Tata: ಟಾಟಾದಿಂದ ಹೊಸ ದರ ಪಟ್ಟಿ ಘೋಷಣೆ.. ರೂ.4.57 ಲಕ್ಷಕ್ಕೆ ಹೊಸ ಕಾರು ಲಭ್ಯ, ಯಾವುದಕ್ಕೆ ಎಷ್ಟು?
ನಿನ್ನೆಯಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೆ ಬಂದಿವೆ. ಇದರ ಸಂಪೂರ್ಣ ಲಾಭವನ್ನು ಟಾಟಾ ಮೋಟಾರ್ಸ್ (Tata Motors), ತನ್ನ ಗ್ರಾಹಕರಿಗೆ ವರ್ಗಾಯಿಸುತ್ತಿದೆ. ಕಂಪನಿಯ ವಿವಿಧ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳ ಬೆಲೆಯು ರೂ.65,000 ರಿಂದ ರೂ.1.55 ಲಕ್ಷವರೆಗೆ ಇಳಿಕೆಯಾಗಿದೆ. ಬನ್ನಿ, ಯಾವ ಕಾರಿನ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಟಾಟಾ ಟಿಯಾಗೊ:
ಇದೊಂದು ಹ್ಯಾಚ್‌ಬ್ಯಾಕ್ ಆಗಿದೆ. ರೂ.75,000 ವರೆಗೆ ಬೆಲೆ ಇಳಿಕೆಯಾಗಿದೆ. ಕನಿಷ್ಠ ರೂ.4.57 ಲಕ್ಷ ಹಾಗೂ ಗರಿಷ್ಠ ರೂ.8.09 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 19 ರಿಂದ 28 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಾಟಾ ಟಿಗೊರ್:
ಈ ಸೆಡಾನ್ ದರವು ರೂ.80,000 ವರೆಗೆ ಕಡಿಮೆಯಾಗಿದೆ. ರೂ.5.49 ಲಕ್ಷದಿಂದ ರೂ.8.74 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 19 ರಿಂದ 28 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ.
ಟಾಟಾ ಆಲ್ಟ್ರೋಜ್:
ಇದೊಂದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ರೂ.1.10 ಲಕ್ಷವರೆಗೆ ಬೆಲೆ ಇಳಿಮುಖವಾಗಿದೆ. ಕನಿಷ್ಠ ರೂ.6.30 ಲಕ್ಷ ಮತ್ತು ಗರಿಷ್ಠ ರೂ.10.51 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.2-ಲೀಟರ್ ಸಿಎನ್‌ಜಿ ಮತ್ತು 1.5-ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 19 ರಿಂದ 26.2 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಪಡೆದಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
| ಕಾರಿನ ಹೆಸರು | ಹೊಸ ಎಕ್ಸ್-ಶೋರೂಂ ದರ ಎಷ್ಟಿದೆ? |
| ಟಿಯಾಗೊ | ರೂ.4.57 ಲಕ್ಷದಿಂದ ರೂ.8.09 ಲಕ್ಷ |
| ಟಿಗೊರ್ | ರೂ.5.49 ಲಕ್ಷದಿಂದ ರೂ.8.74 ಲಕ್ಷ |
| ಆಲ್ಟ್ರೋಜ್ | ರೂ.6.30 ಲಕ್ಷದಿಂದ ರೂ.10.51 ಲಕ್ಷ |
| ಪಂಚ್ | ರೂ.5.50 ಲಕ್ಷದಿಂದ ರೂ.9.30 ಲಕ್ಷ |
| ನೆಕ್ಸಾನ್ | ರೂ.7.32 ಲಕ್ಷದಿಂದ ರೂ.14.50 ಲಕ್ಷ |
| ಕರ್ವ್ | ರೂ.9.66 ಲಕ್ಷದಿಂದ ರೂ.19.52 ಲಕ್ಷ |
| ಹ್ಯಾರಿಯರ್ | ರೂ.14 ಲಕ್ಷದಿಂದ ರೂ.25.25 ಲಕ್ಷ |
| ಸಫಾರಿ | ರೂ.14.66 ಲಕ್ಷದಿಂದ ರೂ.25.96 ಲಕ್ಷ |
ಟಾಟಾ ಪಂಚ್:
ಈ ಮೈಕ್ರೋ ಎಸ್‌ಯುವಿ ದರವು ರೂ.85,000 ವರೆಗೆ ಕಡಿಮೆಯಾಗಿದೆ. ರೂ.5.50 ಲಕ್ಷದಿಂದ ರೂ.9.30 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 18 ರಿಂದ 26.99 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 5 ಆಯ್ಕೆ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿದೆ.

ಟಾಟಾ ನೆಕ್ಸಾನ್:
ಇದು ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ರೂ.1.55 ಲಕ್ಷವರೆಗೆ ಬೆಲೆ ಇಳಿಕೆಯಾಗಿದೆ. ಕನಿಷ್ಠ ರೂ.7.32 ಲಕ್ಷ ಹಾಗೂ ಗರಿಷ್ಠ ರೂ.14.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ಡೀಸೆಲ್ & 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 17 ರಿಂದ 24 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸಗಳನ್ನು ಒಳಗೊಂಡಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಕರ್ವ್:
ಈ ಕೂಪೆ ಎಸ್‌ಯುವಿಯ ದರವು ರೂ.65,000 ವರೆಗೆ ಕಡಿಮೆಯಾಗಿದೆ. ರೂ.9.66 ಲಕ್ಷದಿಂದ ರೂ.19.52 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಜಿಡಿಐ ಟರ್ಬೊ ಪೆಟ್ರೋಲ್ ಮತ್ತು 1.5 ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದೆ. 11 ರಿಂದ 15 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 5 ಆಸಗಳನ್ನು ಪಡೆದಿದೆ.
ಟಾಟಾ ಹ್ಯಾರಿಯರ್ & ಸಫಾರಿ:
ಹೊಸ ಹ್ಯಾರಿಯರ್ ಬೆಲೆ ರೂ.1.40 ಲಕ್ಷವರೆಗೆ ಇಳಿಕೆಯಾಗಿದೆ. ಕನಿಷ್ಠ ರೂ.14 ಲಕ್ಷ ಮತ್ತು ಗರಿಷ್ಠ ರೂ.25.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅದೇ ರೀತಿಯಲ್ಲಿ ಸಫಾರಿ ಬೆಲೆಯು ರೂ.1.45 ಲಕ್ಷವರೆಗೆ ಕಡಿಮೆಯಾಗಿದೆ. ರೂ.14.66 ಲಕ್ಷದಿಂದ ರೂ.25.96 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ.


Click it and Unblock the Notifications








