಟೆಡ್ ಸೀಟ್‌ಗಳು, ಹವಾನಿಯಂತ್ರಣ, ಬ್ಲೂಟೂತ್ ಮತ್ತು ಯುಎಸ್‌ಬಿ ಪೋರ್ಟ್ ನಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.

ಈ ವಿಶೇಷ ಆವೃತ್ತಿಯು 1.5 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 101 ಬಿಹೆಚ್ ಪವರ್ ಹಾಗೂ 130 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಮತ್ತು ಸುಜುಕಿಯ ಆಲ್ ಗ್ರಿಡ್ ಪ್ರೊ 4ಡಬ್ಲ್ಯೂಡಿ ಸಿಸ್ಟಮ್ ನೊಂದಿಗೆ ಜೋಡಿಸಲಾಗಿದೆ. ಹಿಲ್-ಸ್ಟಾರ್ಟ್ ಅಸಿಸ್ಟ್, ಎರ್ಜೆನ್ಸಿ ಬ್ರೇಕಿಂಗ್, ಟಿಪಿಎಂಎಸ್ ನಂತಹ ಸುರಕ್ಷತಾ ಫೀಚರ್ಸ್ ಕೂಡ ಇವೆ.
ಮುಂಭಾಗದಲ್ಲಿ, ವಿಶಿಷ್ಟವಾದ ಹನಿಕೋಂಬ್ ಗ್ರಿಲ್ ಸಾಮಾನ್ಯ "ಎಸ್" ಬ್ಯಾಡ್ಜ್ ಬದಲಿಗೆ ಪೂರ್ಣ ಸುಜುಕಿ ಸ್ಕ್ರಿಪ್ಟ್ ಅನ್ನು ಹೊಂದಿದ್ದು, ಇದು ಅದರ ಕ್ಲಾಸಿಕ್ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಗಟ್ಟಿಮುಟ್ಟಾದ ಬ್ಲಾಕ್- ಸ್ಟೀಲ್ ವೀಲ್‌ಗಳು ವಾಹನದ ಉಪಯುಕ್ತತೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಗ್ರಾಹಕರು ಜಂಗಲ್ ಗ್ರೀನ್, ಮೀಡಿಯಂ ಗ್ರೇ, ವೈಟ್ ಮತ್ತು ಬ್ಲೂಯಿಶ್ ಬ್ಲ್ಯಾಕ್ ಎಂಬ ನಾಲ್ಕು ಮ್ಯೂಟ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು.


Click it and Unblock the Notifications








