Tata: ಸದ್ದಿಲ್ಲದೇ ಟಾಟಾದ ಹೊಸ ಕಾರಿನ ಪರೀಕ್ಷೆ.. ಶೀಘ್ರ ಬಿಡುಗಡೆ, ಬೆಲೆಯೂ ಅಗ್ಗವೇ?
ಟಾಟಾ ಆಲ್ಟ್ರೋಜ್ (Tata Altroz) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಇದು ಹೆಚ್ಚು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಆದರೂ ಈ ಕಾರಿನ ಮಾರಾಟ ಮಾತ್ರ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ ತಿಂಗಳು (ಮಾರ್ಚ್-2025) 1,658 ಯುನಿಟ್ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ 5,985 ಯುನಿಟ್‌ಗಳನ್ನು ಮಾರಲಾಗಿತ್ತು. ಅದಕ್ಕೆ ಹೋಲಿಸಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡ -72% ಇಳಿಕೆಯಾಗಿದೆ.
ಟಾಟಾ ಮೋಟಾರ್ಸ್ 'ಆಲ್ಟ್ರೋಜ್' ಮಾರಾಟ ಸಂಖ್ಯೆಯನ್ನು ಮತ್ತೆ ಸಹಬದಿಗೆ ತರಲು ಮುಂದಾಗಿದೆ. ಅದಕ್ಕಾಗಿ ಸದ್ದಿಲ್ಲದೇ ಈ ಕಾರಿನ ಫೇಸ್‌ಲಿಫ್ಟ್ ಮಾಡೆಲ್‌ನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ, ಒಂದೆರೆಡು ಬಾರಿ ನೂತನ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಪರೀಕ್ಷಾರ್ಥ ಸಂಚಾರ ನಡೆಸುವಾಗಲೂ ಕಾಣಿಸಿಕೊಂಡಿದೆ.

ಸದ್ಯ, ಸಿಎನ್‌ಜಿ ಚಾಲಿತ ಮಾಡೆಲ್ ಎನ್ನಲಾದ 'ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್' ಕಾರು ಪ್ರಾಯೋಗಿಕ ಓಡಾಟದ ವೇಳೆಯಲ್ಲಿ ಕ್ಯಾಮೆರಾ ಕಣ್ಣಿಗೂ ಸೆರೆ ಸಿಕ್ಕಿದೆ. ಆ ಸ್ಪೈ ಫೋಟೋಗಳು ಆನ್‌ಲೈನ್‌ನಲ್ಲಿ ಕೂಡ ಸೋರಿಕೆಯಾಗಿವೆ. ಈ ಕಾರಿನ ವಿನ್ಯಾಸದಲ್ಲಿಯೂ ಕೆಲವೊಂದು ಪ್ರಮುಖವಾದ ಬದಲಾವಣೆಗಳನ್ನು ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದು ಹೊಸದಾಗಿರುವ ಗ್ರಿಲ್, ಮರುವಿನ್ಯಾಸಗೊಳಿಸಲಾದ ಬಂಪರ್, ಆಕರ್ಷಕವಾದ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಫಾಗ್ ಲ್ಯಾಂಪ್‌ಗಳು ಹಾಗೂ ಟೈಲ್ ಲ್ಯಾಂಪ್‌ನ್ನು ಹೊಂದಿರುವುದು ಬಹುತೇಕ ಖಚಿತವಾಗಿದೆ.
ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಪಡೆದಿರುವ ಸಾಧ್ಯತೆಯೂ ಹೆಚ್ಚಿದೆ. ಬಹುಮುಖ್ಯವಾಗಿ ನೆಕ್ಸಾನ್ ಕಾರಿನಂತೆಯೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್-ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕ್ರೂಸ್ ಕಂಟ್ರೋಲ್ & 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

ಈ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರಿನ ಕಾರ್ಯಕ್ಷಮತೆಯಲ್ಲಿಯೂ ಯಾವುದೇ ಬದಲಾವಣೆಗಳನ್ನು ಮಾಡಲಾಗಿರುವುದಿಲ್ಲ ಎನ್ನಲಾಗಿದೆ. ಇದು ಸಿಎನ್‌ಜಿ ಎಂಜಿನ್‌ನೊಂದಿಗೆ 1.2-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.2-ಲೀ. ಟರ್ಬೊ-ಪೆಟ್ರೋಲ್ ಹಾಗೂ 1.5-ಲೀ. ಡೀಸೆಲ್ ಪವರ್‌ಟ್ರೇನ್‌ನೊಂದಿಗೂ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಜೊತೆಗೆ ಗರಿಷ್ಠ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಖರೀದಿಗೆ ದೊರೆಯುವ ಟಾಟಾ ಆಲ್ಟ್ರೋಜ್ ವಿಶೇಷತೆಗಳೇನು: ಈ ಹ್ಯಾಚ್‌ಬ್ಯಾಕ್, ರೂ.6.65 ಲಕ್ಷದಿಂದ ರೂ.11.30 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಪೆಟ್ರೋಲ್/ಡೀಸೆಲ್/ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 19.33 ರಿಂದ 26.20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು.

ಟಾಟಾ ಆಲ್ಟ್ರೋಜ್ ರೇಸರ್ ಕೂಡ ಲಭ್ಯ: ಇದು ರೂ.9.50 ಲಕ್ಷದಿಂದ ರೂ.11 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀ. ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಇನ್ನು, ಎಲ್ಲವು ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಹೊಚ್ಚ ಹೊಸ 'ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್' ಕಾರು ಅದ್ದೂರಿಯಾಗಿಯೂ ಬಿಡುಗಡೆಯಾಗಲಿದೆ. ನೂತನ ಹ್ಯಾಚ್‌ಬ್ಯಾಕ್ ಅತ್ಯಂತ ಕಡಿಮೆ ಬೆಲೆಯಲ್ಲಿ ಸಹ ಖರೀದಿಗೆ ದೊರೆಯುವ ನೀರಿಕ್ಷೆಯಿದ್ದು, ಈಗಿರುವ ಮಾಡೆಲ್‌ನಂತೆಯೇ ಸುಮಾರು ರೂ.6 ಲಕ್ಷ ಆರಂಭಿಕ ಬೆಲೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: Team BHP


Click it and Unblock the Notifications