Tesla: ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೆ ಸಜ್ಜು: ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿತ್ತು!

ಕಳೆದ ಕೆಲವು ವರ್ಷಗಳಿಂದ ಟೆಸ್ಲಾ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂಬ ವರದಿಗಳಿವೆ. ಜೊತೆಗೆ ಟೆಸ್ಲಾ (Tesla) ಇತ್ತೀಚೆಗೆ ಮುಂಬೈ ಮತ್ತು ದೆಹಲಿಯಲ್ಲಿ ತನ್ನ ಶೋರೂಂಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸುದ್ದಿ ಕೂಡ ಹರಿದಾಡುತ್ತಿದೆ. ಇದಲ್ಲದೆ ನೀವು ಟೆಸ್ಲಾ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಅಥವಾ ಅದರ ಲಿಂಕ್ಡ್ಇನ್ ಪುಟವನ್ನು ನೋಡಿದರೆ, ಅದರ ಮುಂಬೈ ಶೋರೂಂಗಾಗಿ ಪಟ್ಟಿ ಮಾಡಲಾದ 13 ಉದ್ಯೋಗಾವಕಾಶಗಳನ್ನು ನೀವು ಕಾಣಬಹುದು. ಇವೆಲ್ಲವು ಟೆಸ್ಲಾ ಭಾರತಕ್ಕೆ ಎಂಟ್ರಿಕೊಡುವ ಬಗ್ಗೆ ಸುಳಿವು ನೀಡುತ್ತವೆ. ಇದೆಲ್ಲಕ್ಕಿಂತ ಮತ್ತಷ್ಟು ಪುಷ್ಟಿ ಕೊಡುವ ಸುದ್ದಿಯೆಂದರೆ ಮೊನ್ನೆಯಷ್ಟೆ ಟೆಸ್ಲಾ ಕಾರಿನ ಟೆಸ್ಟಿಂಗ್ ಭಾರತದಲ್ಲಿ ನಡೆದಿರುವುದು.

ಎಲೋನ್ ಮಸ್ಕ್ ಭಾರತದಲ್ಲಿ ಆಮದು ಸುಂಕದೊಂದಿಗೆ ಅವರು ಹೊಂದಿದ್ದ ಸಮಸ್ಯೆಗಳ ಬಗ್ಗೆ ಈ ಹಿಂದೆಯೇ ಧ್ವನಿ ಎತ್ತಿದ್ದರು. ಆದರೆ ಕೊನೆಗೂ ಇವೆಲ್ಲವನ್ನು ದಾಟಿ ಟೆಸ್ಲಾ ಮಾಡೆಲ್ ವೈ (Tesla Model Y) ಇತ್ತೀಚೆಗೆ ಭಾರತದಲ್ಲಿ ರೋಡ್ ಟೆಸ್ಟ್‌ಗೆ ಒಳಗಾಗುತ್ತಿರುವುದು ಕಂಡುಬಂದಿದೆ. ಟೆಸ್ಲಾ ಅಂತಿಮವಾಗಿ ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವುದು ಬಹುತೇಕ ಖಚಿತವಾಗಿದೆ.

tesla-model-y-again-spotted-in-india-exterior-and-interior-details

ಭಾರತ ಸರ್ಕಾರವು ತನ್ನ ಇವಿ ನೀತಿಯನ್ನು ಘೋಷಿಸಿದ ನಂತರ ಇದೆಲ್ಲವೂ ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ. ಇದರ ಭಾಗವಾಗಿ, ಕಾರು ಕಂಪನಿ ಭಾರತದಲ್ಲಿ 500 ಮಿಲಿಯನ್ ಡಾಲರ್ (4,150 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಭರವಸೆ ನೀಡಿದರೆ, 40,000 ಡಾಲರ್ (ಸುಮಾರು 35 ಲಕ್ಷ ರೂ.) ಗಿಂತ ಹೆಚ್ಚಿನ ಬೆಲೆಯ ವಾಹನಗಳ ಮೇಲಿನ ಆಮದು ಸುಂಕವನ್ನು ಶೇ 110% ರಿಂದ ಶೇ 70% ಕ್ಕೆ ಇಳಿಸುವುದಾಗಿ ಭಾರತ ಸರ್ಕಾರ ಘೋಷಿಸಿದೆ.

ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಸ್ಥಳೀಯ ಉತ್ಪಾದನೆಯು ಟೆಸ್ಲಾಗೆ ತನ್ನ ಕಾರುಗಳಿಗೆ ಸ್ಪರ್ಧಾತ್ಮಕ ಬೆಲೆ ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ. ಒಟ್ಟಾರೆ ಕಳೆದ ಹಲವು ವರ್ಷಗಳಿಂದ ಟೆಸ್ಲಾವನ್ನು ಭಾರತಕ್ಕೆ ತರುವ ಗುರಿಯು ಮುಂದಿನ ಕೆಲವೇ ವರ್ಷಗಳಲ್ಲಿ ನಿಜವಾಗಲಿದೆ.

tesla-model-y-again-spotted-in-india-exterior-and-interior-details

ಪರೀಕ್ಷೆ ವೇಳೆ ಕಾಣಿಸಿಕೊಂಡ ಕಾರು: ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ವೊಂದರಲ್ಲಿ, ಸಾರ್ವಜನಿಕ ರಸ್ತೆಗಳಲ್ಲಿ ಹೆಚ್ಚು ಮರೆಮಾಚಲ್ಪಟ್ಟ ಟೆಸ್ಲಾ ಮಾಡೆಲ್ ವೈ ಅನ್ನು ಪರೀಕ್ಷಿಸುತ್ತಿರುವುದು ಕಂಡುಬಂದಿದೆ. ಮುಂಭಾಗದ ಡಿಸೈನ್, ಬಾನೆಟ್ ಮತ್ತು ಸ್ಪ್ಲಿಟ್-ಎಲ್ಇಡಿ ಲ್ಯಂಪ್‌ಗಳು ಇದನ್ನು ಮಾಡಲ್‌ ವೈ ಎಂದು ಗುರ್ತಿಸುವ ಪ್ರಮುಖ ಅಂಶಗಳಾಗಿವೆ.

ಇದಲ್ಲದೆ ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಪ್ಯಾನಲ್, ಲೈಟ್ ಬಾರ್ ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕ ಹೊಂದಿರುವುದನ್ನು ಎತ್ತಿ ತೋರುತ್ತದೆ. ಬ್ಲಾಕ್ ಅಲಾಯ್ ವೀಲ್‌ಗಳು ಹಾಗೂ ರೂಫ್ ಹಿಂಭಾಗದ ಕಡೆಗೆ ಇಳಿಜಾರಿನ ‌ಡಿಸೈನ್‌, ಬೂಟ್ಲಿಡ್-ಮೌಂಟೆಡ್ ಸ್ಪಾಯ್ಲರ್ ಒಟ್ಟಾರೆಯಾಗಿ, ಇದು ಜಾಗತಿಕ ಟೆಸ್ಲಾ ಮಾಡಲ್‌ ವೈನ ಇತ್ತೀಚಿನ ಡಿಸೈನ್ ಅನ್ನು ಪ್ರತಿನಿಧಿಸುತ್ತದೆ.

tesla-model-y-again-spotted-in-india-exterior-and-interior-details

ಕಾರಿನ ವಿಶೇಷತೆಗಳು: ಟೆಸ್ಲಾ ಮಾಡೆಲ್ ವೈ ವಿವರಗಳಿಗೆ ಬಂದರೆ, ಭಾರತದಲ್ಲಿ ಅಮೆರಿಕಾದ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಯ ಮೊದಲ ಕೊಡುಗೆಗಳಲ್ಲಿ ಒಂದಾಗಿದೆ. ಯಾವುದೇ ಒಳಾಂಗಣದ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ, ಇದನ್ನು ಜಾಗತಿಕವಾಗಿ ಲಭ್ಯವಿರುವ ಮಾದರಿಯಂತೆಯೇ ನೀಡಲಾಗುವುದು ಎಂದು ನಿರೀಕ್ಷಲಾಗಿದೆ. ಇದು ಸಿಂಗಲ್ ಅಥವಾ ಡ್ಯುಯಲ್ - ಟೋನ್ ಕ್ಯಾಬಿನ್ ಥೀಮ್ ಹೊಂದಿರುವ ಕ್ಯಾಬಿನ್ ಹೊಂದಿದೆ.

ಫೀಚರ್‌ಗಳ ಬಗ್ಗೆ ಹೇಳುವುದಾದರೆ, ಇದು ಡ್ಯಾಶ್‌ಬೋರ್ಡ್‌ನಲ್ಲಿ 15.4 - ಇಂಚಿನ ಟಚ್ಸ್ಕ್ರೀನ್ ಜೊತೆಗೆ ಡ್ರೈವರ್ ಆರ್ಮ್‌ರೆಸ್ಟ್ ಹಿಂಭಾಗದಲ್ಲಿ 8 ಇಂಚಿನ ಹಿಂಭಾಗದ ಸ್ಕ್ರೀನ್‌ನೊಂದಿಗೆ ಬರುತ್ತದೆ. ಆಂಬಿಯೆಂಟ್ ಲೈಟಿಂಗ್, ಪೂರ್ಣ-ಅಗಲದ ಪನೋರಮಿಕ್ ಗ್ಲಾಸ್ ರೂಫ್, ಎರಡು ವೈರ್ ಲೆಸ್ ಫೋನ್ ಚಾರ್ಜರ್ ಗಳು ಮತ್ತು ಹಿಂಭಾಗದಲ್ಲಿ ಕ್ಲೈಮೆಟ್ ಕಂಟ್ರೋಲ್ ಮತ್ತು ವೆಂಟಿಲೇಟೆಡ್ ಪವರ್ಡ್ ಸೀಟ್‌ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

ಮಾಡೆಲ್ ವೈ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದ್ರೆ, ಮಲ್ಟಿಪಲ್ ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ), ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು 360 ಡಿಗ್ರಿ ಕ್ಯಾಮೆರಾದಂತಹ ಈ ವರ್ಗದ ಕಾರಿನಿಂದ ನಿರೀಕ್ಷಿಸಲಾದ ಸಾಮಾನ್ಯ ಸುರಕ್ಷತಾ ಕಿಟ್ ಅನ್ನು ಸಹ ಇದು ಪಡೆಯುತ್ತದೆ.

ಇವೆಲ್ಲದರ ಜೊತೆಗೆ ಜಾಗತಿಕವಾಗಿ ಸದ್ದು ಮಾಡಿರುವ ADAS ಫೀಚರ್‌ಗಳ ಸೂಟ್ ಒಳಗೊಂಡಿದೆ. ಇದು ಕಾರಿಗೆ ಸ್ವಾಯತ್ತವಾಗಿ ಚಾಲನೆ ಮಾಡಲು ಮತ್ತು ಬ್ರೇಕಿಂಗ್, ವೇಗವರ್ಧನೆ ಮತ್ತು ಸ್ಟೀರಿಂಗ್ ನಂತಹ ಕ್ರಿಯೆಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇವೆಲ್ಲವು ಭಾರತೀಯ ಮಾದರಿಯಲ್ಲಿ ಇರಲಿವೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

ಟೆಸ್ಲಾ ಮಾಡಲ್ ವೈ ಕಾರನ್ನು ಅಂತರರಾಷ್ಟ್ರೀಯವಾಗಿ, ಮೂರು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಆರ್‌ಡಬ್ಲ್ಯುಡಿ ಮತ್ತು ಲಾಂಗ್ ರೇಂಜ್ ಎಡಬ್ಲ್ಯುಡಿ ವೇರಿಯೆಂಟ್‌ಗಳನ್ನು ಇಲ್ಲಿ ಪಡೆಯುವ ನಿರೀಕ್ಷೆಯಿದೆ. ಮೊದಲನೆಯದನ್ನು 59 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನೊಂದಿಗೆ ನೀಡಲಾಗುವುದು, ಇದು 455 ಕಿ.ಮೀ ರೇಂಜ್ ನೀಡಬಹುದು.

ಭಾರತದಲ್ಲಿ ಮಾರಾಟವಾಗುವ ಮಾಡೆಲ್ ವೈ ಪವರ್‌ಫುಲ್ ಮೋಟರ್ ನೊಂದಿಗೆ 231 ಬಿಹೆಚ್ ಪವರ್ ಮತ್ತು 380 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದಲ್ಲದೆ, ಕಂಪನಿಯು ಲಾಂಗ್ ರೇಂಜ್ ಎಡಬ್ಲ್ಯುಡಿ ವೇರಿಯೆಂಟ್ ಅನ್ನು ಸಹ ನೀಡಲಿದೆ, ಇದು ಡ್ಯುಯಲ್ ಎಲೆಕ್ಟ್ರಿಕ್ ಮೋಟರ್ ಗಳೊಂದಿಗೆ ಬರಲಿದೆ, ಇದು 441 ಬಿಹೆಚ್ ಪವರ್ ಮತ್ತು 493 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಮಾದರಿಯು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 662 ಕಿ.ಮೀ ರೇಂಜ್ ನೀಡಲಿದೆ. ಇದು ಬರೋಬ್ಬರಿ 75 ರಿಂದ 82 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಲಿದೆ. ವರದಿಗಳ ಪ್ರಕಾರ, ಟೆಸ್ಲಾ ಮುಂದಿನ ಕೆಲವು ತಿಂಗಳುಗಳಲ್ಲಿ ಮಾಡೆಲ್ ವೈ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಬೆಲೆಗಳ ಪ್ರಕಾರ, ಇದನ್ನು 60 ರಿಂದ 70 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಪರಿಚಯಿಸಬಹುದು ಎಂದು ವರದಿಗಳು ತಿಳಿಸಿವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಟೆಸ್ಲಾ ಭಾರತಕ್ಕೆ ಬರುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಕಾರು ತಯಾರಕರು ಉದ್ಯೋಗಾವಕಾಶಗಳನ್ನು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ, ಅದರ ಪರೀಕ್ಷಾ ಮಾದರಿಗಳನ್ನು ಭಾರತೀಯ ರಸ್ತೆಗಳಲ್ಲಿ ಗುರುತಿಸಲಾಗಿದೆ. ಮತ್ತೊಮ್ಮೆ ಹೊಸ ಟೆಸ್ಲಾ ಮಾಡೆಲ್ ವೈ ಅನ್ನು ಭಾರತದಲ್ಲಿ ಭಾರಿ ಮರೆಮಾಚುವಿಕೆಯಲ್ಲಿ ಪರೀಕ್ಷಿಸಲಾಯಿತು. ಇದು ಭಾರತದಲ್ಲಿ ಬಿಡುಗಡೆಯಾದಲ್ಲಿ ಹಲವು ವಾಹನ ತಯಾರಕ ಕಂಪನಿಗಳಿಗೆ ತೀವ್ರ ಪೈಪೋಟಿ ನೀಡುವುದು ಖಚಿತ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, April 25, 2025, 16:06 [IST]
English summary
Tesla model y again spotted in india exterior and interior details
Read more on tesla india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+