ಟಾಟಾದಿಂದ ಮಹತ್ವದ ಘೋಷಣೆ.. 2030ರ ವೇಳೆಗೆ 30 ಹೊಸ ಕಾರುಗಳು ಬಿಡುಗಡೆ, Sumo & Nano ಮತ್ತೆ ಬರುತ್ತಾ?
ಭಾರತದ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ (Tata Motors), ಹೊಸ ಕ್ರಾಂತಿ ಸೃಷ್ಟಿಸಲು ಅಣಿಯಾಗುತ್ತಿದೆ. ಮುಂಬರುವ 5 ವರ್ಷಗಳಲ್ಲಿ ನಂಬರ್ 1 ಕಾರು ತಯಾರಕ ಕಂಪನಿಯಾಗಿ ಹೊರ ಹೊಮ್ಮಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 2030ರ ಹಣಕಾಸು ವರ್ಷದ (FY30) ವೇಳೆಗೆ 30 ನೂತನ ಕಾರುಗಳನ್ನು ಬಿಡುಗಡೆಗೊಳಿಸಲು ಕಂಪನಿಯು ಉದ್ದೇಶಿಸಿದೆ. ಇದರಲ್ಲಿ 7 ಹೊಸ ಕಾರುಗಳಾಗಿರಲಿವೆ. ಉಳಿದ 23 ನವೀಕರಣಕ್ಕೆ ಒಳಪಟ್ಟ 'ಫೇಸ್‌ಲಿಫ್ಟ್' ರೂಪದಲ್ಲಿರುತ್ತವೆ. ಈ ಕುರಿತಂತೆ ಕಂಪನಿಯೇ ಅಧಿಕೃತವಾಗಿ ಘೋಷಣೆ ಮಾಡಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.
ಸದ್ಯ ದೇಶೀಯವಾಗಿ ಟಾಟಾ ಕಂಪನಿಯು ಪ್ರತಿ ತಿಂಗಳು ಸರಾಸರಿ 50,000 ಯುನಿಟ್‌ವರೆಗೆ ವಿವಿಧ ಕಾರುಗಳನ್ನು ಯಶಸ್ವಿಯಾಗಿಯೂ ಮಾರಾಟಗೊಳಿಸುತ್ತಿದೆ. ಅದರಲ್ಲೂ ನೆಕ್ಸಾನ್, ಪಂಚ್ ಹಾಗೂ ಕರ್ವ್ ಕಾರುಗಳು ಗೇಮ್ ಚೇಂಜರ್ ಆಗಿದ್ದು, ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ.

ವಿಶೇಷವಾಗಿ ಮುಂದಿನ 5 ವರ್ಷಗಳಲ್ಲಿ ಟಾಟಾ ಕಂಪನಿಯು ಎಲೆಕ್ಟ್ರಿಕ್, ಹೈಬ್ರಿಡ್ (ಎಲೆಕ್ಟ್ರಿಕ್+ಪೆಟ್ರೋಲ್) ಹಾಗೂ ಐಸಿಇ (ಇಂಟರ್ನಲ್ ಕಂಬ್ಯುಶನ್ ಎಂಜಿನ್) ಅಂದರೆ ಪೆಟ್ರೋಲ್/ಡಿಸೇಲ್ ಚಾಲಿತ ಆಯ್ಕೆಯಲ್ಲಿ ಹಲವು ಕಾರುಗಳನ್ನು ಮಾರಾಟಕ್ಕೆ ತರಲಿದೆ. ಇವುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿರುವ ಎಲ್ಲ ಸಾಧ್ಯತೆಗಳಿವೆ.
ಭಾರತದ ಕಾರು ಮಾರುಕಟ್ಟೆಯಲ್ಲಿ 2030ರ ಆರ್ಥಿಕ ವರ್ಷದ ವೇಳೆಗೆ ಎಸ್‌ಯುವಿಗಳಿಗೆ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಭಾರೀ ಬೇಡಿಕೆ ಬರಲಿದೆ. ಅದರ ಪ್ರಮಾಣ ಶೇಕಡ 55 ರಷ್ಟು ಅಧಿಕಗೊಳ್ಳಲಿದೆ ಎಂದು ಕಂಪನಿಯು ನಂಬಿದೆ. ಹೀಗಾಗಿ ತನ್ನ ಗಮನವನ್ನು ಎಸ್‌ಯುವಿಗಳ ಮೇಲೆ ಕೇಂದ್ರೀಕರಿಸಿದ್ದು, 2026ರೊಳಗೆ ಸಿಯೆರಾ ಹಾಗೂ ಅವಿನ್ಯಾ ಎಕ್ಸ್ ಕಾರುಗಳನ್ನು ಮಾರಾಟಕ್ಕೆ ತರಲಿದೆ.

ಇದರೊಂದಿಗೆ ಎಂಪಿವಿ (ಮಲ್ಟಿ ಪರ್ಪಸ್ ವೆಹಿಕಲ್) ವಿಭಾಗವು ಶೇಕಡ 50 ರಷ್ಟು ಬೆಳವಣಿಗೆಯಾಗಬಹುದು ಎಂದು ಕಂಪನಿಯು ಊಹಿಸಿದೆ. ಆದರೆ, ಇದರಡಿ ಯಾವ ಕಾರುಗಳನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬುದರ ಕುರಿತಂತೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಬಹುಶಃ 'ಟಾಟಾ ಸುಮೋ'ವನ್ನು ಎಂಪಿವಿ ರೂಪದಲ್ಲಿ ಪರಿಚಯಿಸಬಹುದು ಎಂದು ಹೇಳಲಾಗಿದೆ.
ಹಾಗೆಯೇ ಬಹು ಬೇಡಿಕೆಯೊಂದಿದ್ದ 'ಟಾಟಾ ನ್ಯಾನೋ' ಕಾರನ್ನು ಸಹ ಎಲೆಕ್ಟ್ರಿಕ್ ಅವತಾರದಲ್ಲಿ ಮಾರಾಟಕ್ಕೆ ತರಬಹುದು ಎನ್ನಲಾಗಿದೆ. ಈ ಕಾರು, ಜನಸಾಮ್ಯಾರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿ ದೊರೆಯಬಹದು. ಭರ್ತಿ ಚಾರ್ಜ್‌ನಲ್ಲಿ 200 ಕಿಲೋಮೀಟರ್‌ವರೆಗೂ ಓಡಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ.
ಈಚೆಗೆ ಬಿಡುಗಡೆಯಾದ ಟಾಟಾದ ಹೊಸ ಕಾರುಗಳ ವಿಶೇಷತೆಗಳೇನು..
ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್: ಇದು ರೂ.6.89 ಲಕ್ಷದಿಂದ ರೂ.11.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಈ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯನ್ನು ಒಳಗೊಂಡಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 6-ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಟಾಟಾ ಹ್ಯಾರಿಯರ್ ಇವಿ: ಈ ಎಲೆಕ್ಟ್ರಿಕ್ ಎಸ್‌ಯುವಿ ರೂ.21.49 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 65 & 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 627 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ಕೊಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications