TATA: 24 Km ಮೈಲೇಜ್.. 7 ಲಕ್ಷ.. ಈ ಟಾಟಾ SUVಗೆ ಭಾರೀ ರಿಯಾಯಿತಿ!

ಟಾಟಾ ನೆಕ್ಸಾನ್ (Tata Nexon) ನಂಬರ್ 1 ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಪ್ರತಿ ತಿಂಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ನವೆಂಬರ್ ತಿಂಗಳಲ್ಲೂ ಅದು ಮುಂದುವರಿದಿದೆ. ಒಟ್ಟು 22,434 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 15,329 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿ - ಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 46% ಪ್ರಗತಿಯಾಗಿದೆ.

ಸದ್ಯ, ಇದೇ ಡಿಸೆಂಬರ್‌ನಲ್ಲಿ 'ಟಾಟಾ ನೆಕ್ಸಾನ್' ಕಾರಿಗೆ ಭಾರೀ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಲಾಗಿದೆ. ಈ ಎಸ್‌ಯುವಿಯ 2024ರ ಪ್ರತಿಯೊಂದು ಮಾಡೆಲ್‌ಗಳು, ಬರೋಬ್ಬರಿ ರೂ.50,000 ವರೆಗೆ ರಿಯಾಯಿತಿ ಹೊಂದಿವೆ. ಇದರಲ್ಲಿ ರೂ.40,000 ಗ್ರಾಹಕ ರಿಯಾಯಿತಿ ಹಾಗೂ ರೂ.10,000 ವಿನಿಮಯ ಬೋನಸ್‌ಗಳಿವೆ.

Tata Nexon Suv December 2025 Discount Details

'ನೆಕ್ಸಾನ್' ಎಸ್‌ಯುವಿಯ 2025ರ ಮಾಡೆಲ್‌ನ ಪೆಟ್ರೋಲ್/ ಸಿಎನ್‌ಜಿ ಚಾಲಿತ ಎಲ್ಲ ರೂಪಾಂತರಗಳು (ಸ್ಮಾರ್ಟ್ & ಪ್ಯೂರ್ ಹೊರತುಪಡಿಸಿ), ಸರಿ ಸುಮಾರು ರೂ.50,000 ವರೆಗೆ ಹಣಕಾಸಿನ ಪ್ರಯೋಜನವನ್ನು ಪಡೆದಿವೆ. ಈ ರಿಯಾಯಿತಿಯಲ್ಲಿ ರೂ.10,000 ಗ್ರಾಹಕ ರಿಯಾಯಿತಿ, ರೂ.20,000 ವಿನಿಮಯ ಬೋನಸ್‌ ಮತ್ತು ರೂ.20,000 ಲಾಯಲ್ಟಿ ಬೋನಸ್‌ ಕೂಡ ಸೇರಿವೆ.

ಈ ಕಾರಿನ 2025ರ ಮಾಡೆಲ್‌ನ ಪೆಟ್ರೋಲ್/ ಸಿಎನ್‌ಜಿ ಚಾಲಿತ ಸ್ಮಾರ್ಟ್ ಮತ್ತು ಪ್ಯೂರ್ ರೂಪಾಂತರಗಳು, ಒಟ್ಟು ರೂ.65,000 ವರೆಗೆ ಯನ್ನು ಒಳಗೊಂಡಿವೆ. ಇದರೊಳಗೆ ರೂ.25,000 ಗ್ರಾಹಕ ರಿಯಾಯಿತಿ, ರೂ.20,000 ವಿನಿಮಯ ಬೋನಸ್‌ ಹಾಗೂ ರೂ.20,000 ಲಾಯಲ್ಟಿ ಬೋನಸ್‌ಗಳಿವೆ.

ಇದೇ 'ಟಾಟಾ ನೆಕ್ಸಾನ್' ಎಸ್‌ಯುವಿಯ 2025ರ ಮಾಡೆಲ್‌ನ ಡೀಸೆಲ್ ರೂಪಾಂತರಗಳು, ಬರೋಬ್ಬರಿ ರೂ.50,000 ವರೆಗೆ ಹಣಕಾಸಿನ ಪ್ರಯೋಜನವನ್ನು ಪಡೆದಿವೆ. ಈ ರಿಯಾಯಿತಿಯಲ್ಲಿ ರೂ.10,000 ಗ್ರಾಹಕ ರಿಯಾಯಿತಿ, ರೂ.20,000 ವಿನಿಮಯ ಬೋನಸ್ ಮತ್ತು ರೂ.20,000 ಲಾಯಲ್ಟಿ ಬೋನಸ್‌ನ್ನು ಸಹ ಇವೆ.

'ಟಾಟಾ ನೆಕ್ಸಾನ್' ವಿಶೇಷತೆಗಳೇನು:

ಈ ಕಾರು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.7.32 ಲಕ್ಷದಿಂದ ರೂ.14.05 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಕ್ರಿಯೇಟಿವ್, ಕ್ರಿಯೇಟಿವ್ ಪ್ಲಸ್ ಹಾಗೂ ಫಿಯರ್‌ಲೆಸ್ ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

ನೂತನ 'ನೆಕ್ಸಾನ್' ಹೆಚ್ಚು ವಿಶಾಲವಾಗಿದೆ. 208 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,498 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಪ್ಯೂರ್ ಗ್ರೇ, ಡೇಟೋನಾ ಗ್ರೇ, ಪ್ರಿಸ್ಟೈನ್ ವೈಟ್, ಓಷನ್ ಬ್ಲೂ, ರಾಯಲ್ ಬ್ಲೂ, ಕಾರ್ಬನ್ ಬ್ಲ್ಯಾಕ್ ಹಾಗೂ ಅಟ್ಲಾಸ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 5 ಆಸನಗಳನ್ನು ಪಡೆದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 350 ಲೀಟರ್‌ನಷ್ಟು ಬೂಟ್ ಸ್ಪೇನ್‌ನ್ನು ಹೊಂದಿದೆ.

ಇದು ಬೆಲೆಗೆ ತಕ್ಕಂತೆ ಹೆಚ್ಚು ಶಕ್ತಿಶಾಲಿಯಾದ 3 ಪವರ್‌ಟ್ರೇನ್‌ನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 17 ರಿಂದ 24 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

ಈ ಕಾರಿನ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಹಾಗೂ ಸನ್‌ರೂಫ್‌ ಒಳಗೊಂಡಂತೆ ನಾನಾ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) & 360-ಡಿಗ್ರಿ ಕ್ಯಾಮೆರಾನ್ನು ಹೊಂದಿದೆ.

More from DriveSpark

Article Published On: Sunday, December 14, 2025, 9:13 [IST]
English summary
Tata nexon suv december 2025 discount details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+