Tata: ಟಾಟಾ ಅಭಿಮಾನಿಗಳೇ ಸಜ್ಜಾಗಿ.... ಇದೇ ಮೇ 22 ರಂದು ಹೊಸ ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಬಿಡುಗಡೆ!

ಟಾಟಾ ಮೋಟಾರ್ಸ್ (Tata Motors) ತನ್ನ ಮುಂಬರಲಿರುವ 2025ರ ಹೊಸ ಫೇಸ್‌ಲಿಫ್ಟ್ ಆಲ್ಟ್ರೋಜ್ ಬಿಡುಗಡೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೂಲಗಳ ಪ್ರಕಾರ ಇದು ಕೆಲ ವಿನ್ಯಾಸ ಬದಲಾವಣೆಗಳು ಹಾಗೂ ಹೊಸ ಫೀಚರ್ಸ್‌ಗಳ ಜೋಡಣೆ ಸೇರಿದಂತೆ ಇಂಟೀರಿಯರ್‌ನಲ್ಲಿ ಹೊಸ ಬದಲಾವಣೆಗಳು ಇರಲಿವೆ. ಕಂಪನಿಯ ಹೇಳಿಕೊಂಡಿರುವಂತೆ ಈ ಹೊಸ ಫೇಸ್‌ಲಿಫ್ಟ್ ಆವೃತ್ತಿಯನ್ನು ಇದೇ ತಿಂಗಳ 22 ರಂದು ಬಿಡುಗಡೆ ಮಾಡಲಾಗುವುದು. ಇದೀಗ ಬಿಡುಗಡೆಗೂ ಮುನ್ನ ಕಾರು ಹೇಗಿರಲಿದೆ ಎಂದು ತೋರಿಸುವ ಸಣ್ಣ ಟೀಸರ್ ಅನ್ನು ಟಾಟಾ ಹೊರಬಿಟ್ಟಿದೆ.

ಟಾಟಾ ಮೋಟಾರ್ಸ್ ಈ ಸಣ್ಣ ಹ್ಯಾಚ್‌ಬ್ಯಾಕ್ ಅನ್ನು ಜನವರಿ 2020 ರಲ್ಲಿ ಮಾರಾಟಕ್ಕೆ ತಂದಾಗಿನಿಂದ ಯಾವುದೇ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿರಲಿಲ್ಲ. ಪ್ರಸ್ತುತ ಹೊಸ ಫೀಚರ್ಸ್‌ನೊಂದಿಗೆ ಪ್ರತಿಸ್ಪರ್ಧಿ ಕಾರುಗಳು ಮುನ್ನುಗ್ಗುತ್ತಿರುವ ಕಾರಣ ಟಾಟಾ ಈಗ ತನ್ನ ಪುಟ್ಟ ಹ್ಯಾಚ್‌ಬ್ಯಾಕ್ ಅನ್ನು ನವೀಕರಿಸಿದ ವಿನ್ಯಾಸ, ಒಳಭಾಗದಲ್ಲಿ ಹೊಸ ವೈಶಿಷ್ಟ್ಯಗಳು ಹಾಗೂ ಯಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಮಾಡದೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

tata-altroz-facelift-new-teaser-out-launch-on-may-22

ಬಿಡುಗಡೆಯಾದ ನಂತರ, ನವೀಕರಿಸಿದ ಆಲ್ಟ್ರೊಜ್ ಟೊಯೊಟಾ ಗ್ಲಾಂಝಾ ಮತ್ತು ಹ್ಯುಂಡೈ ಐ 20, ಮಾರುತಿ ಸುಜುಕಿ ಬಲೆನೊಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ. ಆಲ್ಟ್ರೊಜ್ ಪ್ರಸ್ತುತ ಮಾಸಿಕ ಸರಾಸರಿ 2,000 ಯುನಿಟ್ ಕಾರುಗಳ ಮಾರಾಟವನ್ನು ಹೊಂದಿದೆ. ಇದು ಕಂಪನಿ ನಿರೀಕ್ಷಿಸಿದ ಮಾರಾಟಕ್ಕಿಂತ ತೀರಾ ಕಡಿಮೆಯಾಗಿದ್ದು, ಮುಂಬರುವ ಫೇಸ್ ಲಿಫ್ಟ್ ಕಾರು ಮಾರಾಟಕ್ಕೆ ಪ್ರಚೋದನೆ ನೀಡಬಹುದು ಎನ್ನಲಾಗಿದೆ.

ಬೊಂಬಾಟ್ ಟೀಸರ್: ಮುಂಬರಲಿರುವ 2025ರ ಹೊಸ ಫೇಸ್‌ಲಿಫ್ಟ್ ಆಲ್ಟ್ರೋಜ್ ಕುರಿತ ವೀಡಿಯೊದಲ್ಲಿ ಈಗ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್‌ಗಳೊಂದಿಗೆ ಸ್ಪ್ಲಿಟ್ ಸಿಸ್ಟಮ್ ನೀಡಲಾಗಿದೆ. ಹೊಸ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ನೊಂದಿಗೆ ಬರಲಿದೆ ಎಂಬುದನ್ನು ತೋರಿಸಲಾಗಿದ್ದು, ಹೊಸ ಗ್ರಿಲ್ ವಿನ್ಯಾಸವನ್ನೂ ನೀಡಲಾಗಿದೆ. ಹಿಂಭಾಗದಲ್ಲಿ, ಆಲ್ಟ್ರೊಜ್ ಟಿ ಮೋಟಿಫ್ ನೊಂದಿಗೆ ಹೊಸ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ನೀಡಲಾಗಿದೆ.

tata-altroz-facelift-new-teaser-out-launch-on-may-22

ಹಿಂಭಾಗದ ಬಂಪರ್ ಡ್ಯುಯಲ್-ಟೋನ್ ಫಿನಿಶ್ ನೊಂದಿಗೆ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ. ಹೊಸ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಹೊಸ ಇವಿ-ರೀತಿಯ ವಿನ್ಯಾಸವನ್ನು ಹೊಂದಿರುವ ಅಲಾಯ್ ವೀಲ್‌ಗಳನ್ನು ಈ ವಿಡಿಯೋದಲ್ಲಿ ನೋಡಬಹುದು. ಟಾಟಾ ಕಂಪನಿಯು ಕಾರಿನ ಇಂಟೀರಿಯರ್ ಬಗ್ಗೆ ಯಾವುದೇ ಮಾಹಿತಿ ಹೊರಬಿಟ್ಟಿಲ್ಲ. ಆದರೂ ನಮಗಿರುವ ಮಾಹಿತಿಯ ಪ್ರಕಾರ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಮ್ಮ ಪ್ರಕಾರ ಪ್ರಸ್ತುತ ಟಾಟಾ ಆಲ್ಟ್ರೋಜ್ ರೇಸರ್ ವೇರಿಯೆಂಟ್‌ನ ಇಂಟೀರಿಯರ್‌ನಲ್ಲಿ ಮಾತ್ರ ಲಭ್ಯವಿರುವ ದೊಡ್ಡ 10.25-ಇಂಚಿನ ಟಚ್ ಸ್ಕ್ರೀನ್ ಅನ್ನು ಈಗ ಮುಂಬರಲಿರುವ 2025ರ ಹೊಸ ಫೇಸ್‌ಲಿಫ್ಟ್ ಆಲ್ಟ್ರೋಜ್‌ನ ಟಾಪ್ ವೇರಿಯೆಂಟ್‌ಗಳಲ್ಲಿ ಲಭ್ಯವಾಗಲಿದೆ. ಇದು ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯುವ ಸಾಧ್ಯತೆ ಇದೆ.

tata-altroz-facelift-new-teaser-out-launch-on-may-22

ಎಂಜಿನ್ ಆಯ್ಕೆ: ಆಲ್ಟ್ರೊಜ್ ಪ್ರಸ್ತುತ ಐದು ಪವರ್ ಟ್ರೇನ್ ಆಯ್ಕೆಗಳೊಂದಿಗೆ ಮಾರಾಟವಾಗುತ್ತಿದೆ. 1.2 - ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5 - ಸ್ಪೀಡ್ ಮ್ಯಾನುವಲ್ ಮತ್ತು 6 - ಸ್ಪೀಡ್ ಡ್ಯುಯಲ್-ಕ್ಲಚ್ ಆಟೋ ಗೇರ್ ಬಾಕ್ಸ್ ನೊಂದಿಗೆ ನೀಡಲಾಗುತ್ತದೆ. 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೂ ಲಭ್ಯವಿದೆ. ಇದು ಸಿಎನ್‌ಜಿ ಮತ್ತು ಡೀಸೆಲ್ ಚಾಲಿತ ಆಲ್ಟ್ರೊಜ್ 5-ಸ್ಪೀಡ್ ಮ್ಯಾನುವಲ್ ನೊಂದಿಗೆ ಮಾತ್ರ ಬರುತ್ತದೆ.

ಮುಂಬರಲಿರುವ ಟಾಟಾ ಆಲ್ಟ್ರೋಜ್ 2025ರ ಕಾರಿನಲ್ಲಿ ಯಾವುದೇ ಎಂಜಿನ್ ಬದಲಾವಣೆಗಳು ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಎಂಜಿನ್ ಬದಲಾವಣೆಗಳು ಇದ್ದಲ್ಲಿ ಕಂಪನಿಯು ಬಿಡುಗಡೆ ಸಮಯದಲ್ಲಿ ಪರಿಚಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ ಈ ಸಣ್ಣ ಹ್ಯಾಚ್‌ಬ್ಯಾಕ್‌ಗೆ ಉತ್ತಮ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, May 5, 2025, 13:24 [IST]
English summary
Tata altroz facelift new teaser out launch on may 22
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+