5-ಸೀಟರ್.. 627 Km ಓಡುತ್ತೆ, ಬಲಿಷ್ಠ ಟಾಟಾ ಹ್ಯಾರಿಯರ್ ಇವಿಗಾಗಿ ಬುಕ್ಕಿಂಗ್ ಪ್ರಾರಂಭ.. 1 ಲಕ್ಷ ಲಾಯಲ್ಟಿ ಬೋನಸ್!

ಟಾಟಾ ಹ್ಯಾರಿಯರ್ ಇವಿ (Tata Harrier EV) ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಸ್ವದೇಶಿ ನಿರ್ಮಿತ ಈ ಕಾರಿನ ಮೇಲೆ ಗ್ರಾಹಕರು ಕೂಡ ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇಂದಿನಿಂದ ದೇಶಾದ್ಯಂತ ನೂತನ 'ಹ್ಯಾರಿಯರ್ ಇವಿ'ಗಾಗಿ ಬುಕ್ಕಿಂಗ್‌ನ್ನು ಶುರು ಮಾಡಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೊಚ್ಚ ಹೊಸ ಟಾಟಾ ಹ್ಯಾರಿಯರ್ ಇವಿಯನ್ನು ಕೊಂಡುಕೊಳ್ಳಲು ಬಯಸುವ ಗ್ರಾಹಕರು, ಕಂಪನಿಯ ಅಧಿಕೃತ ವೆಬ್‌ಸೈಟ್‌ ಅಥವಾ ಹತ್ತಿರದ ಡೀಲರ್‌ಶಿಪ್‌ಗೆ ಭೇಟಿ ನೀಡಿ, ಬುಕ್ಕಿಂಗ್ ಮಾಡಬಹುದು. ಇದಕ್ಕಾಗಿ ರೂ.21,000 ಮುಂಗಡ ಹಣವನ್ನು ಪಾವತಿಸಬೇಕು. ಈ ಹ್ಯಾರಿಯರ್ ಇವಿ ಖರೀದಿ ಮೇಲೆ ರೂ.1 ಲಕ್ಷ ಲಾಯಲ್ಟಿ ಬೋನಸ್ ಸಹ ಲಭ್ಯವಾಗಲಿದೆ.

Tata Harrier EV Bookings Open Details

ಪ್ರಸ್ತುತ ದೇಶೀಯವಾಗಿ ಲಭ್ಯವಿರುವ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‌ಯುವಿ, ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ಕನಿಷ್ಠ ರೂ.21.49 ಲಕ್ಷ ಹಾಗೂ ಗರಿಷ್ಠ ರೂ.28.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅಡ್ವೆಂಚರ್, ಅಡ್ವೆಂಚರ್ ಎಸ್, ಫಿಯರ್‌ಲೆಸ್ ಪ್ಲಸ್ ಮತ್ತು ಎಂಪವರ್ಡ್ ಎಂಬ ರೂಪಾಂತರಗಳೊಂದಿಗೂ (ವೇರಿಯೆಂಟ್) ದೊರೆಯುತ್ತದೆ.

ಈ ಕಾರು ಸಾಕಷ್ಟು ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 65 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ 2 ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 538 ರಿಂದ 627 ಕಿ.ಮೀ ವರೆಗೆ ಕ್ರಮಿಸುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 6.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

Tata Harrier EV Bookings Open Details

ನೂತನ ಹ್ಯಾರಿಯರ್ ಇವಿಯ ಬ್ಯಾಟರಿ ಪ್ಯಾಕ್, 7.2 ಕೆಡಬ್ಲ್ಯೂ ಎಸಿ ಚಾರ್ಜರ್ ಬಳಕೆಯಲ್ಲಿ 10.7 ಗಂಟೆಯಲ್ಲಿ 10 ರಿಂದ 100% ಚಾರ್ಜ್ ಆಗಿ ಬಿಡುತ್ತದೆ. ಅದೇ ರೀತಿಯಲ್ಲಿ 120 ಕೆಡಬ್ಲ್ಯೂ ಡಿಸಿ ಚಾರ್ಜರ್ ಉಪಯೋಗ ಮಾಡಿದಾಗ ಕೇವಲ 25 ನಿಮಿಷಗಳಲ್ಲಿ 20 ರಿಂದ 80% ಚಾರ್ಜ್ ಆಗುತ್ತದೆ.

ಇದು ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಸ್ಟೆಲ್ತ್ ಬ್ಲ್ಯಾಕ್, ಎಂಪವರ್ಡ್ ಆಕ್ಸೈಡ್ ಹಾಗೂ ಪ್ಯೂರ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 502 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಈ ಕಾರು ಹಲವು ಉತ್ತಮವಾದ ವೈಶಿಷ್ಟ್ಯಗಳನ್ನು ಪಡೆದಿದೆ. ಬಹುಮುಖ್ಯವಾಗಿ 14.5-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿರುವ ಡಿಜಿಟಲ್ ಡ್ರೈವರ್ ಡಿಸ್‌ಪ್ಲ, ಸನ್‌ರೂಫ್, ಜೆಬಿಎಲ್ 10-ಸ್ಪೀಕರ್ ಸೌಂಡ್ ಸಿಸ್ಟಮ್, ವಿಂಡೋ ಸನ್‌ಬ್ಲೈಂಡ್‌ಗಳು, ಆಂಬಿಯೆಂಟ್ ಲೈಟಿಂಗ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿದೆ.

ಹೊಸ ಹ್ಯಾರಿಯರ್ ಇವಿ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಭಾರತ್ ಎನ್‌ಸಿಎಪಿಯು 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿದೆ. ಇದು ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಆಲ್ ವೀಲ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಒಟ್ಟಾರೆಯಾಗಿ ನೂತನ ಟಾಟಾ ಹ್ಯಾರಿಯರ್ ಇವಿಗಾಗಿ ಬುಕ್ಕಿಂಗ್ ಶುರುವಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ತಂದಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಕೆಲವೇ ದಿನಗಳಲ್ಲಿ ಈ ಕಾರಿನ ವಿತರಣೆಗಳು ಕೂಡ ಆರಂಭವಾಗಲಿದೆ. ಆ ಬಳಿಕ, ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Article Published On: Thursday, July 3, 2025, 12:57 [IST]
English summary
Tata harrier ev bookings open details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+