TATA: 6.20 ಲಕ್ಷ.. 5-ಸೀಟರ್, ಮಧ್ಯಮ ವರ್ಗದವರ ನೆಚ್ಚಿನ ಟಾಟಾ ಕಾರಿದು.. ಹೊಸ ಮೈಲಿಗಲ್ಲು ನಿರ್ಮಾಣ!
ಟಾಟಾ ಮೋಟಾರ್ಸ್ (Tata Motors) ಜನ ಮೆಚ್ಚಿದ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಹಲವು ಕಾರುಗಳನ್ನು ಮಾರಾಟಗೊಳಿಸುತ್ತದೆ. ಅವುಗಳಲ್ಲಿ ಪಂಚ್ (Punch) ಜನಪ್ರಿಯ ಮೈಕ್ರೋ ಎಸ್‌ಯುವಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ ಇದೇ ಕಾರಿನ ಉತ್ಪಾದನೆಯಲ್ಲಿ ಟಾಟಾ ಕಂಪನಿಯು ಹೊಸ ಇತಿಹಾಸವನ್ನು ಬರೆದಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸದ್ಯ, ಟಾಟಾ ಮೋಟಾರ್ಸ್ 5 ಲಕ್ಷ ಯುನಿಟ್ 'ಪಂಚ್' ಕಾರುಗಳನ್ನು ಉತ್ಪಾದಿಸಿ ಬಹುದೊಡ್ಡ ಮೈಲಿಗಲ್ಲನ್ನು ನಿರ್ಮಿಸಿದೆ. ಈ ದಾಖಲೆಯು ಪೆಟ್ರೋಲ್, ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಮಾಡೆಲ್‌ಗಳ ಒಟ್ಟಾರೆ ತಯಾರಿಕೆಯನ್ನು ಒಳಗೊಂಡಿದೆ. ಹಾಗೆಯೇ ಇದು ಟಾಟಾ ಪಂಚ್ ಎಸ್‌ಯುವಿಗೆ ಇರುವ ಪ್ರಖ್ಯಾತಿಯನ್ನು ಎತ್ತಿ ತೋರಿಸುತ್ತದೆ.

ಹೋದ ವರ್ಷ 'ಟಾಟಾ ಪಂಚ್' ಎಸ್‌ಯುವಿ ಭಾರೀ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ಮೂಲಕ ಬೃಹತ್ ದಾಖಲೆಯೊಂದನ್ನು ನಿರ್ಮಿಸಿತ್ತು. ಬರೋಬ್ಬರಿ 2,02,030 ಯುನಿಟ್ ಪಂಚ್ ಎಸ್‌ಯುವಿಗಳನ್ನು ಮಾರಲಾಗಿತ್ತು. ಇದರೊಂದಿಗೆ ಪ್ರತಿ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ, ಸುದೀರ್ಘ 40 ವರ್ಷಗಳಿಂದ ಪ್ರಥಮ ಸ್ಥಾನದಲ್ಲಿರುತ್ತಿದ್ದ 'ಮಾರುತಿ ಸುಜುಕಿ'ಯನ್ನು ಹಿಂದಿಕ್ಕಿದೆ.
ಪೆಟ್ರೋಲ್/ ಸಿಎನ್‌ಜಿ ಟಾಟಾ ವಿಶೇಷತೆಗಳೇನು: ಈ ಕಾರು ರೂ.6.20 ಲಕ್ಷದಿಂದ ರೂ.10.32 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. ಪ್ಯೂರ್, ಅಡ್ವೆಂಚರ್ ಮತ್ತು ಕ್ರಿಯೇಟಿವ್ ಪ್ಲಸ್ ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಹೊರಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಪಡೆದಿದ್ದು, ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.
ಈ ಟಾಟಾ ಪಂಚ್ ಕಾರು, ಶಕ್ತಿಯುತವಾದ 1.2-ಲೀಟರ್ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 18.8 ರಿಂದ 26.99 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ನೂತನ ಟಾಟಾ ಪಂಚ್ ಎಸ್‌ಯುವಿ 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ನಡೆಸಬಹುದು. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, 4-ಸ್ಪೀಕರ್‌ಗಳು ಮತ್ತು ಸನ್‌ರೂಫ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 2-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಪಡೆದಿದೆ.
ಟಾಟಾ ಪಂಚ್ ಇವಿಯೂ ಖರೀದಿಗೆ ಲಭ್ಯ: ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಕನಿಷ್ಠ ರೂ.9.99 ಲಕ್ಷ ಮತ್ತು ಗರಿಷ್ಠ ರೂ.14.29 (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ. ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ & ಎಂಪವರ್ಡ್ ಪ್ಲಸ್ ಎಂಬ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ.
ಈ ಟಾಟಾ ಪಂಚ್ ಇವಿ 25 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 35 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 265 ರಿಂದ 365 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಇದು ಕೂಡ 5 ಆಸನಗಳನ್ನು ಹೊಂದಿದೆ.
ನೂತನ ಎಲೆಕ್ಟ್ರಿಕ್ ಕಾರು 'ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್'ಗಾಗಿ 10.25-ಇಂಚಿನ ಡುಯಲ್-ಸ್ಕ್ರೀನ್ ಸೆಟಪ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಏರ್ ಪ್ಯೂರಿಫೈಯರ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಹಾಗೂ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳನ್ನು ತನ್ನದಾಗಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications