ಬೆಸ್ಟ್ ಡೀಸೆಲ್ ಕಾರು ಹುಡುಕುತ್ತಿದ್ದೀರಾ? ಈ ಹೊಸ ಟಾಟಾ ಕಾರಿದೆ ನೋಡಿ... 8.70 ಲಕ್ಷ ಬೆಲೆ!

ಟಾಟಾ ಆಲ್ಟ್ರೋಜ್ (Tata Altroz) ಪ್ರಸ್ತುತ ಭಾರತದಲ್ಲಿ ಬೆಸ್ಟ್ ಡೀಸೆಲ್ ಕಾರುಗಳಲ್ಲಿ ಒಂದಾಗಿದ್ದು, ಟಾಟಾ ಆಲ್ಟ್ರೋಜ್ ಡೀಸೆಲ್ 1.5 ಲೀಟರ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಡೀಸೆಲ್ ವೇರಿಯೆಂಟ್ ಬೆಲೆ ರೂ. 8.70 ಲಕ್ಷದಿಂದ ಪ್ರಾರಂಭವಾಗುತ್ತದೆ. ಹೆಚ್ಚು ಪರ್ಫಾಮೆನ್ಸ್ ಬಯಸುವವರಿಗೆ ಟಾಟಾ ಆಲ್ಟ್ರೋಜ್ ರೇಸರ್ ಆವೃತ್ತಿ ಕೂಡ ಲಭ್ಯವಿದ್ದು, ಇದು ಹೆಚ್ಚು ಶಕ್ತಿಯುತ ಟರ್ಬೋ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಚುವರಿ ಫೀಚರ್‌ಗಳೊಂದಿಗೆ ಬರುತ್ತದೆ. ಸದ್ಯ ಈ ಲೇಖನದಲ್ಲಿ ಕೇವಲ ಆಲ್ಟ್ರೋಜ್ ಡೀಸೆಲ್ ವೇರಿಯೆಂಟ್ ಬಗ್ಗೆ ತಿಳಿಯೋಣ.

ಹೊಸ ಟಾಟಾ ಆಲ್ಟ್ರೋಜ್ ಡೀಸೆಲ್ ವೇರಿಯೆಂಟ್ 345 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಆಲ್ಟ್ರೋಜ್ ಒಟ್ಟು 40 ರೂಪಾಂತರಗಳಲ್ಲಿ ಲಭ್ಯವಿದ್ದು, XE ಮತ್ತು XZ+ ಡೀಸೆಲ್ ಎಂಜಿನ್‌ನಲ್ಲಿ ಸಿಗುವ ಪ್ರಮುಖ ವೇರಿಯೆಂಟ್‌ಗಳಾಗಿವೆ. ಇದರ ಟಾಪ್ ಎಂಡ್ ಮಾದರಿಯ ಬೆಲೆಯು ರೂ.11.16 (ಎಕ್ಸ್ ಶೋರೂಂ) ಲಕ್ಷಗಳಾಗಿದೆ.

tata-altroz-diesel-variant-top-things-you-should-know

ಈ ಕಾರು ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಅಡ್ಜಸ್ಟಬಲ್ ಹೆಡ್‌ಲೈಟ್‌ಗಳು, ಮುಂಭಾಗ ಮತ್ತು ಹಿಂಭಾಗದ ಫಾಗ್ ಲೈಟ್‌ಗಳು, ಲೆದರ್ ಸ್ಟೀರಿಂಗ್ ವೀಲ್, ಲೆದರ್ ಸೀಟ್‌ಗಳು, ಪವರ್ ವಿಂಡೋ, ಹಿಂಭಾಗದ ಡಿಫಾಗರ್ ಸೇರಿಕೊಂಡ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ರೂ. 8.70 ಲಕ್ಷ ಬೆಲೆಯ ಬೇಸ್ ಡೀಸೆಲ್ ವೇರಿಯೆಂಟ್‌ನಲ್ಲಿ ಈ ಎಲ್ಲಾ ವೈಶಿಷ್ಟ್ಯಗಳು ಲಭ್ಯವಿವೆ.

ಪ್ರಮುಖ ವೈಶಿಷ್ಟ್ಯಗಳಾಗಿ ಹೊಸ ಟಾಟಾ ಆಲ್ಟ್ರೋಜ್‌ನಲ್ಲಿ ಕ್ರೂಸ್ ಕಂಟ್ರೋಲ್, ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಅನ್ನು ಒದಗಿಸುತ್ತದೆ. ಇವು ಈ ಬೆಲೆಗೆ ತಕ್ಕ ಫೀಚರ್ಸ್ ಎಂದು ಹೇಳಬಹುದು.

tata-altroz-diesel-variant-top-things-you-should-know

ಟಾಟಾ ಆಲ್ಟ್ರೋಜ್ ಡೀಸೆಲ್ 1.5 ಲೀಟರ್ ಎಂಜಿನ್ ಅನ್ನು ಹೊಂದಿದ್ದು, ಇದು 90PS ಪವರ್ ಮತ್ತು 200Nm ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಈ ಎಂಜಿನ್‌ಗೆ ಜೋಡಿಸಲ್ಪಟ್ಟಿದ್ದು, ಪ್ರತಿ ಲೀಟರ್ ಡೀಸೆಲ್‌ಗೆ 23.64 kmpl ಮೈಲೇಜ್ ನೀಡುತ್ತದೆ ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.

ಟಾಟಾ ಆಲ್ಟ್ರೋಜ್‌ ಅತ್ಯುತ್ತಮ ಸುರಕ್ಷತಾ ಮಾನದಂಡಗಳನ್ನು ಹೊಂದಿದೆ. ಇದರ ಸುರಕ್ಷತಾ ಫೀಚರ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಇತ್ಯಾದಿ ಇವೆ. ಗ್ಲೋಬಲ್ NCAP‌ನಲ್ಲಿ 5 -ಸ್ಟಾರ್ ಸುರಕ್ಷತಾ ರೇಟಿಂಗ್ ಕೂಡ ಪಡೆದಿದ್ದು, ತನ್ನ ವಿಭಾಗದಲ್ಲಿ ಬೆಸ್ಟ್ ಸುರಕ್ಷಿತ ಕಾರಾಗಿ ಗುರ್ತಿಸಿಕೊಂಡಿದೆ.

tata-altroz-diesel-variant-top-things-you-should-know

ಇತರ ಎಂಜಿನ್ ಆಯ್ಕೆಗಳು ಮತ್ತು ಬಣ್ಣಗಳು: ಡೌನ್‌ಟೌನ್ ರೆಡ್, ಆರ್ಕೇಡ್ ಗ್ರೇ, ಅವೆನ್ಯೂ ವೈಟ್, ಒಪೆರಾ ಬ್ಲೂ, ಮತ್ತು ಕಾಸ್ಮಿಕ್ ಡಾರ್ಕ್ ಎಂಬ ಐದು ಬಣ್ಣಗಳಲ್ಲಿ ಲಭ್ಯವಿದೆ. ಇದು 1.2-ಲೀಟರ್ NA ಪೆಟ್ರೋಲ್, 1.2-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5 - ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಎಲ್ಲಾ ಎಂಜಿನ್ ಆವೃತ್ತಿಗಳಲ್ಲಿಯೂ ಸಾಮಾನ್ಯವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, January 5, 2025, 12:15 [IST]
English summary
Tata altroz diesel variant top things you should know
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+