Tesla: ಮೊದಲ ಟೆಸ್ಲಾ ಮಾಡೆಲ್ ವೈ ಕಾರು ವಿತರಣೆ.. ಇವರೇ ನೋಡಿ ಗ್ರಾಹಕ.. ಯಾರೀತ?

ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla), ಮುಂಬೈನಲ್ಲಿ ದೇಶದ ಪ್ರಪ್ರಥಮ ಕಾರು ಶೋರೂಂನ್ನು ಜುಲೈ 15 ರಂದು ತೆರೆದಿತ್ತು. ಅದೇ ಸಮಾರಂಭದಲ್ಲಿ ಮಾಡೆಲ್ ವೈ (Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಸದ್ಯ, ಈ ಕಾರನ್ನು ಮೊದಲ ಗ್ರಾಹಕರಿಗೂ ವಿತರಿಸಿದೆ. ಅವರು ಕೂಡ ನೂತನ ಕಾರನ್ನು ಸಂಭ್ರಮದಿಂದ ಡೆಲಿವರಿ ತೆಗೆದುಕೊಂಡಿದ್ದಾರೆ.

ಸ್ವತಃ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್‌ ಸರ್‌ನಾಯಕ್ (Pratap Sarnaik) ಅವರು, ನೂತನ ಟೆಸ್ಲಾ ಮಾಡೆಲ್ ವೈ (Tesla Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 'ದೇಶದ ಮೊದಲ ಟೆಸ್ಲಾ ಕಾರನ್ನು ವಿತರಣೆ ಪಡೆದಿರುವುದು ತುಂಬಾ ಸಂತಸ ತಂದಿದೆ. ಇದು ಹೆಮ್ಮೆಯ ವಿಚಾರವಾಗಿದೆ. ಈ ಕಾರಿಗೆ ವಿಶೇಷವಾಗಿ ಯಾವುದೇ ರಿಯಾಯಿತಿ ಲಭ್ಯವಾಗಿಲ್ಲ. ಪೂರ್ಣ ಮೊತ್ತ ಪಾವತಿಸಿ, ಕೊಂಡುಕೊಂಡಿದ್ದೇನೆ' ಎಂದು ಹೇಳಿದ್ದಾರೆ.

Tesla Delivers First Model Y Electric Suv In India Details

ಟೆಸ್ಲಾ ಮಾಡೆಲ್ ವೈ ವಿಶೇಷತೆಗಳೇನು:

ಈ ಎಸ್‌ಯುವಿಯು ರೂ.59.89 ಲಕ್ಷದಿಂದ ರೂ.67.89 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಹಾಗೂ ಲಾಂಗ್ ರೇಂಜ್ ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಎಂಬ 2 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಈವರೆಗೆ, 600ಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಕಂಪನಿಯು ವಾರ್ಷಿಕ 2,500 ಯುನಿಟ್‌ಗಳನ್ನು ಮಾರಾಟಗೊಳಿಸಲು ಉದ್ದೇಶಿಸಿದೆ.

ಹೊಸ ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಎಸ್‌ಯುವಿಯು ಹೊರಭಾಗದಲ್ಲಿ ತುಂಬಾ ಅಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳು, ಲೈಟ್ ಬಾರ್‌ನಿಂದ ಕನೆಕ್ಟ್ ಆಗಿರುವ ಎಲ್ಇಡಿ ಡಿಆರ್‌ಎಲ್‌ಗ‌ಳು, ಟೈಲ್‌ಲ್ಯಾಂಪ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು 19 ಇಂಚಿರುವ ಅಲಾಯ್ ವೀಲ್‌ಗಳನ್ನು ಪಡೆದಿದೆ. ಪರ್ಲ್ ವೈಟ್, ಡೀಪ್ ಬ್ಲೂ ಮೆಟಾಲಿಕ್, ಅಲ್ಟ್ರಾ ರೆಡ್ ಹಾಗೂ ಡೈಮಂಡ್ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Tesla Delivers First Model Y Electric Suv In India Details

ಇದು ವಿಶಾಲವಾಗಿಯೂ ಇದೆ. 4,797 ಎಂಎಂ ಉದ್ದ, 1,982 ಎಂಎಂ ಅಗಲ ಹಾಗೂ 1,624 ಎಂಎಂ ಎತ್ತರ ಕೂಡ ಇದೆ. ಇದರೊಂದಿಗೆ 167 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ ಮತ್ತು 2,890 ವೀಲ್‌ಬೇಸ್‌ನ್ನು ಪಡೆದಿದೆ. 2,003 ಕೆಜಿ ವರೆಗೆ ತೂಕವಿದೆ.

ಈ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 854 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.

ನೂತನ ಟೆಸ್ಲಾ ಮಾಡೆಲ್ ವೈ ಎಸ್‌ಯುವಿ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 60 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 500 ರಿಂದ 622 ಕಿಲೋಮೀಟರ್‌ ರೇಂಜ್ (ಮೈಲೇಜ್) ನೀಡುತ್ತದೆ. 200 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 6.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಇದರ ಒಳಭಾಗದ ಕ್ಯಾಬಿನ್ ವಿನ್ಯಾಸವು ಅತ್ಯಾಧುನಿಕವಾಗಿದೆ. 15.4 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಪೈಲಟ್, ಓವರ್-ದಿ-ಏರ್ ಅಪ್ಡೇಟ್, ವೆಂಟಿಲೇಟೆಡ್ - ಹೀಟೆಡ್ ಫ್ರಂಟ್ ಸೀಟ್‌ಗಳು, 9 ಸ್ಪೀಕರ್ ಸೌಂಡ್ ಸಿಸ್ಟಮ್, ಏರ್ ಪ್ಯೂರಿಫೈಯರ್, ಕನೆಕ್ಟ್ಡ್ ಕಾರ್ ಟೆಕ್‌ ಹಾಗೂ ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ - ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಡ್ಯಾಶ್‌ಕ್ಯಾಮ್ ಮತ್ತು 360 ಡಿಗ್ರಿ ಕ್ಯಾಮೆರಾ ಒಳಗೊಂಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Friday, September 5, 2025, 17:13 [IST]
English summary
Tesla delivers first model y electric suv in india details
Read more on tesla india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+