ಟೆಸ್ಲಾದ ಶೋರೂಂ ಲೋಕಾರ್ಪಣೆ: ಅಮೆರಿಕದ ಅಂಬಾರಿ ಭಾರತಕ್ಕೆ.. ಮೊದಲ ಕಾರು ಬಿಡುಗಡೆ.. ಬೆಲೆ ಎಷ್ಟು?

ಅಮೆರಿಕ ಮೂಲದ ಟೆಸ್ಲಾ (Tesla) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಒಡೆತನದಲ್ಲಿದೆ. ಜಾಗತಿಕವಾಗಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪನ್ನು ಮಾಡಿಸಿದೆ. ಮಾಡೆಲ್ ವೈ, ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಮತ್ತು ಸೈಬರ್‌ಟ್ರಕ್ ಒಳಗೊಂಡಂತೆ ಹತ್ತಾರು ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಭಾರತಕ್ಕೂ ಅಧಿಕೃತವಾಗಿ ಪ್ರವೇಶಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಮೇಕರ್ ಮ್ಯಾಕ್ಸಿಟಿ ಮಾಲ್‌ನಲ್ಲಿ ಟೆಸ್ಲಾ ಕಂಪನಿಯು ದೇಶದ ಮೊದಲ ಕಾರು ಶೋರೂಂನ್ನು ಲೋಕಾರ್ಪಣೆಗೊಳಿಸಿದೆ. ಇದರೊಂದಿಗೆ ಭಾರತದ ಕಾರು ಮಾರುಕಟ್ಟೆಗೂ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದೆ. ಪ್ರಪ್ರಥಮ ಕಾರಾಗಿ ಮಾಡೆಲ್ ವೈ (Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ.

Tesla First Showroom Opened In Mumbai Model Y Suv Launched Price And Features Details

ಟೆಸ್ಲಾ ಮಾಡೆಲ್ ವೈ (Tesla Model Y) ಕಾರು ದುಬಾರಿ ಬೆಲೆಯನ್ನು ಹೊಂದಿದೆ. ಇದರ ಆರ್‌ಡಬ್ಲ್ಯೂಡಿ ರೂಪಾಂತರ ರೂ.59.89 ಹಾಗೂ ಲಾಂಗ್ ರೇಂಜ್ ಆರ್‌ಡಬ್ಲ್ಯೂಡಿ ರೂಪಾಂತರ ರೂ.67.8 ಲಕ್ಷ ದರವನ್ನು ಪಡೆದಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ವಿದೇಶದಿಂದ ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತದೆ.

ನೂತನ ಕಾರು ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಅದು ಪ್ರತಿಯೊಬ್ಬರನ್ನು ಈ ಎಸ್‌ಯುವಿಯತ್ತ ತಿರುಗಿ ನೋಡುವಂತೆ ಮಾಡುತ್ತದೆ. ಅದಕ್ಕೆ ತಕ್ಕಂತೆ ಫುಲ್ ಎಲ್ಇಡಿ ಲೈಟಿಂಗ್ ಮತ್ತು ಕನೆಕ್ಟ್ಡ್ ಟೈಲ್‌ಲ್ಯಾಂಪ್‌ನ್ನು ಪಡೆದಿದೆ. ಪರ್ಲ್ ವೈಟ್, ಸ್ಟೆಲ್ತ್ ಗ್ರೇ, ಡೀಪ್ ಬ್ಲೂ ಮೆಟಾಲಿಕ್, ಅಲ್ಟ್ರಾ ರೆಡ್, ಕ್ವಿಕ್‌ಸಿಲ್ವರ್ ಮತ್ತು ಡೈಮಂಡ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Tesla First Showroom Opened In Mumbai Model Y Suv Launched Price And Features Details

ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಎಸ್‌ಯುವಿಯು 4,797 ಎಂಎಂ ಉದ್ದ, 1,982 ಎಂಎಂ ಅಗಲ ಮತ್ತು 1,624 ಎಂಎಂ ಎತ್ತರವು ಇದೆ. ಜೊತೆಗೆ 167 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ 2,890 ವೀಲ್‌ಬೇಸ್ ಹಾಗೂ 19-ಇಂಚಿರುವ ವೀಲ್‌ಗಳನ್ನು ಪಡೆದಿದೆ. ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 854 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ದೇಶೀಯವಾಗಿ ಬಿಡುಗಡೆಗೊಂಡಿರುವ ನೂತನ ಮಾಡೆಲ್ ವೈ ಕಾರು, 60 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) & 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 500 ರಿಂದ 622 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡಲಿದೆ.

Tesla First Showroom Opened In Mumbai Model Y Suv Launched Price And Features Details

ಈ ಎಲೆಕ್ಟ್ರಿಕ್ ಎಸ್‌ಯುವಿಯು 200 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 6.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಇದು ದೊಡ್ಡ ಗಾತ್ರದ 15.4-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಪೈಲಟ್ ಹಾಗೂ ಓವರ್-ದಿ-ಏರ್ ಅಪ್ಡೇಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಒಟ್ಟಾರೆಯಾಗಿ 'ಟೆಸ್ಲಾ ಮಾಡೆಲ್ ವೈ' ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಈ ಕಾರು ಹೆಚ್ಚು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರನ್ನು ಸೆಳೆಯುವ ನಿರೀಕ್ಷೆಯೂ ಇದೆ. ಹಾಗೆಯೇ ಟೆಸ್ಲಾ ಕಂಪನಿಯು ಮುಂಬೈ ಬಳಿಕ, ನವದೆಹಲಿಯಲ್ಲಿಯೂ ನೂತನ ಶೋರೂಂನ್ನು ತೆರಯಲು ಉದ್ದೇಶಿಸಿದೆ. ಆ ನಂತರದಲ್ಲಿ ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ಹಾಗೂ ಚೆನ್ನೈ ಮಹಾನಗರಗಳಲ್ಲಿ ಶೋರೂಂನ್ನು ಆರಂಭ ಮಾಡಲಿದೆ ಎನ್ನಲಾಗಿದೆ.

Article Published On: Tuesday, July 15, 2025, 11:48 [IST]
English summary
Tesla first showroom opened in mumbai model y suv launched price and features details
Read more on tesla india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+