Tata Motors: ಶಾಕ್ ಕೊಟ್ಟ ಟಾಟಾ ಮೋಟಾರ್ಸ್: ಸದ್ದಿಲ್ಲದೆ ನೆಕ್ಸಾನ್ ಮಾರಾಟ ಸ್ಥಗಿತ!
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ (Tata Motors) ತನ್ನ ಜನಪ್ರಿಯ ಮಾದರಿಯಾದ ನೆಕ್ಸಾನ್ ಇವಿ (Nexon EV) ನ ಪ್ರಮುಖ ವೆರಿಯೆಂಟ್ ಅನ್ನು ಸ್ಥಗಿತಗೊಳಿಸಿದೆ. ಇನ್ನು ಮುಂದೆ ಕಂಪನಿಯು ಟಾಟಾ ನೆಕ್ಸಾನ್ LR (ಲಾಂಗ್ ರೇಂಜ್) ವೇರಿಯೆಂಟ್ ಅನ್ನು ಮಾರಟ ಮಾಡುವುದಿಲ್ಲ. ಈ ಹಿಂದೆಯೂ ಕಂಪನಿ LR ಮತ್ತು MR ಎರಡೂ ವೇರಿಯೆಂಟ್‌ಗಳನ್ನು ಸ್ಥಗಿತಗೊಳಿಸುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕೊನೆಗೆ ಟಾಟಾ LR ವೇರಿಯೆಂಟ್ ಅನ್ನು ಸ್ಥಗಿತಗೊಳಿಸಿ, MR ರೂಪಾಂತರವನ್ನು ಉಳಿಸಿಕೊಂಡಿದೆ. ಆದ್ದರಿಂದ ಕಂಪನಿಯು ಮಧ್ಯಮ ಶ್ರೇಣಿ (MR) ಮತ್ತು 45 ಆವೃತ್ತಿಯನ್ನು ಮಾತ್ರ ಮಾರಾಟ ಮಾಡಲಿದೆ.
ಟಾಟಾ ಮೋಟಾರ್ಸ್ ನೆಕ್ಸಾನ್ ಇವಿಯ ಲಾಂಗ್ ರೇಂಜ್ ಆವೃತ್ತಿಯನ್ನು ಮೌನವಾಗಿ ಸ್ಥಗಿತಗೊಳಿಸಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಬೇರೆ ಯಾವುದೇ ಬದಲಾವಣೆಗಳಿಲ್ಲ. ನೆಕ್ಸಾನ್ ಇವಿ MR ಬೆಲೆಯು ರೂ. 12.49 ಲಕ್ಷ (ಎಕ್ಸ್ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ನೆಕ್ಸಾನ್ ಇವಿ 45 ಬೆಲೆಯು ರೂ. 13.99 ಲಕ್ಷ (ಎಕ್ಸ್ ಶೋರೂಂ) ದಿಂದ ಪ್ರಾರಂಭವಾಗುತ್ತದೆ.

ಟಾಟಾ ನೆಕ್ಸಾನ್ EV MR ವಿಶೇಷತೆಗಳು: ಇದು 30 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 275 ಕಿ.ಮೀ ರೇಂಜ್ ನೀಡುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ ಗರಿಷ್ಠ 127 bhp ಪವರ್ ಮತ್ತು 215 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 56 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಮಾಡಬಹುದು. 9.2 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಟಾಟಾ ನೆಕ್ಸಾನ್ ಇವಿ 45 ವಿಶೇಷತೆಗಳು: ಇದು 45 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 489 ಕಿ.ಮೀ ರೇಂಜ್ ನೀಡುವುದಾಗಿ ಟಾಟಾ ಹೇಳಿಕೊಂಡಿದೆ. 60 kW ವೇಗದ ಚಾರ್ಜರ್ ಬಳಸುವಾಗ ನೆಕ್ಸಾನ್ EV 45 ಅನ್ನು ಸುಮಾರು 40 ನಿಮಿಷಗಳಲ್ಲಿ ಶೇಕಡಾ 80 ರಷ್ಟು ಚಾರ್ಜ್ ಮಾಡಬಹುದು ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಈ ಎಸ್‌ಯುವಿಯನ್ನು ಪನೋರಮಿಕ್ ಸನ್‌ರೂಫ್ ಮತ್ತು ಸುಧಾರಿತ V2L ಮತ್ತು V2V ಚಾರ್ಜಿಂಗ್ ತಂತ್ರಜ್ಞಾನಗಳಂತಹ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಎಲೆಕ್ಟ್ರಿಕ್ ಮೋಟಾರ್ ಮುಂಭಾಗದ ಚಕ್ರಗಳನ್ನು ಮಾತ್ರ ಚಾಲನೆ ಮಾಡುತ್ತದೆ. ಇದು 142 bhp ಗರಿಷ್ಠ ಪವರ್ ಮತ್ತು 215 Nm ಗರಿಷ್ಠ ಟಾರ್ಕ್ ಹೊರಹಾಕುತ್ತದೆ. 100 ಕಿ.ಮೀ ವೇಗವನ್ನು 8.9 ಸೆಕೆಂಡುಗಳಲ್ಲಿ ತಲುಪಬಲ್ಲದು.
ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ ಟಾಟಾ ನೆಕ್ಸಾನ್ EV ರೆಡ್ # ಡಾರ್ಕ್ ಎಡಿಷನ್ ಅವತಾರದಲ್ಲಿಯೂ ಲಭ್ಯವಿದೆ, ಇದು ಪ್ರಮಾಣಿತ ಬೆಲೆಗಿಂತ ರೂ. 20,000 ಹೆಚ್ಚುವರಿ ವೆಚ್ಚವಾಗುತ್ತದೆ. ನೆಕ್ಸಾನ್ EV ಯ ರೆಡ್ # ಡಾರ್ಕ್ ಎಡಿಷನ್ ಟಾಪ್-ಎಂಡ್ ಎಂಪವರ್ಡ್+ ಪರ್‌ಸೋನಾದಲ್ಲಿ ಮಾತ್ರ ಲಭ್ಯವಿದೆ.

ಟಾಟಾ ನೆಕ್ಸಾನ್ EV 45 kWh ಬ್ಯಾಟರಿ ಪ್ಯಾಕ್ ರೂಪಾಂತರವು ಕ್ರಿಯೇಟಿವ್, ಫಿಯರ್‌ಲೆಸ್, ಎಂಪವರ್ಡ್ ಮತ್ತು ಎಂಪವರ್ಡ್+ ಪರ್‌ಸೋನಾ ಆಯ್ಕೆಗಳಲ್ಲಿ ಲಭ್ಯವಿದೆ. ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಸದ್ಯ ನೆಕ್ಸಾನ್ ಇವಿ ಅಗ್ರಸ್ಥಾನದಲ್ಲಿದ್ದರೂ, ಇದೀಗ ಈ LR ವೇರಿಯೆಂಟ್ ಸ್ಥಗಿತಗೊಳಿಸಿರುವುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications