Nexon: ಯಪ್ಪಾ.. 24.08 ಕಿ.ಮೀ ಮೈಲೇಜ್, 8 ಲಕ್ಷದ ಹೊಸ ಟಾಟಾ ನೆಕ್ಸಾನ್ ಕಾರಿಗಾಗಿ ಎಷ್ಟು ದಿನ ಕಾಯಬೇಕು ಗೊತ್ತಾ?
ಟಾಟಾ ನೆಕ್ಸಾನ್ (Tata Nexon) ಪ್ರಖ್ಯಾತ ಎಸ್‌ಯುವಿಯಾಗಿದೆ. ಈ ಕಾರು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಇತ್ತೀಚೆಗೆ ನವೀಕರಿಸಿಯೂ ನೂತನ ನೆಕ್ಸಾನ್ ಎಸ್‌ಯುವಿ ಬಿಡುಗಡೆಗೊಳಿಸಲಾಗಿತ್ತು. ನೀವು ಹೊಚ್ಚ ಹೊಸ ಕಾರನ್ನು ಖರೀದಿ ಮಾಡಲು ಆಲೋಚಿಸಿದ್ದರೆ.. ಹಾಗಾದರೆ ಟಾಟಾ ನೆಕ್ಸಾನ್ ಉತ್ತಮವಾದ ಆಯ್ಕೆಯಾಗಲಿದೆ. ಆದರೆ, ಈ ಕಾರನ್ನು ತಕ್ಷಣ ಶೋರೂಂಗೆ ಹೋಗಿ ಮನೆಗೆ ತರಲು ಸಾಧ್ಯವಾಗುವುದಿಲ್ಲ.. ಈ ಜನವರಿಯಲ್ಲಿಯೂ ಹೊಸ ನೆಕ್ಸಾನ್ ದೇಶದ ಪ್ರಮುಖ ನಗರಗಳಲ್ಲಿ ಒಂದಷ್ಟು ಕಾಯುವಿಕೆ ಅವಧಿಯನ್ನು ಹೊಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರಿನಲ್ಲಿ ನೂತನ ಟಾಟಾ ನೆಕ್ಸಾನ್ ಎಸ್‌ಯುವಿ, ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ 15 ದಿನದಿಂದ 1 ತಿಂಗಳಲ್ಲಿ ಗ್ರಾಹಕರಿಗೆ ವಿತರಣೆಯಾಗುತ್ತದೆ. ನವದೆಹಲಿಯಲ್ಲಿ 2 ತಿಂಗಳಲ್ಲಿ ಗ್ರಾಹಕರ ಕೈಸೇರುತ್ತದೆ. ಮುಂಬೈನಲ್ಲಿ 1 ರಿಂದ 1.5 ತಿಂಗಳು ಕಾಯುವಿಕೆ ಅವಧಿಯನ್ನು ಒಳಗೊಂಡಿದೆ. ಹೈದರಾಬಾದ್‌ನಲ್ಲಿ 1 ತಿಂಗಳಲ್ಲಿ ಡೆಲಿವರಿಯಾಗಿ ಬಿಡುತ್ತದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಹೊಸ ಟಾಟಾ ನೆಕ್ಸಾನ್ ಎಸ್‌ಯುವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ರೂ.8.15 ಲಕ್ಷದಿಂದ ರೂ.15.80 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಈ ಕಾರು ಸ್ಮಾರ್ಟ್, ಪ್ಯೂರ್ ಪ್ಲಸ್, ಕ್ರಿಯೇಟಿವ್ ಮತ್ತು ಕ್ರಿಯೇಟಿವ್ ಪ್ಲಸ್ ಎಂಬ ರೂಪಾಂತರಗಳನ್ನು (ವೇರಿಯೆಂಟ್) ಒಳಗೊಂಡಿದೆ.
ಈ ಕಾರು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಪಡೆದಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಟರ್ಬೊ ಪೆಟ್ರೋಲ್ + ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17.01 ರಿಂದ 24.08 ಕೆಎಂಪಿಎಲ್‌ವರೆಗೂ ಮೈಲೇಜ್ ಸಹ ಕೊಡುತ್ತದೆ.

ನೂತನ ಟಾಟಾ ನೆಕ್ಸಾನ್ ಎಸ್‌ಯುವಿಯಲ್ಲಿ 5 ಜನರು ಸುಲಭವಾಗಿ ಓಡಾಟ ನಡೆಸಬಹುದು. ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಲು 321 ರಿಂದ 382 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. ಇನ್ಫೋಟೈನ್ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡುಯಲ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಟಾಟಾ ನೆಕ್ಸಾನ್ ಇವಿ (Tata Nexon EV) ಕೂಡ ಖರೀದಿಗೆ ಲಭ್ಯ: ಈ ಕಾರು ರೂ.12.49 ಲಕ್ಷದಿಂದ ರೂ.17.19 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದು 40.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 46.08 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 390 ರಿಂದ 489 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications