TATA: ಟಾಟಾದಿಂದ 1.85 ಲಕ್ಷವರೆಗೆ ರಿಯಾಯಿತಿ ಘೋಷಣೆ.. 4.57 ಲಕ್ಷಕ್ಕೆ ಹೊಸ ಕಾರು!
ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಹೊರಹೊಮ್ಮಿದೆ. ಟಿಯಾಗೊ, ಟಿಗೂರ್, ಆಲ್ಟ್ರೋಜ್, ಪಂಚ್, ನೆಕ್ಸಾನ್, ಕರ್ವ್, ಹ್ಯಾರಿಯರ್ ಹಾಗೂ ಸಫಾರಿ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳನ್ನು ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಸದ್ಯ ಕಂಪನಿಯು ಮತ್ತಷ್ಟು ಜನರಿಗೆ ಹತ್ತಿರವಾಗಲು ಬಯಸಿದೆ. ಅದಕ್ಕಾಗಿ ಈ ಡಿಸೆಂಬರ್‌ನಲ್ಲಿ ಎಲ್ಲ ಕಾರುಗಳ ಖರೀದಿ ಮೇಲೆ ದೊಡ್ಡ ಮಟ್ಟದಲ್ಲಿ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಿದೆ.
ಟಾಟಾ ಟಿಯಾಗೊ:
ಇದೊಂದು ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಈ ಕಾರಿನ 2024ರ ಮಾಡೆಲ್‌ಗಳು ರೂ.55,000 ವರೆಗೆ ರಿಯಾಯಿತಿ ಹೊಂದಿವೆ. 2025ರ ಮಾಡೆಲ್‌ಗಳು ರೂ.35,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಪಡೆದಿವೆ. ಹೊಸ 'ಟಿಯಾಗೊ' ರೂ.4.57 ಲಕ್ಷದಿಂದ ರೂ.7.82 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ.

ಟಾಟಾ ಟಿಗೂರ್:
ಈ ಸೆಡಾನ್‌ನ್ನು ದುಡಿಯುವ ವರ್ಗದರು ಮೆಚ್ಚಿಕೊಂಡಿದ್ದಾರೆ. ಇದರ 2024ರ ಮಾಡೆಲ್‌ಗಳು ರೂ.55,000 ವರೆಗೆ ರಿಯಾಯಿತಿ ಪಡೆದಿವೆ. 2025ರ ಮಾಡೆಲ್‌ಗಳು ರೂ.35,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಒಳಗೊಂಡಿವೆ. ಹೊಸ 'ಟಿಗೂರ್' ರೂ.5.49 ಲಕ್ಷದಿಂದ ರೂ.8.74 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.
ಟಾಟಾ ಆಲ್ಟ್ರೋಜ್:
ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರಿನ 2024ರ ಮಾಡೆಲ್‌ಗಳು ರೂ.1.50 ಲಕ್ಷದಿಂದ ರೂ.1.85 ಲಕ್ಷವರೆಗೆ ರಿಯಾಯಿತಿ ಪಡೆದಿವೆ. 2025ರ ಮಾಡೆಲ್‌ಗಳು ರೂ.25,000 ರಿಂದ 85,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಹೊಂದಿವೆ. ನೂತನ 'ಆಲ್ಟ್ರೋಜ್' ರೂ.6.30 ಲಕ್ಷದಿಂದ ರೂ.10.51 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.

ಟಾಟಾ ಪಂಚ್:
ಈ ಮೈಕ್ರೋ ಎಸ್‌ಯುವಿ ಮಾಧ್ಯಮ ವರ್ಗದ ಜನರ ನೆಚ್ಚಿನ ಕಾರಾಗಿದೆ. ಇದರ 2024ರ ಮಾಡೆಲ್‌ಗಳು ರೂ.75,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಹೊಂದಿವೆ. 2025ರ ಮಾಡೆಲ್‌ಗಳು, ರೂ.50,000 ವರೆಗೆ ರಿಯಾಯಿತಿ ಪಡೆದಿವೆ. ಹೊಸ 'ಪಂಚ್' ರೂ.5.50 ಲಕ್ಷದಿಂದ ರೂ.9.30 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.
ಟಾಟಾ ನೆಕ್ಸಾನ್:
ಇದೊಂದು ವಿಶ್ವಾಸಾರ್ಹ ಎಸ್‌ಯುವಿಯಾಗಿದ್ದು, ಮಾರಾಟದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈ ಕಾರಿನ 2024ರ ಮಾಡೆಲ್‌ಗಳು ರೂ.50,000 ವರೆಗೆ ರಿಯಾಯಿತಿ ಹೊಂದಿವೆ. 2025ರ ಮಾಡೆಲ್‌ಗಳು ಸಹ ರೂ.50,000 ವರೆಗೆ ಹಣಕಾಸಿನ ಪ್ರಯೋಜನಗಳನ್ನು ಒಳಗೊಂಡಿವೆ. ನೂತನ 'ನೆಕ್ಸಾನ್' ರೂ.7.32 ಲಕ್ಷದಿಂದ ರೂ.14.15 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ಟಾಟಾ ಕರ್ವ್:
ಈ ಕೂಪೆ ಎಸ್‌ಯುವಿಯನ್ನು ಖರೀದಿದಾರರು ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಇದರ 2024ರ ಮಾಡೆಲ್‌ಗಳು ರೂ.50,000 ವರೆಗೆ ಹಣಕಾಸು ಪ್ರಯೋಜನಗಳನ್ನು ಒಳಗೊಂಡಿವೆ. 2025ರ ಮಾಡೆಲ್‌ಗಳು, ರೂ.40,000 ವರೆಗೆ ರಿಯಾಯಿತಿ ಪಡೆದಿವೆ. ಹೊಸ 'ಕರ್ವ್' ರೂ.9.66 ಲಕ್ಷದಿಂದ ರೂ.18.85 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.
ಟಾಟಾ ಹ್ಯಾರಿಯರ್:
ಇದು ಬೃಹತ್ ಗಾತ್ರದ ಎಸ್‌ಯುವಿಯಾಗಿದೆ. ಈ ಕಾರಿನ 2024ರ ಮಾಡೆಲ್‌ಗಳು, ರೂ.1 ಲಕ್ಷವರೆಗೆ ರಿಯಾಯಿತಿ ಪಡೆದಿವೆ. 2025ರ ಮಾಡೆಲ್‌ಗಳು, ರೂ.75,000 ವರೆಗೆ ಹಣಕಾಸು ಪ್ರಯೋಜನಗಳನ್ನು ಹೊಂದಿವೆ. ನೂತನ 'ಹ್ಯಾರಿಯರ್' ರೂ.14 ಲಕ್ಷದಿಂದ ರೂ.25.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ.

ಟಾಟಾ ಸಫಾರಿ:
ಈ ಫ್ಯಾಮಿಲಿ ಎಸ್‌ಯುವಿಯನ್ನು ಮೇಲ್ಮಧ್ಯಮ ಹಾಗೂ ಶ್ರೀಮಂತ ವರ್ಗದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡುಕೊಳ್ಳುತ್ತಿದ್ದಾರೆ. ಇದರ 2024ರ ಮಾಡೆಲ್‌ಗಳು, ರೂ.1 ಲಕ್ಷವರೆಗೆ ಹಣಕಾಸು ಪ್ರಯೋಜನಗಳನ್ನು ಒಳಗೊಂಡಿವೆ. 2025ರ ಮಾಡೆಲ್‌ಗಳು, ರೂ.75,000 ವರೆಗೆ ರಿಯಾಯಿತಿ ಹೊಂದಿವೆ. ಹೊಸ 'ಸಫಾರಿ' ರೂ.15.50 ಲಕ್ಷದಿಂದ ರೂ.27.44 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿದಾರರಿಗೆ ಸಿಗುತ್ತದೆ.
ನಿಮ್ಮ ಗಮನಕ್ಕೆ.. ಈ ಹಣಕಾಸಿನ ಪ್ರಯೋಜನಗಳಲ್ಲಿ ಗ್ರಾಹಕ ರಿಯಾಯಿತಿ, ವಿನಿಮಯ ಬೋನಸ್ ಹಾಗೂ ಲಾಯಲ್ಟಿ ಬೋನಸ್‌ಗಳು ಸೇರಿವೆ. ವಿಶೇಷವಾಗಿ ರಿಯಾಯಿತಿಯೂ ಡಿಸೆಂಬರ್ 31 ವರೆಗೆ ಮಾತ್ರ ಮಾನ್ಯವಾಗಿರಲಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








