Tata: ಬಹುನಿರೀಕ್ಷಿತ ಫ್ಲೆಕ್ಸ್ ಫ್ಯುಯೆಲ್ 'ಟಾಟಾ ಪಂಚ್' ಕಾರು ಪ್ರದರ್ಶನ.. ದುಡ್ಡು ಉಳಿಸಬಹುದು!

ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಕಂಪನಿಯು ಸಿಯೆರಾ, ಹ್ಯಾರಿಯರ್ ಇವಿ ಮತ್ತು ಅವಿನ್ಯಾ ಒಳಗೊಂಡಂತೆ ವಿವಿಧ ಕಾರುಗಳನ್ನು ಬಹಿರಂಗಪಡಿಸಿದೆ. ಇದರೊಟ್ಟಿಗೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಪರ್ಯಾಯ ಇಂಧನ ಚಾಲಿತ ಫ್ಲೆಕ್ಸ್ ಫ್ಯುಯೆಲ್ (Flex Fuel) 'ಪಂಚ್' ಮೆಕ್ರೋ ಎಸ್‌ಯುವಿಯನ್ನು ಪದರ್ಶನ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ನೂತನ ಟಾಟಾ ಪಂಚ್ (Tata Punch) ಎಸ್‌ಯುವಿ ಚಲಿಸಲು ಇಂಧನವಾಗಿ 'ಫ್ಲೆಕ್ಸ್ ಫ್ಯುಯೆಲ್' ಬಳಕೆ ಮಾಡಲಾಗುತ್ತದೆ. ಈ ಹಿನ್ನೆಲೆ, ಈ ಕಾರಿನ ನಿರ್ವಹಣೆಯನ್ನು ಮಾಲೀಕರು ಬಲು ಸುಲಭವಾಗಿ ಮಾಡಬಹುದು. ಪೆಟ್ರೋಲ್‌ಗೂ ಅಧಿಕ ಹಣ ವ್ಯಯಿಸುವ ಅಗತ್ಯವಿಲ್ಲ. ಜೊತೆಗೆ ಇದು ಕಡಿಮೆ ವಿಷಕಾರಿ ಹೊಗೆಯನ್ನು ಹೊರಹಾಕುವುದರಿಂದ ಪರಿಸರಕ್ಕೂ ಹೆಚ್ಚು ಹಾನಿಯಾವುದಿಲ್ಲ.

Tata Punch Flex Fuel Showcased At Auto Expo 2025 Details

ಫ್ಲೆಕ್ಸ್ ಫ್ಯುಯೆಲ್ ಅಂದರೆ ಏನು: ಸರಳವಾಗಿ ಹೇಳಬೇಕಾದರೆ, ಎಥೆನಾಲ್ ಹಾಗೂ ಪೆಟ್ರೋಲ್‌ನ ಸಮಿಶ್ರಣವೆಂದು.. ಸದ್ಯ, ಮಾರಾಟಕ್ಕೆ ಹೊರಬರುತ್ತಿರುವ ಬಹುತೇಕ ವಾಹನಗಳ ಎಂಜಿನ್‌ನ್ನು ಶೇಕಡ 80% ಪೆಟ್ರೋಲ್‌ ಮತ್ತು 20% ಎಥೆನಾಲ್‌ನ್ನು ಮಿಶ್ರಣ ಮಾಡಿ ಓಡಿಸುವಂತೆ ಸಿದ್ಧಪಡಿಸಲಾಗುತ್ತದೆ. ವಿಶೇಷವಾಗಿ ಎಥೆನಾಲ್‌ ಇಂಧನವಾಗಿ ಕೃಷಿ ತ್ಯಾಜ್ಯ (ಭತ್ತದ ಹುಲ್ಲು) ಉಪಯೋಗಿಸಿ ತಯಾರಿಸಲಾಗುತ್ತದೆ.

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಫ್ಲೆಕ್ಸ್ ಫ್ಯುಯೆಲ್ ಚಾಲಿತ 'ಟಾಟಾ ಪಂಚ್' ಎಸ್‌ಯುವಿ ಪವರ್‌ಟ್ರೇನ್ ಕುರಿತಂತೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲ್ಲ. ಮುಂಬರುವ ಕೆಲವೇ ತಿಂಗಳಲ್ಲಿ ಈ ಕಾರು ಮಾರಾಟಕ್ಕೆ ಬರುವ ನೀರಿಕ್ಷೆಯಿದೆ. ಆ ಬಳಿಕ ಬೆಲೆ ಸೇರಿದಂತೆ ಇನ್ನಿತರೇ ವಿವರಗಳು ಲಭ್ಯವಾಗಲಿವೆ.

Tata Punch Flex Fuel Showcased At Auto Expo 2025 Details

ಸಾಮಾನ್ಯ ಟಾಟಾ ಪಂಚ್ ವಿಶೇಷತೆಗಳೇನು: ಈ ಕಾರು, ರೂ.6.20 ಲಕ್ಷದಿಂದ ರೂ.10.32 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 1.2-ಲೀಟರ್ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 18.8 ರಿಂದ 26.99 ಕೆಎಂಪಿಎಲ್‌ವರೆಗೂ ಮೈಲೇಜ್ ಸಿಗುತ್ತದೆ.

ನೂತನ ಟಾಟಾ ಪಂಚ್ ಎಸ್‌ಯುವಿಯಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜರ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 2-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ರಿವರ್ಸಿಂಗ್ ಕ್ಯಾಮೆರಾವನ್ನು ಹೊಂದಿದೆ.

Tata Punch Flex Fuel Showcased At Auto Expo 2025 Details

ಟಾಟಾ ಪಂಚ್ ಇವಿಯೂ ಖರೀದಿಗೆ ಲಭ್ಯ: ಈ ಕಾರು ರೂ.9.99 ಲಕ್ಷದಿಂದ ರೂ.14.44 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 25 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 35 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 265 ಕಿಲೋಮೀಟರ್‌ರಿಂದ 365 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 20, 2025, 10:37 [IST]
English summary
Tata punch flex fuel showcased at auto expo 2025 details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+