26.99 ಕಿ.ಮೀ ಮೈಲೇಜ್.. 5-ಸೀಟರ್, ಈ Tata SUV ಬೆಲೆ ರೂ.85,000 ಇಳಿಕೆ.. ಹೊಸ ದರವೆಷ್ಟು?

ಟಾಟಾ ಪಂಚ್ (Tata Punch) ವಿಶ್ವಾಸಾರ್ಹ ಮೈಕ್ರೋ ಎಸ್‌ಯುವಿಯಾಗಿದೆ. ಪ್ರತಿ ತಿಂಗಳು ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸೆ.22 ರಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೊಂಡಿವೆ. ಇದರ ಸಂಪೂರ್ಣ ಲಾಭವು 'ಪಂಚ್' ಕಾರಿಗೂ ಲಭ್ಯವಿದೆ. ಬರೋಬ್ಬರಿ ರೂ.85,000 ವರೆಗೆ ಬೆಲೆ ಇಳಿಕೆಯಾಗಿದೆ. ನಾವಿಲ್ಲಿ ಈ ಎಸ್‌ಯುವಿಯ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಪೆಟ್ರೋಲ್ ಚಾಲಿತ ಮ್ಯಾನುವಲ್ ಟ್ರಾಸ್ಮಿಷನ್ ರೂಪಾಂತರಗಳ (ವೇರಿಯೆಂಟ್) ಬೆಲೆ ವಿವರ:

ಇದು ಹತ್ತಾರು ವಿಧದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಪ್ಯೂರ್ ರೂ.5,49,990, ಪ್ಯೂರ್ (ಒ) ರೂ.6,23,990, ಅಡ್ವೆಂಚರ್ ರೂ.6,55,990, ಅಡ್ವೆಂಚರ್ ಪ್ಲಸ್ ರೂ.6,87,990, ಅಡ್ವೆಂಚರ್ ಎಸ್ ರೂ.7,06,290, ಅಡ್ವೆಂಚರ್ ಪ್ಲಸ್ ಎಸ್ ರೂ.7,51,990, ಅಕಾಂಪ್ಲಿಶ್ಡ್ ಪ್ಲಸ್ ರೂ.7,70,290, ಅಕಾಂಪ್ಲಿಶ್ಡ್ ಪ್ಲಸ್ ಕ್ಯಾಮೊ ರೂ.7,84,090, ಅಕಾಂಪ್ಲಿಶ್ಡ್ ಪ್ಲಸ್ ಎಸ್ ರೂ.8,14,190, ಕ್ರಿಯೇಟಿವ್ ಪ್ಲಸ್ ರೂ.8,14,390, ಕ್ರಿಯೇಟಿವ್ ಪ್ಲಸ್ ಕ್ಯಾಮೊ ರೂ.8,28,090, ಅಕಾಂಪ್ಲಿಶ್ಡ್ ಪ್ಲಸ್ ಎಸ್ ಕ್ಯಾಮೊ ರೂ.8,29,790, ಕ್ರಿಯೇಟಿವ್ ಪ್ಲಸ್ ಎಸ್ ರೂ.8,55,490 ಹಾಗೂ ಕ್ರಿಯೇಟಿವ್ ಪ್ಲಸ್ ಎಸ್ ಕ್ಯಾಮೊ ರೂ.8,69,190 ಎಕ್ಸ್-ಶೋರೂಂ ದರವನ್ನು ಪಡೆದಿದೆ.

Tata Punch Suv Variants Wise New Ex Showroom Price Details

ಸಿಎನ್‌ಜಿ ಚಾಲಿತ ಮ್ಯಾನುವಲ್ ಟ್ರಾಸ್ಮಿಷನ್ ರೂಪಾಂತರಗಳ (ವೇರಿಯೆಂಟ್) ದರ ಪಟ್ಟಿ:

ಈ ರೂಪಾಂತರವು ವಿವಿಧ ರೂಪದಲ್ಲಿ ಸಿಗುತ್ತದೆ. ಪ್ಯೂರ್ ರೂ.6,67,890, ಅಡ್ವೆಂಚರ್ ರೂ.7,42,890, ಅಡ್ವೆಂಚರ್ ಪ್ಲಸ್ ರೂ.774,890, ಅಡ್ವೆಂಚರ್ ಎಸ್ ರೂ.7,93,190, ಅಡ್ವೆಂಚರ್ ಪ್ಲಸ್ ಎಸ್ ರೂ.8,38,890, ಅಕಾಂಪ್ಲಿಶ್ಡ್ ಪ್ಲಸ್ ರೂ.8,70,990, ಅಕಂಪ್ಲೀಶ್ಡ್ ಪ್ಲಸ್ ಕ್ಯಾಮೊ ರೂ.8,84,690, ಅಕಾಂಪ್ಲಿಶ್ಡ್ ಪ್ಲಸ್ ಎಸ್ ರೂ.9,14,890 ಮತ್ತು ಅಕಾಂಪ್ಲಿಶ್ಡ್ ಪ್ಲಸ್ ಎಸ್ ಕ್ಯಾಮೊ ರೂ.9,30,390 ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ.

ಪೆಟ್ರೋಲ್ ಚಾಲಿತ ಆಟೋಮೆಟಿಕ್ ಟ್ರಾಸ್ಮಿಷನ್ ರೂಪಾಂತರಗಳ (ವೇರಿಯೆಂಟ್) ಬೆಲೆ ವಿವರ:

ಇದು ಕೂಡ ಹಲವು ವಿಧದಲ್ಲಿ ದೊರೆಯುತ್ತದೆ. ಅಡ್ವೆಂಚರ್ ರೂ.7,10,890, ಅಡ್ವೆಂಚರ್ ಪ್ಲಸ್ ರೂ.7,42,890, ಅಡ್ವೆಂಚರ್ ಎಸ್ ರೂ.8,11,990, ಅಡ್ವೆಂಚರ್ ಪ್ಲಸ್ ಎಸ್ ರೂ.8,06,890, ಅಕಾಂಪ್ಲಿಶ್ಡ್ ಪ್ಲಸ್ ರೂ.8,25,190, ಅಕಾಂಪ್ಲಿಶ್ಡ್ ಪ್ಲಸ್ ಕ್ಯಾಮೊ ರೂ.8,38,890, ಅಕಾಂಪ್ಲಿಶ್ಡ್ ಪ್ಲಸ್ ಎಸ್ ರೂ.8,69,090, ಕ್ರಿಯೇಟಿವ್ ಪ್ಲಸ್ ರೂ.8,69,190, ಕ್ರಿಯೇಟಿವ್ ಪ್ಲಸ್ ಕ್ಯಾಮೊ ರೂ.8,82,990, ಅಕಾಂಪ್ಲಿಶ್ಡ್ ಪ್ಲಸ್ ಎಸ್ ರೂ.8,84,690, ಕ್ರಿಯೇಟಿವ್ ಪ್ಲಸ್ ಎಸ್ ರೂ.9,10,390 ಹಾಗೂ ಕ್ರಿಯೇಟಿವ್ ಪ್ಲಸ್ ಎಸ್ ಕ್ಯಾಮೊ ರೂ.9,24,090 ಎಕ್ಸ್-ಶೋರೂಂ ದರವನ್ನು ಹೊಂದಿದೆ.

Tata Punch Suv Variants Wise New Ex Showroom Price Details

ಈ ಕಾರು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಪಡೆದಿದ್ದು, ನೋಡುಗರನ್ನು ಸೆಳೆಯುತ್ತದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಡುಯಲ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಟ್ರಾಪಿಕಲ್ ಮಿಸ್ಟ್, ಆರ್ಕಸ್ ವೈಟ್, ಡೇಟೋನಾ ಗ್ರೇ, ಟೊರ್ನಾಡೊ ಬ್ಲೂ ಹಾಗೂ ಕ್ಯಾಲಿಪ್ಸೊ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ ಪಂಚ್ ವಿಶಾಲ ಗಾತ್ರದಲ್ಲಿದೆ. 3,827 ಎಂಎಂ ಉದ್ದ, 1,742 ಎಂಎಂ ಅಗಲ ಹಾಗೂ 1,615 ಎಂಎಂ ಎತ್ತರವಿದೆ. 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,445 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 1023 ಕೆಜಿ ತೂಕವಿದೆ.

ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 1.2-ಲೀ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್ ಟ್ರಾಸ್ಮಿಷನ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಟ್ರಾಸ್ಮಿಷನ್ (ಗೇರ್‌ಬಾಕ್ಸ್‌) ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ. 18.8 ರಿಂದ 26.99 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 37 ಲೀಟರ್ ಪೆಟ್ರೋಲ್ & 60 ಲೀಟರ್ ಸಾಮರ್ಥ್ಯದ ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್‍ನ್ನು ಹೊಂದಿದೆ.

ಈ ಕಾರಿನಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸನ್‌ರೂಫ್‌ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Saturday, October 4, 2025, 8:55 [IST]
English summary
Tata punch suv variants wise new ex showroom price details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+