Tata: ಕೊನೆಗೂ ಟಾಟಾ ಬ್ರಹ್ಮಾಸ್ತ್ರ ಅನಾವರಣ: ರಗಡ್ ಲುಕ್‌ನಲ್ಲಿ ಮಿಂಚಿದ ಹೊಸ ಸಿಯೆರಾ ಎಸ್‌ಯುವಿ
ದೇಶೀಯ ಪ್ರಮುಖ ಕಾರು ತಯಾರಕರಾದ ಟಾಟಾ ಮೋಟಾರ್ಸ್ (Tata Motors), ತಮ್ಮ ಬಹು ನಿರೀಕ್ಷಿತ ಸಿಯೆರಾ ಎಸ್‌ಯುವಿಯನ್ನು ಇಂದು ಅನಾವರಣಗೊಳಿಸಿದೆ. ಇದು ಭಾರತದ ಅತ್ಯಂತ ಪ್ರೀತಿಯ SUV ಪರಂಪರೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಹೊಸ ಪೀಳಿಗೆಗಾಗಿ ರೀ-ಡಿಸೈನ್ ಮಾಡಲಾದ ಹೊಸ ಟಾಟಾ ಸಿಯೆರಾ ತನ್ನ ಪರಂಪರೆ ಮತ್ತು ವಿಶಿಷ್ಟ ವಿನ್ಯಾಸವನ್ನು ಹಾಗೇ ಉಳಿಸಿಕೊಂಡು ಅನಾವರಣಗೊಂಡಿದೆ. ಹೊಸ ಟಾಟಾ ಸಿಯೆರಾಗಾಗಿ ಕಾತುರದಿಂದ ಕಾಯುತ್ತಿರುವವರಿಗೆ ನವೆಂಬರ್ 25, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಟಾಟಾ ಮೋಟಾರ್ಸ್ ತಿಳಿಸಿದೆ.
ಹೊಸ ಸಿಯೆರಾದ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸವನ್ನು ಸಂಪೂರ್ಣವಾಗಿ ಅನಾವರಣಗೊಳಿಸಲಾಗಿದೆ. ಟಾಟಾದ ಪೋರ್ಟ್‌ಫೋಲಿಯೊದಲ್ಲಿ ಕರ್ವ್ ಮತ್ತು ಹ್ಯಾರಿಯರ್ ನಡುವೆ ಕುಳಿತಿರುವ ಹೊಸ ಸಿಯೆರಾ ಎಸ್‌ಯುವಿಯು ತನ್ನ ಕ್ಲಾಸಿಕ್ ವಿನ್ಯಾಸ ಸ್ಪರ್ಶಗಳೊಂದಿಗೆ ರೆಟ್ರೊ ಡಿಸೈನ್ ಹಾಗೂ ಆಧುನಿಕ ಥೀಮ್‌ನೊಂದಿಗೆ ಹೊರಹೊಮ್ಮಿದೆ. ಹೊಸ ಸಿಯೆರಾ ಎಸ್‌ಯುವಿಯ ಟಾಪ್ ಹೈಲೆಟ್‌ಗಳನ್ನು ನೋಡೋಣ.

ಹೊಸ ಸಿಯೆರಾ ಡಿಸೈನ್ ವಿಷಯಕ್ಕೆ ಬಂದರೆ, ಮುಂಭಾಗದಲ್ಲಿ ಗ್ಲೋಸ್ ಬ್ಲ್ಯಾಕ್ ಸರೌಂಡ್, ಎಲ್‌ಇಡಿ ಹೆಡ್ ಲ್ಯಾಂಪ್ ಗಳು, ಕನೆಕ್ಟೆಡ್ DRL, 'ಸಿಯೆರಾ' ಬ್ಯಾಡ್ಜ್ ಮತ್ತು ರೇಡಿಯೇಟರ್ ಗ್ರಿಲ್ ಇದೆ. ಸೈಡ್ ಪ್ರೊಫೈಲ್‌ನಲ್ಲಿ ಹೊಸ 19 - ಇಂಚಿನ ಡೈಮಂಡ್ - ಕಟ್ ಅಲಾಯ್ ವ್ಹೀಲ್‌ಗಳು, ಬಾಗಿದ ವಿಂಡೋಗಳು, ಕ್ಲಾಮ್ ಶೆಲ್ ಬಾನೆಟ್, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ಶೈನಿಂಗ್ ಬ್ಲಾಕ್ ರೂಫ್ ಕಾರಿಗೆ ಐಷಾರಾಮಿ ಲುಕ್ ನೀಡುತ್ತದೆ.
ಹಿಂಭಾಗದಲ್ಲಿ ಇದು ಕನೆಕ್ಟೆಡ್ ಟೈಲ್ ಲ್ಯಾಂಪ್‌ಗಳೊಂದಿಗೆ ದೊಡ್ಡ ರೂಫ್ ಸ್ಪಾಯ್ಲರ್ ಮತ್ತು ಕೆಳ ತುದಿಯಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್‌ನೊಂದಿಗೆ ಹೊಳೆಯುವ ಬ್ಲಾಕ್ ಕ್ಲಾಡಿಂಗ್ ಪಡೆದಿದೆ. ಒಟ್ಟಾರೆ ವಿನ್ಯಾಸವು ತನ್ನ ಪರಂಪರೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಭವಿಷ್ಯಕ್ಕಾಗಿ ರೂಪಿಸಲಾದ ಸ್ಪೋರ್ಟಿ ಡಿಸೈನ್ ಹೊಂದಿದೆ. ಇದು ತನ್ನ ವಿಭಾಗದಲ್ಲಿಯೇ ಅತ್ಯಂತ ರಗಡ್ ಲುಕ್ ಪಡೆದುಕೊಂಡಿದೆ ಎಂದು ಹೇಳಬಹುದು.

ಹೊಸ ಸಿಯೆರಾ ಇಂಟೀರಿಯರ್‌ನಲ್ಲಿ ಡ್ಯುಯಲ್ - ಟೋನ್ ಕಪ್ಪು-ಬಿಳುಪು ಒಳಾಂಗಣವನ್ನು ನೋಡಬಹುದು. 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 12.3 - ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಮತ್ತು ಪ್ರಯಾಣಿಕರ ಮನರಂಜನಾ ಸ್ಕ್ರೀನ್ ಒಳಗೊಂಡಿರುವ ತ್ರಿಬಲ್ - ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ. ಬ್ಯಾಕ್ ಲಿಟ್ ಲೋಗೋದೊಂದಿಗೆ 4-ಸ್ಪೋಕ್ ಗ್ಲೋಸ್ ಬ್ಲ್ಯಾಕ್ ಸ್ಟೀರಿಂಗ್ ವೀಲ್ ಪ್ರೀಮಿಯಂ ಆಗಿ ಕಾಣುತ್ತದೆ.
ಬಿಡುಗಡೆ ನಂತರದ ನಿರೀಕ್ಷೆಗಳು
ಟಾಟಾ ಮೋಟಾರ್ಸ್ ಸಿಯೆರಾದ ಬೆಲೆಯನ್ನು ರೂ17 ಲಕ್ಷದಿಂದ ನಿರೀಕ್ಷಿಸಲಾಗಿದೆ, ಟಾಪ್-ಎಂಡ್ ಬೆಲೆ ಸುಮಾರು ರೂ.22 ಲಕ್ಷವಿರಬಹುದು. ಹೊಸ ಸಿಯೆರಾ ಎಸ್‌ಯುವಿ ಸುರಕ್ಷತೆ ವಿಷಯಕ್ಕೆ ಬಂದರೆ, ಲೆವೆಲ್ 2 ADAS ಸೂಟ್, 360 - ಡಿಗ್ರಿ ಕ್ಯಾಮೆರಾ, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಟೋ-ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಪಡೆಯುವ ನಿರೀಕ್ಷೆಯಿದೆ.

ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್ಪ್ಲೇ ಮತ್ತು ಸೌಂಡ್‌ಬಾರ್ ನೊಂದಿಗೆ 12-ಸ್ಪೀಕರ್ ಜೆಬಿಎಲ್ ಬ್ಲ್ಯಾಕ್ ಸೌಂಡ್ ಸಿಸ್ಟಮ್, ಪವರ್ರ್ಡ್ ಟೈಲ್ ಗೇಟ್, ಪವರ್ ಡ್ರೈವರ್ ಸೀಟ್, ರಿಯರ್ ವ್ಯೂ ಮಿರರ್ ಒಳಗೆ ಆಟೋ-ಡಿಮ್ಮಿಂಗ್ ಇನ್ ಸೈಡ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್ಲೆಸ್ ಚಾರ್ಜರ್, ರಿಯರ್ ಸನ್ ಶೇಡ್ಸ್, ಡ್ರೈವ್ ಮೋಡ್‌ಗಳು ಮತ್ತು ಆಂಬಿಯೆಂಟ್ ಲೈಟಿಂಗ್ ಒಳಗೊಂಡಿರುವ ಸಾಧ್ಯತೆಯಿದೆ.
ಹೊಸ ಟಾಟಾ ಸಿಯೆರಾದ ಪವರ್ ಟ್ರೇನ್ ಆಯ್ಕೆಗಳನ್ನು ಬಹಿರಂಗಪಡಿಸದಿದ್ದರೂ, ಇದು ಹೊಚ್ಚ ಹೊಸ 1.5-ಲೀಟರ್ ಟಿ-ಜಿಡಿಐ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಎರಡೂ ಎಂಜಿನ್‌ಗಳು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ಪಡೆಯಬಹುದು.


Click it and Unblock the Notifications








