BMTC: ಬಿಎಂಟಿಸಿಗೆ 148 ಟಾಟಾ ಎಲೆಕ್ಟ್ರಿಕ್ ಬಸ್‌ಗಳು: 200 ಕಿ.ಮೀ ರೇಂಜ್, ಹೈಟೆಕ್ ಫೀಚರ್ಸ್!

ಸಾರ್ವಜನಿಕ ಸಾರಿಗೆ ಸೇವೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ಮಾಲಿನ್ಯ ತಡೆಗಟ್ಟಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC), ಸತತವಾಗಿ 4 ವರ್ಷಗಳಿಂದ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸುತ್ತಿದೆ. ಇಲ್ಲಿಯವರೆಗೆ 1,436 ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಪ್ರತಿ ದಿನ 1,436 ಎಲೆಕ್ಟ್ರಿಕ್ ಬಸ್ಸುಗಳು ಓಡಾಡುವ ಮೂಲಕ, ಸುಮಾರು 2.07 ಲಕ್ಷ ಕೆ.ಜಿ CO2 (ಇಂಗಾಲದ ಡೈ ಆಕ್ಸೈಡ್) ಅನ್ನು ತಡೆಗಟ್ಟುವ ಜೊತೆಗೆ ಸುಮಾರು 77 ಸಾವಿರ ಲೀಟರ್‌ ಇಂಧನವನ್ನು ಉಳಿತಾಯ ಮಾಡಿರುವುದಾಗಿ ಬಿಎಂಟಿಸಿ ತಿಳಿಸಿದೆ.

ಇದೀಗ ಬಿಎಂಟಿಸಿಗೆ ಟಾಟಾ ಮೋಟಾರ್ಸ್ (Tata Motors) ನ 148 ಸಾಮಾನ್ಯ (ಹವಾನಿಯಂತ್ರಿತವಲ್ಲದ) ಎಲೆಕ್ಟ್ರಿಕ್ ಬಸ್ಸುಗಳು ಸೇರ್ಪಡೆಗೊಳ್ಳುತ್ತಿವೆ. ಈ ಎಲೆಕ್ಟ್ರಿಕ್ ಬಸ್ಸುಗಳನ್ನು ಜಿ.ಸಿ.ಸಿ ಮಾದರಿಯಲ್ಲಿ (Gross Cost Contract), ಪ್ರತಿ ಕಿ.ಮೀಗೆ ರೂ. 41.01 ರಂತೆ ವಿದ್ಯುತ್‌ ದರವು ಒಳಗೊಂಡಂತೆ 12 ವರ್ಷಗಳ ಅವಧಿಗೆ ಕಾರ್ಯಾಚರಣೆ ಮಾಡಲು ಒಪ್ಪಂದವಾಗಿದೆ.

tata-motors-delivered-148-electric-buses-to-bmtc

ನಗರ ಮತ್ತು ಭೂ ಸಾರಿಗೆ ನಿರ್ದೇಶನಾಲಯ (Directorate of Urban & Land Transport) ಹಾಗೂ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (National Clean Air Programme) ರವರಿಂದ ಪ್ರತಿ ಬಸ್ಸಿಗೆ ರೂ. 39.08 ಲಕ್ಷಗಳಂತೆ ಹಣಕಾಸಿನ ನೆರವು ಒದಗಿಸಲಾಗಿದೆ. ಸಾರಿಗೆ ಹಾಗೂ ಮುಜರಾಯಿ ಸಚಿವರು, ಇಂದು 10 ಸಾಮಾನ್ಯ (ಹವಾನಿಯಂತ್ರಿತವಲ್ಲದ) ಎಲೆಕ್ಟ್ರಿಕ್ ಬಸ್ಸುಗಳನ್ನು ಮೊದಲ ಹಂತದಲ್ಲಿ ಉಧ್ಘಾಟಿಸಿದ್ದಾರೆ.

ಬಸ್ಸುಗಳ ವೈಶಿಷ್ಟ್ಯತೆಗಳು

ಶೂನ್ಯ ಹೊರ ಸೂಸುವಿಕೆ ಹಾಗೂ ಪರಿಸರ ಸ್ನೇಹಿ ಬಸ್ಸುಗಳಾಗಿದ್ದು, 12 ಮೀಟರ್ ಉದ್ದ, ಲೋ ಫ್ಲೋರ್ (400mm) ಹೈಟ್ ಹವಾನಿಯಂತ್ರಿತವಲ್ಲದ ಇವಿ ಬಸ್ಸುಗಳಾಗಿವೆ. 298 kwh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಒಂದು ಭಾರಿ ಚಾರ್ಜ್‌ ಮಾಡಿದರೆ 200 ಕಿ.ಮೀ ಚಲಿಸುತ್ತವೆ. ಎಲ್ಲಾ 148 ಬಸ್ಸುಗಳು ಘಟಕ - 04 (ಜಯನಗರ) ರಿಂದ ಕಾರ್ಯಾಚರಣೆ ಮಾಡಲಿವೆ.

ಪ್ರತಿ ಬಸ್ಸು 35 ಪ್ರಯಾಣಿಕ ಆಸನಗಳ ಸಾಮರ್ಥ್ಯವನ್ನು ಹೊಂದಿದ್ದು, 1 ಗಾಲಿ ಕುರ್ಚಿ (wheel chair)ಗೆ ಅವಕಾಶವಿರುತ್ತದೆ. ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಬಸ್ಸಿನ ಒಳಭಾಗದಲ್ಲಿ 3 ಕ್ಯಾಮೆರಾಗಳನ್ನು ಹಾಗೂ ಚಾಲಕರಿಗೆ ಹಿಮ್ಮುಖವಾಗಿ ಚಲಿಸಲು ಅನುಕೂಲವಾಗುವಂತೆ 1 ಕ್ಯಾಮೆರಾ ಬಸ್ಸಿನ ಹಿಂಬದಿ ಅಳವಡಿಸಲಾಗಿರುತ್ತದೆ. 4 ಎಲ್.ಇ.ಡಿ ಬೋರ್ಡ್‌ ಮತ್ತು ವಾಯ್ಸ್‌ ಅನೌನ್ಸ್ ಮೆಂಟ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಮಹಿಳೆಯರ ಸುರಕ್ಷತೆಗೆ 10 ಎಮರ್ಜೆನ್ಸಿ ಪ್ಯಾನಿಕ್‌ ಅಲಾರ್ಮ್ ಬಟನ್‌ಗಳನ್ನು ಅಳವಡಿಸಲಾಗಿದೆ. ಅಗ್ನಿ ಅವಘಡಗಳನ್ನು ತಪ್ಪಿಸುವ ಸಲುವಾಗಿ "ಅಗ್ನಿ ಪತ್ತೆ ಹಾಗೂ ಎಚ್ಚರಿಕೆ ವ್ಯವಸ್ಥೆ" (FDAS-Fire Detection and Alarm System) ಒದಗಿಸಲಾಗಿದೆ. ವಾಹನಗಳ ಮೇಲೆ ನಿರಂತರವಾಗಿ ನಿಗಾಯಿಡಲು ವಾಹನದ ಸ್ಥಳ ಸೂಚಿಸುವ ವ್ಯವಸ್ಥೆಯನ್ನೂ ಒದಗಿಸಲಾಗಿದೆ.

ಹಿರಿಯ ನಾಗರೀಕರು ಹಾಗೂ ಗಾಲಿ ಕುರ್ಚಿ (Wheel chair) ಪ್ರಯಾಣಿಕರು ಸುಲಭವಾಗಿ ಮತ್ತು ಸುರಕ್ಷಿತವಾಗಿ ಬಸ್ಸಿನ ಒಳ ಬರಲು ಮತ್ತು ಹೊರ ಹೋಗಲು ಅನುಕೂಲವಾಗುವಂತೆ, ಬಸ್ಸಿನ ಎಡಭಾಗವು ಬಾಗುವ (kneeling option mechanism) ವ್ಯವಸ್ಥೆಯನ್ನು ಹೊಂದಿದೆ. ಅನಿವಾರ್ಯ ಸಂದರ್ಭಗಳಲ್ಲಿ ಪ್ರಯಾಣಿಕರು ನಿಲುಗಡೆ ಕೋರಲು ಸ್ಟಾಪ್ ಬಟನ್ ಗಳನ್ನು ಒದಗಿಸಲಾಗಿದೆ.

ಮುಂದೆ ಮತ್ತು ಮಧ್ಯದಲ್ಲಿ ಸ್ವಯಂಚಾಲಿತ ಬಾಗಿಲುಗಳನ್ನು ಒದಗಿಸಲಾಗಿದೆ. ಆರಾಮದಾಯಕ ಪ್ರಯಾಣಕ್ಕಾಗಿ ಹಿಂಬದಿಯಲ್ಲಿ ಏರ್‌ ಸಸ್ಪೆನ್ಷನ್ ವ್ಯವಸ್ಥೆಯಿದ್ದು, ವಾಹನದ ಬ್ರೇಕಿಂಗ್ ಪವರ್ ಪುನರುತ್ಪಾದಕ ವ್ಯವಸ್ಥೆಯನ್ನು ಹೊಂದಿದೆ. ಬಸ್ಸುಗಳಿಗಾಗಿ ''ಆಪರ್ಚುನಿಟಿ ಚಾರ್ಜಿಂಗ್'' (Opportunity Charging) ವ್ಯವಸ್ಥೆಯನ್ನು ಕೆಂಪೇಗೌಡ ಬಸ್‌ ನಿಲ್ದಾಣ, ಕೆ ಆರ್‌ ಮಾರ್ಕೆಟ್, ಶಿವಾಜಿನಗರ ಬಸ್‌ ನಿಲ್ದಾಣ, ಬನ್ನೇರುಘಟ್ಟ ಟಿಟಿಎಂಸಿ, ಬಿಟಿಎಂ ಬಸ್‌ ನಿಲ್ದಾಣ, ಹೆಬ್ಬಾಳ ಹಾಗೂ ಮಲ್ಲಸಂದ್ರ ಬಸ್‌ ನಿಲ್ದಾಣಗಳಲ್ಲಿ ಕಲ್ಪಿಸಲಾಗಿದೆ.

More from DriveSpark

Article Published On: Friday, July 11, 2025, 20:20 [IST]
English summary
Tata motors delivered 148 electric buses to bmtc
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+