Tata: ಭಾರತದ ಅತ್ಯಂತ ಕೈಗೆಟುಕುವ 4-ವೀಲ್ ಮಿನಿ ಟ್ರಕ್ ಬಿಡುಗಡೆ: ಬೆಲೆಯೆಷ್ಟು?

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್, ಹೊಸ ಟಾಟಾ ಏಸ್ ಪ್ರೊ (Tata Ace Pro) ಅನ್ನು ಬಿಡುಗಡೆ ಮಾಡಿದೆ. ಇದು ಕೇವಲ ರೂ. 3.99 ಲಕ್ಷ (ಎಕ್ಸ್‌ ಶೋರಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಟಾಟಾ ಏಸ್ ಪ್ರೊ ಭಾರತದ ಅತ್ಯಂತ ಕೈಗೆಟುಕುವ 4-ವೀಲ್‌ಗಳ ಮಿನಿ ಟ್ರಕ್ ಆಗಿದ್ದು, ಅಸಾಧಾರಣ ದಕ್ಷತೆ, ಸಾಟಿಯಿಲ್ಲದ ಬಹುಮುಖತೆ ಮತ್ತು ಉತ್ತಮ ಮೌಲ್ಯವನ್ನು ನೀಡುತ್ತದೆ. ಪೆಟ್ರೋಲ್, ದ್ವಿ-ಇಂಧನ (CNG + ಪೆಟ್ರೋಲ್) ಮತ್ತು ಎಲೆಕ್ಟ್ರಿಕ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

ಗ್ರಾಹಕರು ತಮ್ಮ ಆದ್ಯತೆಯ ಟಾಟಾ ಏಸ್ ಪ್ರೊ ವಾಹನವನ್ನು ದೇಶಾದ್ಯಂತದ ಯಾವುದೇ ಟಾಟಾ ಮೋಟಾರ್ಸ್‌ನ 1,250 ವಾಣಿಜ್ಯ ವಾಹನಗಳ ಮಾರಾಟ ಟಚ್‌ಪಾಯಿಂಟ್‌ಗಳಲ್ಲಿ ಅಥವಾ ಟಾಟಾ ಮೋಟಾರ್‌ನ ಆನ್‌ಲೈನ್ ಮಾರಾಟ ವೇದಿಕೆಯಾದ ಫ್ಲೀಟ್ ವರ್ಸ್‌ನಲ್ಲಿ ಬುಕ್ ಮಾಡಬಹುದು ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

tata-motors-launches-ace-pro-most-affordable-4-wheel-mini-truck

ಟಾಟಾ ಏಸ್ ಪ್ರೊನ ಮಾಲೀಕತ್ವವನ್ನು ಅನುಕೂಲಕರವಾಗಿಸಲು, ಟಾಟಾ ಮೋಟಾರ್ಸ್ ಪ್ರಮುಖ ಬ್ಯಾಂಕುಗಳು ಮತ್ತು NBFC ಗಳೊಂದಿಗೆ ಸಹಯೋಗ ಹೊಂದಿದ್ದು, ತ್ವರಿತ ಸಾಲ ಅನುಮೋದನೆಗಳು, ಹೊಂದಿಕೊಳ್ಳುವ EMI ಆಯ್ಕೆಗಳು ಮತ್ತು ವರ್ಧಿತ ನಿಧಿ ಬೆಂಬಲ, ವೈವಿಧ್ಯಮಯ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ತೊಂದರೆ ಮುಕ್ತ ಹಣಕಾಸು ಪರಿಹಾರಗಳನ್ನು ನೀಡುತ್ತಿರುವುದಾಗಿ ತಿಳಿಸಿದೆ.

ಅಸಾಧಾರಣ ಪೇಲೋಡ್ ಸಾಮರ್ಥ್ಯ

ಟಾಟಾ ಏಸ್ ಪ್ರೊ ಅತ್ಯುತ್ತಮವಾದ 750 ಕೆ.ಜಿ ಪೇಲೋಡ್ ಮತ್ತು ಬಹುಮುಖ 6.5 ಅಡಿ (1.98 ಮೀ) ಡೆಕ್‌ನೊಂದಿಗೆ ವಿನ್ಯಾಸಗೊಂಡಿದೆ. ಕಾರ್ಖಾನೆ-ಹೊಂದಿಸಿದ ಹಾಫ್-ಡೆಕ್ ಅಥವಾ ಫ್ಲಾಟ್‌ಬೆಡ್ ಲೋಡ್ ಬಾಡಿ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು ಕಂಟೇನರ್, ಪುರಸಭೆಯ ಅಪ್ಲಿಕೇಶನ್‌ಗಳು ಮತ್ತು ರೀಫರ್ ಬಾಡಿ ಫಿಟ್‌ಮೆಂಟ್‌ಗೆ ಹೊಂದಿಕೊಳ್ಳುತ್ತದೆ. ಇದರ ಹೆಚ್ಚಿನ ಸಾಮರ್ಥ್ಯದ ಚಾಸಿಸ್ ಭಾರೀ ಹೊರೆಗಳನ್ನು ತಡೆಯಬಲ್ಲದು.

tata-motors-launches-ace-pro-most-affordable-4-wheel-mini-truck

ದಕ್ಷ, ಬಹುಮುಖ ಪವರ್‌ಟ್ರೇನ್‌ಗಳು: ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದ್ದು, ಲಾಭದಾಯಕತೆಗಾಗಿ ವಿನ್ಯಾಸಗೊಳಿಸಲಾದ ಏಸ್ ಪ್ರೊ ಪೆಟ್ರೋಲ್, ದ್ವಿ - ಇಂಧನ ಮತ್ತು ಎಲೆಕ್ಟ್ರಿಕ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದರ 694 ಸಿಸಿ ಪೆಟ್ರೋಲ್ ಎಂಜಿನ್ 30 ಬಿಎಚ್ ಪವರ್ ಮತ್ತು 55 ಎನ್ಎಂ ಟಾರ್ಕ್ ಹೊರಹಾಕುತ್ತದೆ.

ಎಲೆಕ್ಟ್ರಿಕ್ ಆವೃತ್ತಿಯ ವಿಷಯಕ್ಕೆ ಬಂದರೆ, ಟಾಟಾ ಮೋಟಾರ್ಸ್‌ನ ಸುಧಾರಿತ ಇವಿ ಆರ್ಕಿಟೆಕ್ಚರ್‌ನಲ್ಲಿ ನಿರ್ಮಾಣಗೊಂಡಿದ್ದು, 38 ಬಿಎಚ್ ಪವರ್, 104 ಎನ್ಎಂ ಟಾರ್ಕ್ ಮತ್ತು ಒಂದೇ ಚಾರ್ಜ್‌ನಲ್ಲಿ 155 ಕಿಮೀ ಓಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹೊಂದಿಕೊಳ್ಳುವಂತಹ ಐಪಿ 67-ರೇಟೆಡ್ ಬ್ಯಾಟರಿ ಮತ್ತು ಮೋಟಾರ್‌ನೊಂದಿಗೆ ಬರುತ್ತದೆ.

ದ್ವಿ-ಇಂಧನ ಆವೃತ್ತಿಯ ವಿಷಯಕ್ಕೆ ಬಂದರೆ, CNG ಯ ವೆಚ್ಚ - ದಕ್ಷತೆಯೊಂದಿಗೆ 5 - ಲೀಟರ್ ಪೆಟ್ರೋಲ್ ಬ್ಯಾಕಪ್ ಟ್ಯಾಂಕ್‌ನ ನಮ್ಯತೆಯೊಂದಿಗೆ ಸಂಯೋಜಿಸುತ್ತದೆ. ಇದು ಅಡೆತಡೆಯಿಲ್ಲದ ಕಾರ್ಯಾಚರಣೆಗಾಗಿ ಬಳಸುತ್ತದೆ. CNG ಮೋಡ್‌ನಲ್ಲಿ, ಇದು 26bhp ಪವರ್ ಮತ್ತು 51Nm ಟಾರ್ಕ್ ಅನ್ನು ಹೊರಹಾಕುತ್ತದೆ.

ಆರಾಮದಾಯಕ, ಸುರಕ್ಷಿತ ಕ್ಯಾಬಿನ್

ರಸ್ತೆಯಲ್ಲಿ ದೀರ್ಘಕಾಲ ಪ್ರಯಾಣಕ್ಕೆ ಅನುಕೂಲವಾಗುವ ಆಸನ, ಸಾಕಷ್ಟು ಸಂಗ್ರಹಣೆ ಮತ್ತು ಆಧುನಿಕ ಅನುಕೂಲತೆಗಳೊಂದಿಗೆ ವಿಶಾಲವಾದ ಕಾರಿನಂತಹ ಕ್ಯಾಬಿನ್ ಹೊಂದಿದೆ. AIS096- ಕಂಪ್ಲೈಂಟ್ ಕ್ರ್ಯಾಶ್-ಪರೀಕ್ಷಿತ ಕ್ಯಾಬಿನ್‌ನೊಂದಿಗೆ ಸುರಕ್ಷತೆಯು ಅತ್ಯುನ್ನತವಾಗಿದೆ. ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹೆಚ್ಚುವರಿ ಚಾಲಕ ಅನುಕೂಲಕ್ಕಾಗಿ ಐಚ್ಛಿಕ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ.

ಗೇರ್ ಶಿಫ್ಟ್ ಅಡ್ವೈಸರ್ ಮತ್ತು ರಿವರ್ಸ್ ಪಾರ್ಕಿಂಗ್ ಅಸಿಸ್ಟೆನ್ಸ್‌ನಂತಹ ವೈಶಿಷ್ಟ್ಯಗಳು ನಗರ ಮತ್ತು ಗ್ರಾಮೀಣ ಸಂಚರಣೆಯನ್ನು ಸುಲಭಗೊಳಿಸುತ್ತವೆ. ದೇಶಾದ್ಯಂತ 2,500 ಕ್ಕೂ ಹೆಚ್ಚು ಸೇವೆ ಮತ್ತು ಬಿಡಿಭಾಗಗಳ ಮಳಿಗೆಗಳೊಂದಿಗೆ, ದೂರದ ಪ್ರದೇಶಗಳಲ್ಲಿ ಸ್ಟಾರ್ ಗುರು ನೆಟ್‌ವರ್ಕ್‌ನೊಂದಿಗೆ, ಏಸ್ ಪ್ರೊ ನೀವು ತಜ್ಞರ ಸಹಾಯವನ್ನು ಪಡೆಯಬಹುದು. EV-ನಿರ್ದಿಷ್ಟ ಸೇವಾ ಕೇಂದ್ರಗಳು ಮತ್ತು ದೃಢವಾದ 24x7 ರಸ್ತೆಬದಿಯ ಸಹಾಯ ಪಡೆಯಬಹುದು.

More from DriveSpark

Article Published On: Friday, June 27, 2025, 17:36 [IST]
English summary
Tata motors launches ace pro most affordable 4 wheel mini truck
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+