Tata: 8 ಲಕ್ಷದ ರಗಡ್ ಎಸ್‌ಯುವಿ: ಸುರಕ್ಷತೆಯಲ್ಲಿ ಟಾಟಾಗೆ ಬ್ರಹ್ಮಾಸ್ತ್ರ: ಸಖತ್ ಡಿಮ್ಯಾಂಡ್ ಕಾರಿದು!

ಭಾರತದಲ್ಲಿ ಟಾಟಾ ಕಾರುಗಳಿಗೆ ವಿಶೇಷತ ಸ್ಥಾನವಿದೆ, ಇತರ ಬ್ರಾಂಡ್‌ಗಳಿಗೆ ಹೋಲಿಸಿದರೆ ಟಾಟಾ ನೀಡುವ ಅತ್ಯಂತ ಅಗ್ಗದ ಕಾರುಗಳು ಕೂಡ ಉತ್ತಮ ಗುಣಮಟ್ಟವನ್ನು ಹೊಂದಿರುತ್ತವೆ. ಸುರಕ್ಷತೆ ವಿಷಯದಲ್ಲಿ ಟಾಟಾ ರಾಜಿಯಾಗುವುದಿಲ್ಲ ಎಂಬುದನ್ನು ಪ್ರತಿ ಬಾರಿ ಸಾಭೀತುಪಡಿಸುತ್ತದೆ. ಅಂತೆಯೇ ಟಾಟಾ ಮೋಟಾರ್ಸ್‌ನ ಪ್ರಮುಖ ಕಾರಾಗಿರುವ 'ನೆಕ್ಸಾನ್' ಬ್ರಾಂಡ್‌ನ ಪ್ರಮುಖ ಬ್ರಹ್ಮಾಸ್ತ್ರವಾಗಿದೆ. ಈ ಕಾರು ಭಾರತದಲ್ಲಿ ಉತ್ತಮ ಮಾರಾಟ ಕಾಣುವ ಬೆಸ್ಟ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ಇದರ ಸುರಕ್ಷತೆ ವಿಷಯಕ್ಕೆ ಬಂದರೆ 5-ಸ್ಟಾರ್ ರೇಟಿಂಗ್ ಪಡೆದಿರುವ ಬೆಸ್ಟ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ.

ರೂ. 7.99 ಲಕ್ಷದಿಂದ ಪ್ರಾರಂಭವಾಗುವ ಟಾಟಾ ನೆಕ್ಸಾನ್ ಬೆಲಯು, ಆಕರ್ಷಕ ರಗಡ್ ವಿನ್ಯಾಸವನ್ನು ಹೊಂದಿದೆ. ವಯಸ್ಕ ಮತ್ತು ಮಕ್ಕಳ ಎರಡೂ ಆಕ್ಯುಪೆನ್ಸಿ ಕ್ರ್ಯಾಶ್ ಪರೀಕ್ಷೆಗಳಲ್ಲಿ ಇದು ಪೂರ್ಣ 5-ಸ್ಟಾರ್ ಸೇಫ್ಟಿಯನ್ನು ಗಳಿಸಿದೆ. ಟಾಟಾ ಕಾಂಪ್ಯಾಕ್ಟ್ ಎಸ್‌ಯುವಿಯ ಸುರಕ್ಷತಾ ವೈಶಿಷ್ಟ್ಯಗಳು ತನ್ನ ವಿಭಾಗದಲ್ಲಿ ಇತರ ಪ್ರತಿಸ್ಪರ್ಧಿ ಕಾರುಗಳೊಂದಿಗೆ ಸ್ಪರ್ಧಿಸಲು ಸಹಾಯ ಮಾಡುತ್ತದೆ.

tata-motors-safest-car-nexon-top-things-you-should-know

ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿ ವಯಸ್ಕರ ಆಕ್ಯುಪೆಂಟ್ ಪ್ರೊಟೆಕ್ಷನ್ (ಎಒಪಿ) ನಲ್ಲಿ 32 ಅಂಕಗಳಿಗೆ 29.41 ಅಂಕಗಳನ್ನು ಮತ್ತು ಮಕ್ಕಳ ಆಕ್ಯುಪೆಂಟ್ ಪ್ರೊಟೆಕ್ಷನ್ (ಸಿಒಪಿ) ವಿಭಾಗಗಳಲ್ಲಿ 49 ಅಂಕಗಳಿಗೆ 43.83 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಕಾರು ಸೇಫ್ಟಿ ಪರೀಕ್ಷೆಯಲ್ಲಿ ಸಂಪೂರ್ಣ 5-ಸ್ಟಾರ್ ಸೇಫ್ಟಿಯನ್ನು ಗಳಿಸಿದೆ.

ಟಾಟಾ ನೆಕ್ಸಾನ್‌ನ ಬೇಸ್ ಪೆಟ್ರೋಲ್-ಮ್ಯಾನ್ಯುವಲ್ ಬೆಲೆಗಳು 8 ಲಕ್ಷ ರೂ.ನಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುತ್ತವೆ. ಟಾಪ್-ಎಂಡ್ ಡೀಸೆಲ್-ಆಟೋಮ್ಯಾಟಿಕ್‌ನ ಬೆಲೆಗಳು 15.80 ಲಕ್ಷ ರೂ ವರೆಗೆ ಇರಲಿದೆ. ಸಿಎನ್‌ಜಿ ವೇರಿಯೆಂಟ್‌ಗಳು 8.99 ಲಕ್ಷ ರೂ.ನಿಂದ 14.59 ಲಕ್ಷ ರೂ.ವರೆಗೆ ಇರುತ್ತದೆ (ಈ ಎಲ್ಲಾ ಬೆಲೆಗಳು ಎಕ್ಸ್-ಶೋ ರೂಂ ಆಗಿದೆ).

tata-motors-safest-car-nexon-top-things-you-should-know

ಸುರಕ್ಷತಾ ಫೀಚರ್‌ಗಳು: ಈ ಕಾರಿನ ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌, ಇಬಿಡಿ ಜೊತೆಗೆ ಎಬಿಎಸ್‌, ISOFIX ಚೈಲ್ಡ್ ಸೀಟ್ ಆಂಕಾರೇಜ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿವೆ. ಟಾಪ್‌ ಸ್ಪೆಕ್ ವೇರಿಯೆಂಟ್‌ಗಳು ಬ್ಲೈಂಡ್ ವ್ಯೂ ಮಾನಿಟರ್ ಜೊತೆಗೆ 360-ಡಿಗ್ರಿ ಕ್ಯಾಮೆರಾ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)ಅನ್ನು ಪಡೆಯುತ್ತವೆ.

ಆಯ್ಕೆ ಮಾಡುವ ವೇರಿಯೆಂಟ್‌ ಅನ್ನು ಅವಲಂಬಿಸಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು, ಕನೆಕ್ಟೆಡ್‌ ಕಾರ್ ಟೆಕ್ನಾಲಾಜಿ, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋ ಎಸಿ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ (ಕ್ರಿಯೇಟಿವ್ +), ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್ ನಂತಹ ಪ್ರೀಮಿಯಂ ಫೀಚರ್ಸ್ ಇವೆ.

tata-motors-safest-car-nexon-top-things-you-should-know

1.2-ಲೀಟರ್ ಟರ್ಬೊ-ಪೆಟ್ರೋಲ್: ಈ ಎಂಜಿನ್ ಬೇಸ್ ವೇರಿಯೆಂಟ್‌ನಲ್ಲಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ, ಹಾಗೆಯೇ ಇದು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಕೂಡ ಇದೆ. ಇಲ್ಲಿ ಎರಡು ವಿಧದ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ಅನ್ನು ಸಹ ನೀಡಲಾಗಿದೆ. ಅವುಗಳೆಂದರೆ 6-ಸ್ಪೀಡ್ AMT ಅಥವಾ 7-ಸ್ಪೀಡ್ ಡಿಸಿಟಿ, ಎರಡನೆಯದು ಟಾಪ್‌ ವೇರಿಯೆಂಟ್‌ನಲ್ಲಿನ ಏಕೈಕ ಆಯ್ಕೆಯಾಗಿದೆ.

1.5-ಲೀಟರ್ ಡೀಸೆಲ್: ಡೀಸೆಲ್ ಎಂಜಿನ್ ಅನ್ನು ಅದರ ಶಕ್ತಿಯ ಸಮತೋಲನ ಮತ್ತು ಹೆದ್ದಾರಿಗಳಲ್ಲಿ ಉತ್ತಮ ಇಂಧನ ದಕ್ಷತೆಯಿಂದಾಗಿ ಸಾಮಾನ್ಯವಾಗಿ ಆಲ್ ರೌಂಡರ್ ಎಂದು ಪರಿಗಣಿಸಲಾಗುತ್ತದೆ. ಟಾಟಾ ನೆಕ್ಸಾನ್‌ನೊಂದಿಗೆ, ಇದು 115 ಪಿಎಸ್ ಪವರ್ ಮತ್ತು 260 ಎನ್‌ಎಮ್‌ ಟಾರ್ಕ್ ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ AMT ಯೊಂದಿಗೆ ಜೋಡಿಯಾಗಿ ಬರುತ್ತದೆ.

Article Published On: Friday, February 21, 2025, 9:57 [IST]
English summary
Tata motors safest car nexon top things you should know
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+