ಸೇಫ್ಟಿಯಲ್ಲಿ ಟಾಟಾಗಿಲ್ಲ ಸಾಟಿ: ಕರ್ವ್‌ಗೆ 5-ಸ್ಟಾರ್... ಎದುರಾಳಿ ಸಿಟ್ರನ್ ಬಸಾಲ್ಟ್ ಫಲಿತಾಂಶಕ್ಕೆ ಶಾಕ್!

ಭಾರತೀಯ ಕಾರು ಉದ್ಯಮದಲ್ಲಿ ಸುರಕ್ಷಿತ ಕಾರುಗಳಿಗೆ ಜನಪ್ರಿಯತೆ ಪಡೆದಿರುವ ಟಾಟಾ ಮೋಟಾರ್ಸ್, ಕಳೆದ ವರ್ಷ ಕರ್ವ್ ಎಂಬ ಎಸ್‌ಯುವಿ ಕೂಪೆಯನ್ನು ಪರಿಚಯಿಸಿತ್ತು. ಇದಕ್ಕೆ ಎದುರಾಳಿಯಾಗಿ ಸಿಟ್ರನ್ ಬಸಾಲ್ಟ್ ಎಂಟ್ರಿಕೊಟ್ಟು ಎಸ್‌ಯುವಿ ಕೂಪೆ ವಿಭಾಗದಲ್ಲಿ ಪೈಪೋಟಿ ಹೆಚ್ಚಿಸಿತ್ತು. ಎರಡೂ ಕಾರುಗಳು ಬೆಲೆಗೆ ತಕ್ಕಂತೆ ಉತ್ತಮ ಫೀಚರ್ಸ್ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿವೆ. ಆದ್ರೆ ಕಾರುಗಳ ಸುರಕ್ಷತೆ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುವುದರಿಂದ, ಎರಡರಲ್ಲಿ ಯಾವ ಕಾರು ಸುರಕ್ಷಿತವಾಗಿದೆ ಎಂಬುದನ್ನು ಇಲ್ಲಿ ನೋಡೋಣ.

ಬೆಲೆ: ಟಾಟಾ ಕರ್ವ್ ಎಸ್‌ಯುವಿ ಕೂಪೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ ಆಯ್ಕೆಗಳಿದ್ದು, ಡೀಸೆಲ್ ಎಂಜಿನ್ 11.50 ಲಕ್ಷದಿಂದ 19 ಲಕ್ಷ ರೂ. (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ)ವರೆಗೆ ಇದೆ. ಪೆಟ್ರೋಲ್ ಎಂಜಿನ್ ಬೆಲೆಗಳು 10 ಲಕ್ಷದಿಂದ 19 ಲಕ್ಷ ರೂ. (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ)ವರೆಗೆ ಇದೆ.

tata-curvv-vs-citroen-basalt-safety-rating-details

ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆ, ರೂ.7.99 ಲಕ್ಷದಿಂದ ರೂ.13.83 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಇದು ಬಸಾಲ್ಟ್ 1.2ಪಿಯು, ಬಸಾಲ್ಟ್ ಪ್ಲಸ್, ಬಸಾಲ್ಟ್ ಟರ್ಬೊ ಪ್ಲಸ್, ಬಸಾಲ್ಟ್ ಟರ್ಬೊ ಎಟಿ ಪ್ಲಸ್ ಹಾಗೂ ಬಸಾಲ್ಟ್ ಟರ್ಬೊ ಮ್ಯಾಕ್ಸ್ ಸೇರಿದಂತೆ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ.

ಸುರಕ್ಷತೆ: ವಾಹನ ಸುರಕ್ಷತಾ ತಪಾಸಣೆ ಸಂಸ್ಥೆ 'ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ' (ಭಾರತ್ ಎನ್‌ಸಿಎಪಿ) ಪರೀಕ್ಷೆಗೆ ಎರಡೂ ಕಾರುಗಳನ್ನು ಒಳಪಡಿಸಲಾಗಿದ್ದು, 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಪಡೆದುಕೊಂಡಿದೆ. ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.5 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43.66 ಅಂಕಗಳನ್ನು ಗಳಿಸಿದೆ.

tata-curvv-vs-citroen-basalt-safety-rating-details

ಅಪಘಾತದ ಸಮಯದಲ್ಲಿ ಮುಂಭಾಗದ ಪ್ರಯಾಣಿಕರು (ಡಮ್ಮಿ) ಸುರಕ್ಷಿತವಾಗಿದ್ದರೆ, ಚಾಲಕನ ಬಲಗಾಲು ಕನಿಷ್ಠ ರಕ್ಷಣೆಯನ್ನು ಪಡೆದುಕೊಂಡಿದೆ. ಮಕ್ಕಳ ರಕ್ಷಣೆಯಲ್ಲಿ ಟಾಟಾ ಕರ್ವ್ ಎಸ್‍ಯುವಿಯು ಉತ್ತಮ ಪರ್ಫಾಮೆನ್ಸ್ ನೀಡಿದೆ. ಕರ್ವ್ ಎಸ್‌ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಸ್ತ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್ ಮತ್ತು TPMS ಜೊತೆಗೆ ಬರುತ್ತದೆ.

ಟಾಟಾ ಕರ್ವ್ ಎಸ್‍ಯುವಿಯ ಟಾಪ್ ಎಂಡ್ ರೂಪಾಂತರಗಳಲ್ಲಿ 360-ಡಿಗ್ರಿ ಕ್ಯಾಮೆರಾ, ಲೆವೆಲ್ 2 ADAS, ಎಲ್ಲಾ ಡಿಸ್ಕ್ ಬ್ರೇಕ್‌ಗಳು ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಪಡೆದಿದೆ. ಈ ಎಲ್ಲಾ ಸೇಫ್ಟಿ ಫೀಚರ್‌ಗಳೊಂದಿಗೆ ಕರ್ವ್ ಎಸ್‌ಯುವಿ ಹೆಚ್ಚಿನ ಸುರಕ್ಷತೆಯೊಂದಿಗೆ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಗಳಿಸಿದೆ.

ಸಿಟ್ರನ್ ಬಸಾಲ್ಟ್: ಈ ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆಯಲ್ಲಿ ಪ್ರಮುಖವಾಗಿ 6 - ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಗಳಂತಹ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಯಸ್ಕರ ರಕ್ಷಣೆ ವಿಭಾಗದಲ್ಲಿ 32 ಅಂಕಗಳಿಗೆ 26.19 ಅಂಕಗಳು ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ 49 ಅಂಕಗಳಿಗೆ 35.90 ಅಂಕಗಳನ್ನು ಗಳಿಸಿದೆ. ಈ ಮೂಲಕ 4-ಸ್ಟಾರ್ ಸೇಫ್ಟಿ ರೇಟಿಂಗ್‌ ಪಡೆದಿದೆ. ಪ್ರಯಾಣಿಕರ (ಡಮ್ಮಿ) ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಈ ಕಾರಿನಲ್ಲಿದ್ದ ಸುರಕ್ಷತಾ ವೈಶಿಷ್ಟ್ಯಗಳು ಹೆಚ್ಚಿನ ರಕ್ಷಣೆ ಒದಗಿಸಿವೆ. ಆದರೆ, ಎದೆ ಹಾಗೂ ಕಾಲಿನ ಭಾಗಕ್ಕೆ ಹೆಚ್ಚಿನ ರಕ್ಷಣೆ ನೀಡಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ.

Article Published On: Wednesday, January 8, 2025, 12:42 [IST]
English summary
Tata curvv vs citroen basalt safety rating details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+